Vivo V50 5G Price Drop: ಭಾರತದಲ್ಲಿ ನಿಮಗೊಂದು ಜಬರ್ದಸ್ತ್ ಫುಲ್ ಅಡ್ವಾನ್ಸ್ ಫೀಚರ್ ಹೊಂದಿರುವ ಲೇಟೆಸ್ಟ್ ಆಂಡ್ರಾಯ್ಡ್ 5G ಸ್ಮಾರ್ಟ್ಫೋನ್ ಹುಡುಕುತ್ತಿದ್ದರೆ ಇದೊಂದು ಅದ್ದೂರಿಯ ಡೀಲ್ ನಿಮಗಾಗಲಿದೆ. ಯಾಕೆಂದರೆ Vivo V50 5G ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್‌ನಲ್ಲಿ 2500 ರೂಗಳ ಬ್ಯಾಂಕ್ ಡಿಸ್ಕೌಂಟ್ ನೀಡುತ್ತಿದೆ. Vivo V50 5G ಸ್ಮಾರ್ಟ್ಫೋನ್ ಮೇಲೆ ಬರೋಬ್ಬರಿ ₹7500 ರೂಗಳ ಭಾರಿ ಬೆಲೆ ಕಡಿತವಾಗಿದ್ದು Vivo V50 5G ಸ್ಮಾರ್ಟ್ಫೋನ್ 50MP ಸೆಲ್ಫಿ ಕ್ಯಾಮೆರಾ ಮತ್ತು 6000mAh ಬ್ಯಾಟರಿಯೊಂದಿಗೆ ಬರುವ ಈ ಸ್ಮಾರ್ಟ್ಫೋನ್ ಬಗ್ಗೆ ಒಂದಿಷ್ಟು ಫುಲ್ ಮಾಹಿತಿ ಮತ್ತು ಆಫರ್ಗಳ ಬಗ್ಗೆ ಸಂಪೂರ್ಣ ಮಹಿತಿಯನ್ನು ತಿಳಿಯಿರಿ.
Vivo V50 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಮೂರು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹34,999 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹36,999 ರೂಗಳಿಗೆ ಪಟ್ಟಿ ಮಾಡಲಾಗಿದೆ.
ಮತ್ತು ಕೊನೆಯದಾಗಿ 12GB RAM ಮತ್ತು 512GB ಸ್ಟೋರೇಜ್ ರೂಪಾಂತರವನ್ನು ₹40,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು ಯಾವುದೇ ಬ್ಯಾಂಕ್ಗಳ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸುಮಾರು 2500 ರೂಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಪಡೆಯುವ ಮೂಲಕ Vivo V50 5G ಆರಂಭಿಕ ರೂಪಾಂತರವನ್ನು ಸುಮಾರು ₹32,499 ರೂಗಳವರೆಗಿನ ಕಡಿಮೆ ಬೆಲೆಗೆ ಖರೀದಿಸಬಹುದು.
Vivo V50 5G ಸ್ಮಾರ್ಟ್ಫೋನ್ ಅಲ್ಟ್ರಾ ಸ್ಲಿಮ್ ಕ್ವಾಡ್-ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿದ್ದು ಫೋನ್ 6.77 ಇಂಚಿನ ಡಿಸ್ಪ್ಲೇಯೊಂದಿಗೆ 2392×1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲ 120Hz ರಿಫ್ರೆಶ್ ದರ ಮತ್ತು 4500nits ಸ್ಥಳೀಯ ಪೀಕ್ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಇದು ರಕ್ಷಣೆಗಾಗಿ ಮೇಲ್ಭಾಗದಲ್ಲಿ ಡೈಮಂಡ್ ಶೀಲ್ಡ್ ಗ್ಲಾಸ್ ಅನ್ನು ಹೊಂದಿದೆ. ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಇದೆ.
Also Read: Best Split AC: ಅಮೆಜಾನ್‌ನಿಂದ ಕೈಗೆಟಕುವ ಬೆಲೆಗೆ ಅತ್ಯುತ್ತಮ Split AC ಅತಿ ಕಡಿಮೆ ಬೆಲೆಗೆ ಲಭ್ಯ!
Vivo V50 5G ಸ್ಮಾರ್ಟ್ಫೋನ್ ZEISS ಕ್ಯಾಮೆರಾ ಹೊಂದಿದ್ದು ಹಿಂಭಾಗದಲ್ಲಿ 50MP OIS ಕ್ಯಾಮೆರಾ ಜೊತೆಗೆ 50MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಇದೆ ಮತ್ತು ಸೆಲ್ಫಿಗಳಿಗಾಗಿ ಮುಂಭಾಗದಲ್ಲಿ 50MP AF ಸೆನ್ಸರ್ ಇದೆ. ಸಹಜವಾಗಿ ಈ Vivo V50 5G ಸ್ಮಾರ್ಟ್ಫೋನ್ ಸ್ಮಾರ್ಟ್ AI ವೈಶಿಷ್ಟ್ಯಗಳಿವೆ. ಇದರಲ್ಲಿ ಸರ್ಕಲ್ ಟು ಸರ್ಚ್, ವಿವೋ ಲೈವ್ ಕಾಲ್ ಟ್ರಾನ್ಸ್‌ಲೇಷನ್, AI ಟ್ರಾನ್ಸ್‌ಸ್ಕ್ರಿಪ್ಟ್ ಅಸಿಸ್ಟ್ ಮತ್ತು ಇನ್ನೂ ಹೆಚ್ಚಿನ AI ವೈಶಿಷ್ಟ್ಯಗಳಿವೆ.
Vivo V50 5G ಸ್ಮಾರ್ಟ್‌ಫೋನ್ Snapdragon 7 Gen 3 ಮೂಲಕ ಚಾಲಿತವಾಗಿದೆ. 12GB ವರೆಗೆ LPDDR4X RAM ಮತ್ತು 512GB UFS 2.2 ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ FuntouchOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು IP68 ಮತ್ತು IP69 ರೇಟಿಂಗ್ ಅನ್ನು ಹೊಂದಿದೆ ಮತ್ತು 90W ಫಾಸ್ಟ್-ಚಾರ್ಜ್ ಬೆಂಬಲದೊಂದಿಗೆ 6000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.