ಭಾರತದಲ್ಲಿ ವಿವೋ (Vivo) ಸ್ಮಾರ್ಟ್ಫೋನ್ ಕಂಪನಿ ಇಂದು ತನ್ನ 50MP ಸೆಲ್ಫಿ ಕ್ಯಾಮೆರಾವುಳ್ಳ Vivo V40e ಸ್ಮಾರ್ಟ್ಫೋನ್ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಕೇವಲ 28,999 ರೂಗಳಿಗೆ ಬಿಡುಗಡೆಗೊಳಿಸಿದೆ. ಅಲ್ಲದೆ Vivo V40e ಸ್ಮಾರ್ಟ್ಫೋನ್ ಇದರ ಪ್ರೀ-ಆರ್ಡರ್ ಈಗಾಗಲೇ ಶುರುವಾಗಿದ್ದು ಮೊದಲ ಮಾರಾಟವನ್ನು 02ನೇ ಅಕ್ಟೋಬರ್ 2024 ರಿಂದ ಫ್ಲಿಪ್ಕಾರ್ಟ್ ಮತ್ತು ವಿವೋ ವೆಬ್‌ಸೈಟ್ ಮತ್ತು ಆಯ್ದ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳ ಮೂಲಕ ಲಭ್ಯವಾಗಲಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಮೇಲೆ HDFC ಮತ್ತು SBI ಬ್ಯಾಂಕ್ಗಳ ಕಾರ್ಡ್ ಮೇಲೆ ಬರೋಬ್ಬರಿ 10% ಡಿಸ್ಕೌಂಟ್ ನೀಡುತ್ತಿದೆ.
ಭಾರತದಲ್ಲಿ ಇಂದು ಬಿಡುಗಡೆಯಾದ Vivo V40e ಸ್ಮಾರ್ಟ್ಫೋನ್ ಇದರ ಪ್ರೀ-ಆರ್ಡರ್ ಈಗಾಗಲೇ ಶುರುವಾಗಿದ್ದು ಮೊದಲ ಮಾರಾಟವನ್ನು 02ನೇ ಅಕ್ಟೋಬರ್ 2024 ರಿಂದ ಫ್ಲಿಪ್ಕಾರ್ಟ್ ಮತ್ತು ವಿವೋ ವೆಬ್‌ಸೈಟ್ ಮತ್ತು ಆಯ್ದ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳ ಮೂಲಕ ಲಭ್ಯವಾಗಲಿದೆ. Vivo V40e 5G ಸ್ಮಾರ್ಟ್ಫೋನ್ ನಿಮಗೆ Royal Bronze ಮತ್ತು Mint Green ಎಂಬ 2 ಆಕರ್ಷಕ ಬಣ್ಣಗಳಲ್ಲಿ ಖರೀದಿಸಬಹುದು. ಅಲ್ಲದೆ ಈ Vivo V40e 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ ಲಭ್ಯವಾಗಲಿದೆ..
ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಕೇವಲ 28,999 ರೂಗಳಿಗೆ ಬಿಡುಗಡೆಗೊಳಿಸಿದೆ. ಮತ್ತೊಂದು ಅದೇ 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ಕೇವಲ 30,999 ರೂಗಳಿಗೆ ಬಿಡುಗಡೆಗೊಳಿಸಿದೆ. ಆದರೆ HDFC ಮತ್ತು SBI ಬ್ಯಾಂಕ್ಗಳ ಕಾರ್ಡ್ ಮೇಲೆ ಬರೋಬ್ಬರಿ 10% ಡಿಸ್ಕೌಂಟ್ ನೀಡುತ್ತಿದ್ದು ಉಚಿತವಾಗಿ 10 ತಿಂಗಳ ಹೆಚ್ಚುವರಿ ವಾರಂಟಿಯನ್ನು ಮತ್ತು 10% ಗ್ಯಾರಂಟಿ ವಿನಿಮಯ ಬೋನಸ್ ಅನ್ನು ಸಹ ನೀಡುತ್ತಿದೆ.
Vivo V40e 5G ಸ್ಮಾರ್ಟ್ಫೋನ್ 6.77 ಇಂಚಿನ ಪೂರ್ಣ HD+ 3D ಕರ್ವ್ಡ್ AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರದೊಂದಿಗೆ ಹೊಂದಿದೆ. ಈ ಡಿಸ್ಪ್ಲೇಯ ಪಿಕ್ಸೆಲ್ ರೆಸಲ್ಯೂಶನ್ 2392 × 1080 ಆಗಿದೆ. ಈ ಫೋನ್ ಕೆಲವು AI ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಇದು AI ಫೋಟೋ ಮತ್ತು AI ಎರೇಸರ್ ಇತ್ಯಾದಿಗಳನ್ನು ಒಳಗೊಂಡಿದೆ. Vivo V40e 5G ಫೋಟೋಗ್ರಾಫಿಗಾಗಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50MP ಪ್ರೈಮರಿ ಕ್ಯಾಮೆರಾ ಮತ್ತು 8MP ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್ ಅನ್ನು ಹೊಂದಿದೆ. ಈ Vivo V40e 5G ಸ್ಮಾರ್ಟ್ಫೋನ್ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಫೋನ್‌ನ ಮುಂಭಾಗದಲ್ಲಿ 50MP ಕ್ಯಾಮೆರಾ ಇದೆ. ಇದು AF ಗ್ರೂಪ್ ಸೆಲ್ಫಿ ಕ್ಯಾಮೆರಾ ಫೀಚರ್ ಹೊಂದಿದೆ.
Also Read: Nothing Ear Open Earbuds: ನಥಿಂಗ್ ಸದ್ದಿಲ್ಲದೆ ತನ್ನ ಮೊದಲ ಓಪನ್ ಇಯರ್ ಇಯರ್‌ಬಡ್ ಬಿಡುಗಡೆಗೊಳಿಸಿದೆ.
ವಿವೋ ಕಂಪನಿಯು ಈ ಆಕರ್ಷಕ Vivo V40e 5G ಸ್ಮಾರ್ಟ್‌ಫೋನ್‌ನಲ್ಲಿ MediaTek Dimensity 7300 5G ಚಿಪ್‌ಸೆಟ್ ಅನ್ನು ನೀಡಲಾಗಿದೆ. ಈಗಾಗಲೇ ಹೇಳಿರುವಂತೆ ಇದರ ಮೂಲಕ ನೀವು ಅತ್ಯುತ್ತಮ ಮೊಬೈಲ್ ಅನುಭವವನ್ನು ಪಡೆಯುತ್ತೀರಿ. ಪವರ್ ಬ್ಯಾಕಪ್‌ಗಾಗಿ ಫೋನ್ 5500mAh ಬ್ಯಾಟರಿಯನ್ನು ಹೊಂದಿದೆ. ಇದು 80W FlashCharge ಬೆಂಬಲದೊಂದಿಗೆ ಬರುತ್ತದೆ. ಇದು 98 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಮತ್ತು 20 ಗಂಟೆಗಳ ಯೂಟ್ಯೂಬ್ ಪ್ಲೇಬ್ಯಾಕ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.