Vivo X100 ಮತ್ತು Vivo X100 Pro 5G ಸ್ಮಾರ್ಟ್ಫೋನ್ ಬಿಡುಗಡೆ! ಬೆಲೆಯೊಂದಿಗೆ ಈ ಟಾಪ್ 5 ಫೀಚರ್ ತಿಳಿಯಿರಿ

Updated on 15-Nov-2023
HIGHLIGHTS

ಭಾರತದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಚೀನಾ ಮೂಲದ ಪ್ರಸಿದ್ಧ ವಿವೋ ಸ್ಮಾರ್ಟ್ಫೋನ್ ಕಂಪನಿ ನೆನ್ನೆ ಅಂದ್ರೆ 13ನೇ ನವೆಂಬರ್ 2023 ರಂದು ತನ್ನ ಹೊಚ್ಚ ಹೊಸ 5G ಸ್ಮಾರ್ಟ್​ಫೋನ್​ನೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿದೆ. ಈ ಸ್ಮಾರ್ಟ್​ಫೋನ್​ಗಳೆಂದರೆ Vivo X100 ಮತ್ತು Vivo X100 Pro 5G ಆಗಿದೆ. ಈ ಸ್ಮಾರ್ಟ್ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 9300 ಪ್ರೊಸೆಸರ್ನೊಂದಿಗೆ ಪ್ರಸ್ತುತ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದೆ. ಇದರಲ್ಲಿ ಆಕರ್ಷಕ ಡಿಸ್ಪ್ಲೇ, ಅತ್ಯುತ್ತಮ ಕ್ಯಾಮೆರಾ ಮತ್ತು ಬಲಿಷ್ಠ ಬ್ಯಾಟರಿ ಆಯ್ಕೆಗಳೊಂದಿಗೆ ಲೇಟೆಸ್ಟ್ ಫೀಚರ್ಗಳನ್ನು ಫೋನ್ ಹೊಂದಿದೆ. ಈ ಫೋನ್‌ಗಳ ಬೆಲೆ, ಫೀಚರ್ಸ್ಮತ್ತು ಟಾಪ್ 5 ಫೀಚರ್ಗಳ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.

Also Read: ನಿಮ್ಮ Gpay, PhonePe ಮತ್ತು PayTm ಖಾತೆಯ UPI ಪಿನ್ ರಿಸೆಟ್ ಅಥವಾ ಚೇಂಜ್ ಮಾಡೋದು ಹೇಗೆ?

Vivo X100 ಸರಣಿಯ ವಿಶೇಷಣಗಳು

Vivo X100 ಮತ್ತು X100 Pro ಅದೇ 6.78 ಇಂಚಿನ ಬಾಗಿದ AMOLED ಡಿಸ್ಪ್ಲೇಯನ್ನು 1.5K ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಮತ್ತು 3000nits ಗರಿಷ್ಠ ಹೊಳಪನ್ನು ಹೊಂದಿದೆ. ಫ್ಲಿಕ್ಕರ್ ಅನ್ನು ಕಡಿಮೆ ಮಾಡಲು ಡಿಸ್ಪ್ಲೇ 8T LTPO ತಂತ್ರಜ್ಞಾನ ಮತ್ತು 2160Hz PWM ಡಿಮ್ಮಿಂಗ್ ಅನ್ನು ಬಳಸುತ್ತದೆ. ಎರಡೂ ಫೋನ್‌ಗಳು ಡೈಮೆನ್ಸಿಟಿ 9300 ಚಿಪ್‌ಸೆಟ್‌ನಿಂದ 16GB RAM ಮತ್ತು 1TB ಸ್ಟೋರೇಜ್‌ನೊಂದಿಗೆ ಚಾಲಿತವಾಗಿವೆ.

Vivo X100 ಸರಣಿಯ ಕ್ಯಾಮೆರಾ

ಈ ಸ್ಮಾರ್ಟ್ಫೋನ್ ಅಡಿಯಲ್ಲಿ Vivo X100 ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು ಕಸ್ಟಮೈಸ್ ಮಾಡಿದ IMX920 ಸೆನ್ಸರ್‌ನೊಂದಿಗೆ 50MP ಪ್ರೈಮರಿ ಕ್ಯಾಮೆರಾ, 50MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು ಪೆರಿಸ್ಕೋಪ್ ಲೆನ್ಸ್ ಮತ್ತು ಮ್ಯಾಕ್ರೋ ಸಾಮರ್ಥ್ಯಗಳೊಂದಿಗೆ 64MP ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ. ಇದರ ಕ್ರಮವಾಗಿ Vivo X100 Pro ಸಹ ಟ್ರಿಪಲ್ ಕ್ಯಾಮೆರಾಗಳನ್ನು ಹೊಂದಿದ್ದು ಆದರೆ ಪ್ರೈಮರಿ ಸೆನ್ಸರ್ IMX989 ಸೆನ್ಸರ್ ಅನ್ನು ಹೊಂದಿದೆ.

