Vivo V19 ಸ್ಮಾರ್ಟ್ಫೋನ್ ಅತಿ ಶೀಘ್ರದಲ್ಲೇ ಡುಯಲ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗುವ ನಿರೀಕ್ಷೆ
Vivo V19 ಸ್ಮಾರ್ಟ್ಫೋನ್ ಡ್ಯುಯಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಪಂಚ್ ಹೋಲ್ ಫೀಚರ್ ಜೊತೆಗೆ ಬರಲಿದೆಯಂತೆ.
ವಿವೋ ಇತ್ತೀಚೆಗೆ ಹೊಸದಾಗಿ ಮತ್ತೊಂದು Vivo V19 ಹೆಸರಿನ ತನ್ನ ಹೊಸ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ವಾರ ಚೀನಾ ಕಂಪನಿ ಇಂಡೋನೇಷ್ಯಾದಲ್ಲಿ ತನ್ನ ಈ ಫೋನ್ ಅನ್ನು ಬಿಡುಗಡೆ ಮಾಡಿದ್ದು ಭಾರತದಲ್ಲಿ ಬಿಡುಗಡೆಯಾಗಲಿರುವ ಈ Vivo V19 ಸ್ಮಾರ್ಟ್ಫೋನ್ ಕೆಲವು ವಿಭಿನ್ನ ವಿಶೇಷಣಗಳನ್ನು ಹೊಂದಿರುತ್ತದೆ. ಟೆಕ್ ವರ್ಲ್ಡ್ ಪ್ರಕಾರ ಭಾರತದಲ್ಲಿ ಬಿಡುಗಡೆಯಾದ Vivo V19 ಸ್ಮಾರ್ಟ್ಫೋನ್ ಡ್ಯುಯಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಪಂಚ್ ಹೋಲ್ ಫೀಚರ್ ಜೊತೆಗೆ ಬರಲಿದೆಯಂತೆ.
ಈ Vivo V19 ಸ್ಮಾರ್ಟ್ಫೋನ್ ಡ್ಯುಯಲ್ ನ್ಯಾನೋ ಸಿಮ್‌ನೊಂದಿಗೆ ಬರುವ Vivo V19 ಸ್ಮಾರ್ಟ್ಫೋನ್ ಆಂಡ್ರಾಯ್ಡ್ 10 ಆಧಾರಿತ ಫಂಟೌಚ್ ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 6.44 ಇಂಚಿನ ಫುಲ್ ಎಚ್ಡಿ ಪ್ಲಸ್ ಸೂಪರ್ ಅಮೋಲ್ಡ್ ಡಿಸ್ಪ್ಲೇ ಹೊಂದಿದ್ದು ಇದರ ಸ್ಕ್ರೀನ್ ಬಾಡಿ ಅನುಪಾತ 91.38 ಆಗಿದೆ. ಈ ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 675 ಚಿಪ್‌ಸೆಟ್ ಅಳವಡಿಸಲಾಗಿದೆ.
ಕ್ಯಾಮೆರಾ ಸೆಟಪ್ ಬಗ್ಗೆ ಮಾತನಾಡುವುದಾದರೆ ಅದರ ಹಿಂಭಾಗದಲ್ಲಿ ಕ್ವಾಡ್ ಕ್ಯಾಮೆರಾ ಸೆಟಪ್ ಇದೆ ಅದರ ಅಡಿಯಲ್ಲಿ ನಾಲ್ಕು ಕ್ಯಾಮೆರಾಗಳು ಬರುತ್ತವೆ. ಇದರ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್‌ಗಳು ಇದು AI ಸೆನ್ಸರ್ ಮತ್ತು f / 1.8 ಅಪರ್ಚರ್ ಜೊತಗೆ ಬರುತ್ತದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೂಪರ್ ವೈಡ್ ಆಂಗಲ್ ಸೆನ್ಸಾರ್ ಇದೆ. ಇದು ಎಫ್ / 2.2 ಅಪರ್ಚರ್ನೊಂದಿಗೆ ಬರುತ್ತದೆ. ಅದೇ ಸಮಯದಲ್ಲಿ ಎರಡು ಕ್ಯಾಮೆರಾಗಳು 2-2 ಮೆಗಾಪಿಕ್ಸೆಲ್‌ಗಳು. ಸೆಲ್ಫಿ ಪ್ರಿಯರಿಗೆ 32MP ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.
ಈ Vivo V19 ಸ್ಮಾರ್ಟ್ಫೋನ್ ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾದ Vivo V17 ಸ್ಮಾರ್ಟ್ಫೋನ್ ರಿಬ್ರಾಂಡೆಡ್ ಆವೃತ್ತಿಯಾಗಿದೆ ಎನ್ನಬವುದು. ಕಂಪನಿಯು ಇದನ್ನು ಚೀನಾದಲ್ಲಿ ಕ್ರಿಸ್ಟಲ್ ವೈಟ್ ಮತ್ತು ಆರ್ಕ್ಟಿಕ್ ಬ್ಲೂ ಎಂಬ ಎರಡು ಬಣ್ಣ ರೂಪಾಂತರಗಳಲ್ಲಿ ಪರಿಚಯಿಸಿದೆ. ಇಂಡೋನೇಷ್ಯಾದಲ್ಲಿ ಬಿಡುಗಡೆಯಾದ ಈ ಫೋನ್‌ನ ಆರಂಭಿಕ ಬೆಲೆಯನ್ನು IDR 4,299,000 (ರೂ. 22,100 ರೂಗಳು) ನಲ್ಲಿ ಇಡಲಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile