Vivo V50e India Launch-
Vivo V50e India Launch: ಭಾರತದಲ್ಲಿ ಮುಂಬರಲಿರುವ Vivo V50e ಸ್ಮಾರ್ಟ್ಫೋನ್ ಇದೆ ತಿಂಗಳಲ್ಲಿ 10ನೇ ಏಪ್ರಿಲ್ 2025 ರಂದು ಅಧಿಕೃತವಾಗಿ ಬಿಡುಗಡೆಯಾಗಲು ಸಜ್ಜಾಗಿದೆ. ವಿವೋ ಕಂಪನಿ ಈ ಸ್ಮಾರ್ಟ್ಫೋನ್ ಬಗ್ಗೆ ಈಗಾಗಲೇ ಟ್ವಿಟ್ಟರ್ ಮೂಲಕ ಸ್ವತಃ ಪೋಸ್ಟ್ ಮಾಡಿದ್ದೂ ಫ್ಲಿಪ್‌ಕಾರ್ಟ್‌ನಲ್ಲಿ ತಮ್ಮದೇಯಾದ ಮೈಕ್ರೋಸೈಟ್ ಸಹ ರಚಿಸಿದೆ. Vivo V50e ಸ್ಮಾರ್ಟ್‌ಫೋನ್ ಭಾರತದಲ್ಲಿ 50MP Eye Autofocus ಸೇಲ್ಫಿ ಕ್ಯಾಮೆರಾ ಮತ್ತು MediaTek Dimensity 7300 ಪ್ರೊಸೆಸರ್‌ನೊಂದಿಗೆ ಬರಲಿದೆ. ಹಾಗಾದ್ರೆ ಇದರ ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ.
ಈ ಮುಂಬರಲಿರುವ Vivo V50e ಸ್ಮಾರ್ಟ್ಫೋನ್ ಮುಂದಿನ ವಾರ ಬಿಡುಗಡೆಗೆ ಸಜ್ಜಾಗಿರುವ ಈ Vivo V50e ಸ್ಮಾರ್ಟ್ಫೋನ್ ಆರಂಭಿಕ 8GB RAM ಮತ್ತು 256GB ಸ್ಟೋರೇಜ್ ಬೆಲೆಯನ್ನು 30,000 ರೂಗಿಂತ ಕಡಿಮೆ ಬೆಲೆಗೆ ಬರುವ ನಿರೀಕ್ಷೆಗಳಿವೆ. ಈ ಸಮಯದಲ್ಲಿ ಬ್ರ್ಯಾಂಡ್ ಇನ್ನೂ ಅಧಿಕೃತ ಬೆಲೆಯನ್ನು ಘೋಷಿಸಿಲ್ಲ. Vivo V50e ಸ್ಮಾರ್ಟ್‌ಫೋನ್ ಮತ್ತೊಂದು ಮಾದರಿಗೆ 12GB RAM ಮತ್ತು 256GB ಸ್ಟೋರೇಜ್ 32,999 ರೂಗಳಿಗೆ ನಿರೀಕ್ಷಿಸಲಾಗಿದೆ.
Also Read: iQOO Z10 ಬರೋಬ್ಬರಿ 7300mAh ಬ್ಯಾಟರಿಯೊಂದಿಗೆ ಲಾಂಚ್ ಡೇಟ್ ಕಂಫಾರ್ಮ್! ಬೆಲೆ ಮತ್ತು ಫೀಚರ್ಗಳೇನು?
ಅಲ್ಲದೆ ಹೆಚ್ಚುವರಿಯಾಗಿ ಬ್ಯಾಂಕ್ ಆಫರ್ ಅಡಿಯಲ್ಲಿ ಸುಮಾರು 2000 ರೂಗಳ ಕಾರ್ಡ್ ಡಿಸ್ಕೌಂಟ್ ಸಹ ನೀಡುವುದಾಗಿ ನಿರೀಕ್ಷಿಸಲಾಗಿದೆ. ಆದರೆ ಇದರ ಅಸಲಿ ಬೆಲೆ ಮತ್ತು ಆಫರ್ಗಳಿಗಾಗಿ ಬಿಡುಗಡೆಯವರೆಗೆ ಅಂದೆರೇ 10ನೇ ಏಪ್ರಿಲ್ 2025 ವರವೆಗೆ ಕಾಯಬೇಕಿದೆ. ಈ ಸ್ಮಾರ್ಟ್ಫೋನ್ ಅನ್ನು ನೀವು ಎರಡು ಬಣ್ಣಗಳಲ್ಲಿ Sapphire Blue ಮತ್ತು Pearl White ಬಣ್ಣಗಳಲ್ಲಿ ಖರಿಸಲು ಲಭ್ಯವಿರುತ್ತದೆ.
ಈ ಮುಂಬರಲಿರುವ ಈ Vivo V50e ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರದೊಂದಿಗೆ 6.77 ಇಂಚಿನ FHD+ ಕ್ವಾಡ್-ಕರ್ವ್ಡ್ AMOLED ಪ್ಯಾನೆಲ್‌ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಸ್ಮಾರ್ಟ್ಫೋನ್ 4,500 nits ಗರಿಷ್ಠ ಹೊಳಪನ್ನು ಪಡೆಯಬಹುದು.
ಇದರಲ್ಲಿನ ಕ್ಯಾಮೆರಾಗಳ ವಿಷಯದಲ್ಲಿ ಸ್ಮಾರ್ಟ್ಫೋನ್ OIS ಜೊತೆಗೆ 50MP IMX882 ಸಂವೇದಕ ಮತ್ತು 8MP ಅಲ್ಟ್ರಾವೈಡ್ ಸೆನ್ಸರ್ ಅನ್ನು ಒಳಗೊಂಡಂತೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಪಡೆಯಬಹುದು. ಮುಂಭಾಗದಲ್ಲಿ ಸ್ಮಾರ್ಟ್ಫೋನ್ 50MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿರಬಹುದು.
Vivo V50e ಸ್ಮಾರ್ಟ್‌ಫೋನ್ MediaTek Dimensity 7300 ಚಿಪ್‌ಸೆಟ್‌ನಿಂದ ಶಕ್ತಿಯನ್ನು ಪಡೆಯಬಹುದು ಮತ್ತು LPDDR4X ಮತ್ತು UFS 2.2 ಸ್ಟೋರೇಜ್‌ನೊಂದಿಗೆ ಬರಬಹುದು.
ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 15 ಆಧಾರಿತ FunTouch OS 15 ನಲ್ಲಿ ಕಾರ್ಯನಿರ್ವಹಿಸಬಹುದು ಮತ್ತು 90W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5600mAh ಬ್ಯಾಟರಿಯನ್ನು ಹೊಂದಿರಬಹುದು. ಇದು IP68+IP69 ಪ್ರಮಾಣೀಕರಣವನ್ನು ಸಹ ಪಡೆಯಬಹುದು.
Also Read: FREE IPL Streaming: ಜಿಯೋ ತಮ್ಮ ಗ್ರಾಹಕರಿಗೆ ಈ ಆಫರ್ ಈಗ ಮತ್ತೆ 2 ವಾರಕ್ಕೆ ವಿಸ್ತರಿಸಿದೆ!