ವಿವೋ ಅಧಿಕೃತವಾಗಿ ಚೀನಾದಲ್ಲಿ ತನ್ನ ಹೊಸ X100 ಸರಣಿಯಲ್ಲಿಈ Vivo X100 ಮತ್ತು Vivo X100 Pro ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ವೈಬೊ (Weibo) ಮೂಲಕ ಈ ಘೋಷಣೆ ಮಾಡಲಾಗಿದೆ. ವಿವೋದ ಈ ಹೊಸ ಸ್ಮಾರ್ಟ್‌ಫೋನ್‌ಗಳು ಹೊಸ ಮೀಡಿಯಾ ಟೆಕ್ ಡೈಮೆನ್ಸಿಟಿ 9300 ಪ್ರೊಸೆಸರ್ನೊಂದಿಗೆ ಬರುತ್ತವೆ. ಅಲ್ಲದೆ ಫೋನ್ Zeiss ಬ್ರಾಂಡೆಡ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆನ್ಸರ್ಗಲನ್ನು 100x ಜೂಮ್‌ನೊಂದಿಗೆ ಹೊಂದಿದೆ. ವಿವೋದ ಈ ಹೊಸ ಸರಣಿಯಲ್ಲಿ ಪ್ರೋ ಸ್ಮಾರ್ಟ್‌ಫೋನ್ ಬೆಲೆ ಮತ್ತು ವಿಶೇಷಣಗಳನ್ನು ತಿಳಿಯಿರಿ.
Also Read: ವಿರಾಟ್ ಕೊಹ್ಲಿ ಸೇರಿ ಹಲವಾರು ಸೆಲೆಬ್ರಟಿಗಳು ಬಳಸುವ ಈ WHOOP ಫಿಟ್‌ನೆಸ್ ಬ್ಯಾಂಡ್‌ನ ವಿಶೇಷತೆಗಳೇನು?
ವಿವೋ ಎಕ್ಸ್100 ಮತ್ತು ವಿವೋ ಎಕ್ಸ್100 ಪ್ರೋ ಈಗ ಚೀನಾದಲ್ಲಿ ಈಗಾಗಲೇ ಪ್ರೀ-ಬುಕಿಂಗ್ ಮಾಡಲು ಲಭ್ಯವಿದೆ. ಈ ಲೇಟೆಸ್ಟ್ ಮತ್ತು ಹೈಎಂಡ್ ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆಯ ಮಾಹಿತಿ ನೋಡುವುದಾದರೆ ಇದರ ವಿವೋ ಎಕ್ಸ್100 ಪ್ರೋ 12GB+256GB ಮೂಲಕ ಆರಂಭವಾಗಿದ್ದು ¥4999 (57,000 ರೂಗಳು) ಆಗಿವೆ. ಈ ಎರಡೂ ಫೋನ್‌ಗಳು 21ನೇ ನವೆಂಬರ್ 2023 ರಂದು ಮಾರಾಟಕ್ಕೆ ಬರಲಿವೆ.
12GB RAM ಮತ್ತು 256GB ಸ್ಟೋರೇಜ್ ¥4999 (58,007 ರೂಗಳು)
16GB RAM ಮತ್ತು 512GB ಸ್ಟೋರೇಜ್ ¥5499 (63,809 ರೂಗಳು)
16GB RAM ಮತ್ತು 1024GB ಸ್ಟೋರೇಜ್ ¥5999 (69,611 ರೂಗಳು)
ಈ ಸ್ಮಾರ್ಟ್ಫೋನ್ 6.78 ಇಂಚಿನ AMOLED 8T LTPO ಬಾಗಿದ ಡಿಸ್‌ಪ್ಲೇಯನ್ನು 1260 x 2800 ಪಿಕ್ಸೆಲ್ ರೆಸುಲ್ಯೂಷನ್ ಜೊತೆಗೆ ಬರುತ್ತದೆ. ಇದು 3000 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿದೆ. ಇದು ಡ್ಯುಯಲ್ ಸಿಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು Android 14 ಆಧಾರಿತ OriginOS 4 ಅನ್ನು ಹೊಂದಿದೆ. ಈ ಫೋನ್ ಆಕ್ಟಾ-ಕೋರ್ 4nm ಮೀಡಿಯಾ ಟೆಕ್ ಡೈಮೆನ್ಶನ್ 9300 ಪ್ರೊಸೆಸರ್ನೊಂದಿಗೆ ಬರುತ್ತದೆ. ಇದು 16GB RAM ವರೆಗೆ ಹೊಂದಿದೆ. ಇದು 1024GB ವರೆಗೆ ಸ್ಟೋರೇಜ್ ಅನ್ನು ಹೊಂದಿದೆ.
ಫೋನ್ Zeiss ಬ್ರಾಂಡ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲದೊಂದಿಗೆ 50MP ಮೆಗಾಪಿಕ್ಸೆಲ್ Sony IMX989 ಪೂರ್ತಿ 1 ಇಂಚಿನ ಸೆನ್ಸರ್ ಮತ್ತು 50MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾದೊಂದಿಗೆ 50MP ಮೆಗಾಪಿಕ್ಸೆಲ್ ಝೈಸ್ APO ಸೂಪರ್ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ. ಇದು 100x ಡಿಜಿಟಲ್ ಜೂಮ್ ಬೆಂಬಲವನ್ನು ಹೊಂದಿದೆ. ಫೋನ್ 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಈ ಸ್ಮಾರ್ಟ್‌ಫೋನ್‌ನಲ್ಲಿ 5G, Wi-Fi 7, ಬ್ಲೂಟೂತ್, NFC, GPS, NavIC, OTG ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿದೆ. ಇದು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿದೆ. ಇದರಲ್ಲಿ ಫೇಸ್ ಅನ್‌ಲಾಕ್ ನೀಡಲಾಗಿದೆ. ಇದರೊಂದಿಗೆ ಡಸ್ಟ್ ಮತ್ತು ವಾಟರ್ ನಿರೋಧಕಕ್ಕೆ IP68 ರೇಟಿಂಗ್ ನೀಡಲಾಗಿದೆ. ಫೋನ್ 5400mAh ಬ್ಯಾಟರಿಯನ್ನು 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