32MP ಸೆಲ್ಫಿ ಕ್ಯಾಮೆರಾದ Vivo X100 Series ಬಿಡುಗಡೆ! ಬೆಲೆ ಮತ್ತು ಫೀಚರ್‌ಗಳೇನು ತಿಳಿಯಿರಿ | Tech News
ಭಾರತದಲ್ಲಿ Vivo X100 ಮತ್ತು Vivo X100 Pro ಇಂದು ಅಧಿಕೃತವಾಗಿ ಬಿಡುಗಡೆಯಾಗಿದೆ.
32MP ಸೆಲ್ಫಿ ಕ್ಯಾಮೆರಾ ಮತ್ತು Dimensity 9300 ಪ್ರೊಸೆಸರ್ನೊಂದಿಗೆ 63,999 ರೂಗಳಿಗೆ ಬಿಡುಗಡೆಯಾಗಿದೆ.
ಭಾರತದಲ್ಲಿ ಬಹು ನಿರೀಕ್ಷಿತ ವಿವೋ ಕಂಪನಿಯ ಲೇಟೆಸ್ಟ್ ಸ್ಮಾರ್ಟ್ಫೋನ್ Vivo X100 Series ಇಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ಕಂಪನಿ ಈ ಸರಣಿಯಲ್ಲಿ ಒಟ್ಟು ಎರಡು Vivo X100 ಮತ್ತು Vivo X100 Pro ಎಂಬ ವೇರಿಯೆಂಟ್‌ಗಳಲ್ಲಿ ಅನಾವರಣಗೊಳಿಸಿದೆ. ಈ ಎರಡು ಫೋನ್‌ಗಳು ಮೀಡಿಯಾಟೆಕ್ Dimensity 9300 ಪ್ರೊಸೆಸರ್ನೊಂದಿಗೆ 32MP ಫ್ರಂಟ್ ಕ್ಯಾಮೆರಾವನ್ನು ಹೊಂದಿದ್ದು ಈ ಮೂಲಕ ಉತ್ತಮ ಪರ್ಫಾರ್ಮೆನ್ಸ್ ಮತ್ತು ಅತ್ಯುತ್ತಮ ಸೆಲ್ಫಿಗಳನ್ನು ನೀಡುವಲ್ಲಿ ಯಶಸ್ಸನ್ನು ಪಡೆಯಲಿದೆ. ಹಾಗಾದ್ರೆ ಸಮಯ ವ್ಯರ್ಥ ಮಾಡದೇ ಈ ಸ್ಮಾರ್ಟ್ಫೋನ್‌ಗಳ ಪ್ರಮುಖ ಫೀಚರ್ಸ್ ಮತ್ತು ಭಾರತದಲ್ಲಿನ ಬೆಲೆ ಎಷ್ಟು ಎನ್ನುವ ಮಾಹಿತಿಯನ್ನು ಪಡೆಯೋಣ.
Also Read: WhatsApp ಶೀಘ್ರದಲ್ಲೇ ನಂಬರ್‌ಗಳ ಬದಲಿಗೆ Username ಬಳಸುವ ಹೊಸ ಫೀಚರ್ ಪರಿಚಯಿಸಲಿದೆ!
Vivo X100 ಮತ್ತು Vivo X100 Pro ಬೆಲೆ ಎಷ್ಟು?
ಈ ಸ್ಮಾರ್ಟ್‌ಫೋನ್‌ಗಳು ಈಗ ಪ್ರಿ-ಬುಕಿಂಗ್‌ಗಾಗಿ ತೆರೆದಿದೆ ಅಲ್ಲದೆ ವಿಜಯ್ ಸೇಲ್ಸ್, ರಿಲಯನ್ಸ್ ಡಿಜಿಟಲ್, ಕ್ರೋಮಾ, ಜಿಯೋ ಡಿಜಿಟಲ್ ಸ್ಟೋರ್‌ಗಳಂತಹ ಆಫ್‌ಲೈನ್ ಮತ್ತು ಆನ್‌ಲೈನ್ ಸ್ಟೋರ್‌ಗಳ ಮೂಲಕ ಮಾಡಬಹುದಾಗಿದೆ. ಮುಖ್ಯವಾಗಿ ಆನ್ಲೈನ್ ಫ್ಲಿಪ್‌ಕಾರ್ಟ್ ಮೂಲಕ ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ. ICICI ಮತ್ತು SBI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಮಾಡಿದ ಪಾವತಿಗಳೊಂದಿಗೆ ಗ್ರಾಹಕರಿಗೆ ಶೇಕಡಾ 10% ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಗ್ರಾಹಕರು ವಿನಿಮಯ ರೂಪದಲ್ಲೂ ಇದನ್ನು ಪಡೆಯಲು ಸುಮಾರು ರೂ 8,000 ವರೆಗೆ ರಿಯಾಯಿತಿ ಪಡೆಯಬಹುದು.