Vivo X100 Pro Camera

ಅಲ್ಲದೆ ಹೆಚ್ಚುವರಿಯಾಗಿ Vivo X100 Pro ಕಂಪನಿಯ ಮೊದಲ ಫೋನ್ Zeiss APO ಮೂಲಕ ಪ್ರಮಾಣೀಕರಿಸಲ್ಪಟ್ಟ ಟೆಲಿಫೋಟೋ ಲೆನ್ಸ್ ಹೊಂದಿರುವ ಸ್ಮಾರ್ಟ್ಫೋನ್ ಆಗಿದೆ. ಫೋನ್ ಇಮೇಜಿಂಗ್ ಚಿಪ್ V3 ಅನ್ನು ಸಹ ಹೊಂದಿದೆ. ಇದು 4K ವೀಡಿಯೊವನ್ನು ಪ್ರಕ್ರಿಯೆಗೊಳಿಸಬಹುದು. ವೀಡಿಯೊಗಳಲ್ಲಿ 4K ಪೋರ್ಟ್ರೇಟ್ ವೀಡಿಯೊಗಳನ್ನು ಶೂಟ್ ಮಾಡಬಹುದು. ವಿವೋ ಎಕ್ಸ್100 ಮತ್ತು ವಿವೋ ಎಕ್ಸ್100 ಪ್ರೋ ಈ ಎರಡೂ ಫೋನ್ಗಳು ಆಂಡ್ರಾಯ್ಡ್ 14 ಅನ್ನು ಆಧರಿಸಿದ OriginOS 4.0 ನಲ್ಲಿ ರನ್ ಆಗುತ್ತವೆ.

Vivo X100 ಸರಣಿಯ ಬ್ಯಾಟರಿ

ಚಾರ್ಜಿಂಗ್‌ಗಾಗಿ ವಿವೋ ಎಕ್ಸ್100 ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ. ಫೋನ್‌ನ 120W ಫಾಸ್ಟ್ ಚಾರ್ಜರ್‌ನೊಂದಿಗೆ ಕೇವಲ 11 ನಿಮಿಷಗಳಲ್ಲಿ 50% ಪ್ರತಿಶತದಿಂದ ಪೂರ್ಣವಾಗಿ ಚಾರ್ಜ್ ಆಗುತ್ತದೆ. ಮತ್ತೊಂದೆಡೆಯಲ್ಲಿ ವಿವೋ ಎಕ್ಸ್100 ಪ್ರೋ ದೊಡ್ಡದಾದ 5400mAh ಬ್ಯಾಟರಿಯನ್ನು ಹೊಂದಿದೆ. ಅದರ 100W ಫಾಸ್ಟ್ ಚಾರ್ಜರ್ ಕೇವಲ 12.5 ನಿಮಿಷಗಳಲ್ಲಿ 50% ಪ್ರತಿಶತದಷ್ಟು ಚಾರ್ಜ್ ಮಾಡುತ್ತದೆ. ಹೆಚ್ಚುವರಿಯಾಗಿ ವಿವೋ ಎಕ್ಷ100 ಪ್ರೋ ಮಾದರಿಯು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Vivo X100 ಸರಣಿಯ ಬೆಲೆ ಮತ್ತು ಲಭ್ಯತೆ

ವಿವೋ ಎಕ್ಸ್100 ಮತ್ತು ವಿವೋ ಎಕ್ಸ್100 ಪ್ರೋ ಈಗ ಚೀನಾದಲ್ಲಿ ಈಗಾಗಲೇ ಪ್ರೀ-ಬುಕಿಂಗ್ ಮಾಡಲು ಲಭ್ಯವಿದೆ. ಮೊದಲಿಗೆ ಇದರ ವಿವೋ ಎಕ್ಸ್100 ಸ್ಮಾರ್ಟ್ಫೋನ್ 12GB+256GB ಮೂಲಕ ಆರಂಭವಾಗಿದ್ದು ¥3999 (45,600 ರೂಗಳು) ಆಗಿವೆ. ಮತ್ತು ಇದರ ವಿವೋ ಎಕ್ಸ್100 ಪ್ರೋ 12GB+256GB ಮೂಲಕ ಆರಂಭವಾಗಿದ್ದು ¥4999 (57,000 ರೂಗಳು) ಆಗಿವೆ. ಈ ಎರಡೂ ಫೋನ್‌ಗಳು 21ನೇ ನವೆಂಬರ್ 2023 ರಂದು ಮಾರಾಟಕ್ಕೆ ಬರಲಿವೆ.

ಚೈನಾದಲ್ಲಿ Vivo X100 ವೇರಿಯೆಂಟ್ ಮತ್ತು ಬೆಲೆ

12GB RAM ಮತ್ತು 256GB ಸ್ಟೋರೇಜ್ ¥3999 (46,404 ರೂಗಳು)
16GB RAM ಮತ್ತು 256GB ಸ್ಟೋರೇಜ್ ¥4299 (49,885 ರೂಗಳು)
16GB RAM ಮತ್ತು 512GB ಸ್ಟೋರೇಜ್ ¥4599 (53,366 ರೂಗಳು)
16GB RAM ಮತ್ತು 1024GB ಸ್ಟೋರೇಜ್ ¥ 4999 (58,007 ರೂಗಳು)

ಚೈನಾದಲ್ಲಿ Vivo X100 Pro ವೇರಿಯೆಂಟ್ ಮತ್ತು ಬೆಲೆ

12GB RAM ಮತ್ತು 256GB ಸ್ಟೋರೇಜ್ ¥4999 (58,007 ರೂಗಳು)
16GB RAM ಮತ್ತು 512GB ಸ್ಟೋರೇಜ್ ¥5499 (63,809 ರೂಗಳು)
16GB RAM ಮತ್ತು 1024GB ಸ್ಟೋರೇಜ್ ¥5999 (69,611 ರೂಗಳು)

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :