ಚೀನಾದ ಜನಪ್ರಿಯ ವಿವೋ ಸ್ಮಾರ್ಟ್ಫೋನ್ ಬ್ರಾಂಡ್ ಇಂದು ಅಂದ್ರೆ 6 ಜೂನ್ 2024 ರಂದು ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ತನ್ನ ಲೇಟೆಸ್ಟ್ Vivo X Fold3 Pro ಅಲ್ಟ್ರಾ ಪ್ರೀಮಿಯಂ ಫೋಲ್ಡಬಲ್ ಸ್ಮಾರ್ಟ್ಫೋನ್ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ಅತ್ಯುತ್ತಮವಾದ ಮತ್ತು ಲೇಟೆಸ್ಟ್ ಫೀಚರ್ ಮತ್ತು ವಿಶೇಷಣಗಳೊಂದಿಗೆ ಪ್ಯಾಕ್ ಆಗಿದ್ದು ಮುಖ್ಯವಾಗಿ ಇದರಲ್ಲಿ 16GB RAM ಮತ್ತು 32MP ಸೆಲ್ಫಿ ಕ್ಯಾಮೆರಾದೊಂದಿಗೆ ಸುಮಾರು ₹1,59,999 ರೂಗಳಿಗೆ ರೂಗಳಿಂದ ಶುರುವಾಗುತ್ತದೆ. Vivo X Fold3 Pro ಸ್ಮಾರ್ಟ್ಫೋನ್ Zeiss ಸೆನ್ಸರ್ ಜೊತೆಗೆ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಸೆಟಪ್ ಹೊಂದಿದ್ದು ಇದರ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ವಿವರವಾಗಿ ಪಡೆಯಬಹುದು. ನಿಮಗೆ ಈ ಸ್ಮಾರ್ಟ್ಫೋನ್ ಬಗೆಗಿನ ಮಾಹಿತಿ ಇಷ್ಟವಾಗಿದ್ದರೆ ತಿಳಿಯದವರೊಂದಿಗೆ ಹಂಚಿಕೊಳ್ಳಿ.
Also Read: ಫ್ಲಿಪ್‌ಕಾರ್ಟ್‌ನಲ್ಲಿ 40 ಇಂಚಿನ Smart TV ಮೇಲೆ ವಿಶೇಷ ಡೀಲ್‌ಗಳು! ಭಾರಿ ಆಫರ್‌ಗಳೊಂದಿಗೆ ಇಂದೇ ಖರೀದಿಸಿ!
ಭಾರತದಲ್ಲಿ Vivo X Fold3 Pro ಅಲ್ಟ್ರಾ ಪ್ರೀಮಿಯಂ ಫೋಲ್ಡಬಲ್ ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ಮಾತನಾಡುವುದಾದರೆ 16GB RAM ಮತ್ತು 512GB ಸ್ಟೋರೇಜ್ ರೂಪಾಂತರದ ಕೇವಲ ಏಕೈಕ ರೂಪಾಂತರವನ್ನು ಹೊಂದಿದೆ. ಇದರ ಬೆಲೆಯನ್ನು ಕಂಪನಿ 1,59,999 ರೂಗಳಿಗೆ ನಿಗದಿಪಡಿಸಿದೆ. ಆಸಕ್ತರು ಈ ಸ್ಮಾರ್ಟ್ಫೋನ್ ಅನ್ನು ಸೆಲೆಸ್ಟಿಯಲ್ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಖರೀದಿಸಬಹುದು. Vivo X Fold3 Pro ಪ್ರಸ್ತುತ ವಿವೋ ಇಂಡಿಯಾ ವೆಬ್‌ಸೈಟ್, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಮುಂಗಡ ಬುಕಿಂಗ್‌ಗೆ ಸಿದ್ಧವಾಗಿದ್ದು ಇದರ ಮೊದಲ ಮಾರಾಟವನ್ನು ಇದೆ 13ನೇ ಜೂನ್ 2024 ರಿಂದ ಶುರುವಾಗದಲಿದೆ.
Vivo X Fold3 Pro ಅಲ್ಟ್ರಾ ಪ್ರೀಮಿಯಂ ಫೋಲ್ಡಬಲ್ ಸ್ಮಾರ್ಟ್ಫೋನ್ ಪರಿಚಯಾತ್ಮಕ ಕೊಡುಗೆಯಾಗಿ HDFC ಮತ್ತು SBI ಬ್ಯಾಂಕ್ ಶಾಪರ್ಸ್ ಕಾರ್ಡ್ ಬಳಸುವ ಬಳಕೆದಾರರಿಗೆ 15,000 ರೂಗಳ ಡಿಸ್ಕೌಂಟ್ ಪಡೆಯಬಹುದು. ಇದರೊಂದಿಗೆ ಬ್ಯಾಂಕ್ ಶಾಪರ್ಸ್ ಕಾರ್ಡ್ ಬಳಸುವ ಬಳಕೆದಾರರಿಗೆ 10000 ರೂಗಳ ವಿನಿಮಯ ಬೋನಸ್ ಮತ್ತು ಒಂದು-ಬಾರಿ ಉಚಿತ ಸ್ಕ್ರೀನ್ ಬದಲಿಯ ಆಫರ್ ಸಹ ನೀಡುತ್ತಿದ್ದು ಒಟ್ಟಾರೆಯಾಗಿ ಸುಮಾರು 25000 ರೂಗಳವರೆಗೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ಗಳನ್ನು Vivo X Fold3 Pro ಖರೀದಿಸುವ ಬಳಕೆದಾರರು ಪಡೆಯಬಹುದು. ಅಲ್ಲದೆ ನಿಮ್ಮ ಖರೀದಿಯನ್ನು ಮತ್ತಷ್ಟು ಕಡಿಮೆಗೊಳಿಸಲು 24 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಆಯ್ಕೆಗಳಿವೆ.
ಮೊದಲಿಗೆ ಈ ಸ್ಮಾರ್ಟ್ಫೋನ್ ಇತ್ತೀಚಿನ ಫೋಲ್ಡಬಲ್ ಫೋನ್ ಭಾರತದಲ್ಲಿ ಅತಿ ತೆಳ್ಳನೆಯ ಮಡಿಸಬಹುದಾದ ಫೋನ್ ಆಗಿ ಆಗಮಿಸಿದೆ. ಇದನ್ನು ನೀವು ಮಡಚಿದರೆ ಕೇವಲ 11.2mm ದಪ್ಪವಾಗಿದ್ದು ಇದನ್ನು ತೆರೆದಾಗ ಕೇವಲ 5.2mm ದಪ್ಪವನ್ನು ಅಳೆಯುತ್ತದೆ. ಈ Vivo X Fold 3 Pro ಕೂಡ ಸಾಕಷ್ಟು ಹಗುರವಾಗಿದ್ದು ಕೇವಲ 236 ಗ್ರಾಂಗಳ ತೂಕವನ್ನು ಹೊಂದಿದೆ. Vivo X Fold3 Pro ಅಲ್ಟ್ರಾ ಪ್ರೀಮಿಯಂ ಫೋಲ್ಡಬಲ್ ಸ್ಮಾರ್ಟ್ಫೋನ್ ವಾಟರ್ ಮತ್ತಿ ಡಸ್ಟ್ ಪ್ರೂಫ್ ಸಪೋರ್ಟ್ ಮಾಡಲು IPX8 ರೇಟಿಂಗ್ ಹೊಂದಿದೆ. ಈ ಸ್ಮಾರ್ಟ್ಫೋನ್ ಪ್ರತಿದಿನ 100 ಬಾರಿ ಮುಚ್ಚಿ ತೆಗೆಯುವ ಅಭ್ಯಾಸವನ್ನು ಹೊಂದಿದೆ ಇದೆ ಅಭ್ಯಾಸವನ್ನು ಪೂರ್ತಿ 12 ವರ್ಷಗಳವರೆಗೆ ಮಾಡುತ್ತದೆಂದು ಕಂಪನಿ ಭರವಸೆ ನೀಡುತ್ತಿದೆ.