Vivo X100 ಫೋನ್ 12GB RAM + 256GB ಸ್ಟೋರೇಜ್ ಬೆಲೆ 63,999 ರೂಗಳು.
Vivo X100 ಫೋನ್ 16GB RAM + 512GB ಸ್ಟೋರೇಜ್ ಬೆಲೆ 69,999 ರೂಗಳು.
Vivo X100 Pro ಫೋನ್ 16GB RAM + 512GB ಸ್ಟೋರೇಜ್ ಬೆಲೆ 89,999 ರೂಗಳು.
Vivo X100 ಮತ್ತು Vivo X100 Pro ಡಿಸ್ಪ್ಲೇ ಮಾಹಿತಿ
ಮೊದಲಿಗೆ ಈ ಎರಡು ಸ್ಮಾರ್ಟ್ಫೋನ್ಗಳು 8T LTPO ಕಣ್ಣುಗಳ ಪ್ರೊಟೆಕ್ಷನ್ ಟೆಕ್ನಾಲಜಿಯೊಂದಿಗೆ AMOLED ಡಿಸ್ಪ್ಲೇಯನ್ನು 6.78 ಇಂಚಿನ ಸ್ಕ್ರೀನ್ ಜೊತೆಗೆ 2800 x 1260 (FHD+) ರೆಸೂಲಿಷನ್ ಅನ್ನು ಹೊಂದಿದೆ. ಅಲ್ಲದೆ 120 Hz ವರೆಗೆ ರಿಫ್ರೆಶ್ ದರ ಮತ್ತು 3000 ನೈಟ್ಸ್ ಬ್ರೈಟ್‌ನೆಸ್ ನೀಡುತ್ತವೆ. ಈ ಫೋನ್ಗಳಲ್ಲಿ ಡಿಸ್ಪ್ಲೇಯ ಅನುಭವವನ್ನು ಮತ್ತಷ್ಟು ಹೆಚ್ಚಿಸಲು 452 PPI ಪಿಕ್ಸೆಲ್ ಡೆನ್ಸಿಟಿಯನ್ನು ಸಹ ನೀಡಲಾಗಿದೆ. ಈ ಇದರಿಂದ ನೀವು ವೀಕ್ಷಿಸುವ ಪ್ರತಿಯೊಂದು ತುಂಬ ಶಾರ್ಪ್ ಮತ್ತು ಕ್ಲಿಯರ್ ಆಗಿ ಪಡೆಯಬಹುದು. ಈ ಎರಡೂ ಸ್ಮಾರ್ಟ್ಫೋನ್ಗಳು ಇನ್ ಡಿಸ್ಪ್ಲೇಯಲ್ಲಿ ಅಳವಡಿಸಲಾಗಿರುವ ಫಿಂಗರ್‌ಪ್ರಿಂಟ್ ರೀಡರ್‌ಗಳನ್ನು ಹೊಂದಿವೆ.
Vivo X100 ಮತ್ತು Vivo X100 Pro ಕ್ಯಾಮೆರಾ ಮಾಹಿತಿ
Vivo X100 ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾದೊಂದಿಗೆ 50MP + 50MP +64MP ಸೆಟಪ್ ಹೊಂದಿದೆ. ಈ ಲೆನ್ಸ್ Zeiss ಮೂಲಕ ಹೆಣೆಯಲ್ಪಟ್ಟಿದ್ದು ಸ್ಮಾರ್ಟ್ಫೋನ್ DIS ಅನ್ನು ಬೆಂಬಲಿಸುವ 50MP ಪ್ರೈಮರಿ ಸೆನ್ಸರ್ Sony IMX920 VCS ಬಯೋನಿಕ್ ಲೆನ್ಸ್ OIS ಸೆನ್ಸರ್ ಹೊಂದಿದೆ. ಫೋನ್ 50MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಮತ್ತು 64MP ಮೆಗಾಪಿಕ್ಸೆಲ್ ಝೈಸ್ ಸೂಪರ್ ಟೆಲಿಫೋಟೋ ಸೆನ್ಸರ್ ಹೊಂದಿದೆ. ಸ್ಮಾರ್ಟ್ಫೋನ್ 100x ಸ್ಪಷ್ಟ ಜೂಮ್‌ನೊಂದಿಗೆ ಬರುತ್ತದೆ. ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಎರಡು ಫೋನ್ಗಳು 32MP ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸರ್ ಹೊಂದಿವೆ.