ಈ ಸ್ಮಾರ್ಟ್ಫೋನ್ ಪ್ರೈಮರಿ ಡಿಸ್ಪ್ಲೇ 8.03 ಇಂಚಿನ E7 AMOLED ಡಿಸ್ಪ್ಲೇ ಆಗಿದ್ದು ಅದು LTPO ಟೆಕ್ನಾಲಜಿಯೊಂದಿಗೆ 2K+ ರೆಸಲ್ಯೂಶನ್ ಮತ್ತು 120Hz ವೇರಿಯಬಲ್ ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಅಲ್ಲದೆ ಇದರ ಎರಡನೇ ಕವರ್ ಡಿಸ್ಪ್ಲೇಯು ಅಂದ್ರೆ ಇದನ್ನು ಮುಚ್ಚಿದಾಗ FHD+ ರೆಸಲ್ಯೂಶನ್ ಮತ್ತು 120Hz ವೇರಿಯಬಲ್ ರಿಫ್ರೆಶ್ ರೇಟ್, ಆರ್ಮರ್ ಗ್ಲಾಸ್, ಡಾಲ್ಬಿ ವಿಷನ್ ಮತ್ತು 4,500nits ವರೆಗಿನ ಗರಿಷ್ಠ ಹೊಳಪಿನ ಜೊತೆಗೆ 6.53-ಇಂಚಿನ LTPO AMOLED ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ ಸ್ಮಾರ್ಟ್ಫೋನ್ HDR10+, Dolby Vision, Dolby Vision, UTG ಗ್ಲಾಸ್, ಮತ್ತು 4,500nits ಗರಿಷ್ಠ ಪ್ರಕಾಶಮಾನತೆಯನ್ನು ಬೆಂಬಲಿಸುತ್ತದೆ.
ಇದರ ಕ್ಯಾಮೆರಾದಲ್ಲಿ 50MP ಮೆಗಾಪಿಕ್ಸೆಲ್ ಪ್ರೈಮರಿ ಲೆನ್ಸ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ Zeiss ಸೆನ್ಸರ್ (OV50H Sensor) ಸಪೋರ್ಟ್ ಮಾಡುತ್ತದೆ. ಇದರ ಪ್ರೈಮರಿ ಸೆನ್ಸರ್ V3 ಇಮೇಜಿಂಗ್ ಚಿಪ್‌ನಿಂದ ಚಾಲಿತವಾಗಿದೆ. ಇದನ್ನು 50MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಅಲ್ಲದೆ ಫೋನ್ (Samsung JN1) ಮತ್ತು 64MP ಮೆಗಾಪಿಕ್ಸೆಲ್ (OV64B) ಟೆಲಿಫೋಟೋ ಶೂಟರ್‌ನೊಂದಿಗೆ ಜೋಡಿಸಲಾಗಿದೆ. ಇದರಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 32MP ಮೆಗಾಪಿಕ್ಸೆಲ್ ಶೂಟರ್ ಅನ್ನು ಹೊಂದಿದೆ.
ಕೊನೆಯದಾಗಿ ಸ್ಮಾರ್ಟ್ಫೋನ್ Qualcomm Snapdragon 8 Gen 3 ಪ್ರೊಸೆಸರ್ನೊಂದಿಗೆ 16GB LPDDR5X RAM ಮತ್ತು 512GB UFS 4.0 ಸ್ಟೋರೇಜ್ ಅನ್ನು ಇದರಲ್ಲಿ ಜೋಡಿಸಲಾಗಿದೆ. ಅಲ್ಲದೆ ಸ್ಮಾರ್ಟ್ಫೋನ್ 5700mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಜೊತೆಗೆ ರಿವರ್ಸ್ ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಆಧಾರಿತ Funtouch OS 14 ಕಸ್ಟಮ್ ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇತರ ಗಮನಾರ್ಹ ಫೀಚರ್‌ಗಳೆಂದರೆ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಸ್ಟೀರಿಯೋ ಸ್ಪೀಕರ್‌ಗಳು, ಬ್ಲೂಟೂತ್ 5.4 LE, ಡ್ಯುಯಲ್-ಬ್ಯಾಂಡ್ ವೈ-ಫೈ, 5G SA/NSA ಬೆಂಬಲದೊಂದಿಗೆ ಬರುತ್ತದೆ.