ಇದರ ಕ್ರಮವಾಗಿ Vivo X100 Pro ಸಹ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 50MP + 50MP + 50MP ಸೆನ್ಸರ್ ಲೆನ್ಸ್ ಹೊಂದಿದೆ. ಇದರ ಮೊದಲ 50MP ಪ್ರೈಮರಿ ಸೆನ್ಸರ್ Sony IMX989 ಸೆನ್ಸರ್ 1 ಗ್ಲಾಸ್ ಮತ್ತು 7 ಪ್ಲಾಸ್ಟಿಕ್ ಲೆನ್ಸ್ ಜೊತೆಗೆ OIS ಸಪೋರ್ಟ್ ಮಾಡುತ್ತದೆ. ಮತ್ತೊಂದು ವೈಡ್ ಆಂಗಲ್ ಲೆನ್ಸ್ ಹೊಂದಿದ್ದು ಕೊನೆಯದಾಗಿ ಟೆಲಿಫೋಟೋ ಲೆನ್ಸ್ ಫ್ಲೋಟಿಂಗ್ ಎಲಿಮೆಂಟ್ ಡಿಸೈನಿಂಗ್ OIS ಸಪೋರ್ಟ್ ಮಾಡುತ್ತದೆ.
ಈ ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯುತ್ತಮವಾದ ಮತ್ತು ಶಾರ್ಪ್ ಇಮೇಜ್ ಮತ್ತು ವಿಡಿಯೋಗಳನ್ನು ಪಡೆಯಬಹುದು.
Vivo X100 ಮತ್ತು Vivo X100 Pro ಹಾರ್ಡ್ವೇರ್ ಮಾಹಿತಿ
ಈ ಎರಡು ಸ್ಮಾರ್ಟ್ಫೋನ್ಗಳು ಒಂದೇ ಮಾದರಿಯ ಮೀಡಿಯಾಟೆಕ್ Dimensity 9300 ಪ್ರೊಸೆಸರ್ನೊಂದಿಗೆ 4nm ನಾನೋ ಮೀಟರ್ ಟೆಕ್ನಾಲಜಿಯೊಂದಿಗೆ ಬರುತ್ತವೆ. ಎರಡು ಫೋನ್ಗಳು ಒಟ್ಟಾರೆಯ ಕಾರ್ಯಕ್ಷಮತೆ 3.25GHz ಅಂದ್ರೆ ಸಿಕ್ಕಾಪಟ್ಟೆ ಸ್ಪೀಡ್ ಬೂಸ್ಟರ್ ಅನ್ನು ಹೊಂದಿವೆ. ಒನ್ ಸಮಯದಲ್ಲಿ ಬಹು ಅಪ್ಲಿಕೇಶನ್‌ಗಳನ್ನು ಸ್ಮೂತಾಗಿ ಬಳಸಲು ಅನುವು ಮಾಡುತ್ತದೆ. ಇದರಲ್ಲಿ LPDDR5X RAM ಮತ್ತು UFS 4.0 ವೇರಿಯೆಂಟ್ ಹೊಂದಿವೆ. ಫೋನ್ಗಳು Funtouch OS 14 ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು ಆಂಡ್ರಾಯ್ಡ್ 14 ಅನ್ನು ರನ್ ಮಾಡುತ್ತವೆ.
Vivo X100 ಮತ್ತು Vivo X100 Pro ಬ್ಯಾಟರಿ ಮಾಹಿತಿ
ಕೊನೆಯದಾಗಿ ಈ ಸ್ಮಾರ್ಟ್ಫೋನ್ಗಳ ಬ್ಯಾಟರಿಯಲ್ಲಿ ಮೊದಲಿಗೆ Vivo X100 ಫೋನ್ ಡಿಸೆಂಟ್ 5000mAh ಬ್ಯಾಟರಿಯೊಂದಿಗೆ 120W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇದರ ಕ್ರಮವಾಗಿ Vivo X100 Pro ಸ್ಮಾರ್ಟ್ಫೋನ್ ನಿಮಗೆ ಕೊಂಚ ಹೆಚ್ಚಾಗಿ 5400mAh ಬ್ಯಾಟರಿಯೊಂದಿಗೆ 100W ಫಾಸ್ಟ್ ಚಾರ್ಜಿಂಗ್ ಮತ್ತು 50W ವಯರ್ಲೆಸ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಒಟ್ಟಾರೆಯಾಗಿ ಫುಲ್ ಚಾರ್ಜ್ನಲ್ಲಿ ನಿಮಗೆ ಪೂರ್ತಿ ದಿನದ ಸೋಶಿಯಲ್ ಮೀಡಿಯಾ ಬಳಕೆಗೆ ಉತ್ತಮವಾಗಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile