50MP ಸೆಲ್ಫಿ ಕ್ಯಾಮೆರಾದ Vivo V40e 5G ಭಾರತದಲ್ಲಿ ಬಿಡುಗಡೆಗೆ ಡೇಟ್ ಫಿಕ್ಸ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

50MP ಸೆಲ್ಫಿ ಕ್ಯಾಮೆರಾದ Vivo V40e 5G ಭಾರತದಲ್ಲಿ ಬಿಡುಗಡೆಗೆ ಡೇಟ್ ಫಿಕ್ಸ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
HIGHLIGHTS

Vivo V40e 5G ಸ್ಮಾರ್ಟ್ಫೋನ್ 25ನೇ ಸೆಪ್ಟೆಂಬರ್ 2024 ರಂದು ಮಧ್ಯಾಹ್ನ 12:00 ಗಂಟೆಗೆ ಅಧಿಕೃತವಾಗಿ ಬಿಡುಗಡೆಗೊಳಿಸಲು ಸಿದ್ದ

Vivo V40e 5G ಸ್ಮಾರ್ಟ್ಫೋನ್ ಬಿಡುಗಡೆಗೂ ಮುಂಚಿತವಾಗಿ ಒಂದಿಷ್ಟು ಫೀಚರ್ ಮಾಹಿತಿಗಳನ್ನು ಬಹಿರಂಗಪಡಿಸಿದೆ.

ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ವಿವೋ (Vivo) ಈಗ ತನ್ನ ಲೇಟೆಸ್ಟ್ Vivo V40e 5G ಸ್ಮಾರ್ಟ್ಫೋನ್ ಅನ್ನು ಮುಂದಿನ ವಾರ ಅಂದರೆ 25ನೇ ಸೆಪ್ಟೆಂಬರ್ 2024 ರಂದು ಮಧ್ಯಾಹ್ನ 12:00 ಗಂಟೆಗೆ ಅಧಿಕೃತವಾಗಿ ಬಿಡುಗಡೆಗೊಳಿಸಲು ಸಿದ್ದವಾಗಿದೆ. ಅಲ್ಲದೆ ಕಂಪನಿ Vivo V40e 5G ಸ್ಮಾರ್ಟ್ಫೋನ್ ಬಿಡುಗಡೆಗೂ ಮುಂಚಿತವಾಗಿ ಒಂದಿಷ್ಟು ಫೀಚರ್ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಈ ಫೀಚರ್ ಆಧಾರದಿಂದಲೇ ನಿರೀಕ್ಷಿತ ಬೆಲೆ ಮತ್ತು ಹೆಚ್ಚಿನ ವಿಶೇಷತೆಗಳನ್ನು ಊಹಿಸಬಹುದು. AMOLED ಡಿಸ್ಪ್ಲೇ ಮತ್ತು MediaTek Dimensity ಚಿಪ್ ಜೊತೆಗೆ 12GB RAM ನೀಡುವುದಾಗಿ ಮಾಹಿತಿ ನೀಡಿದೆ. Vivo V40e 5G ಭಾರತದಲ್ಲಿ ಯಾವ ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೊಂದಿಗೆ ಬರುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಯಿರಿ.

Also Read: Jio Dhamaka: ಬರೋಬ್ಬರಿ 365 ದಿನಗಳ ಈ ಉಚಿತ Air Fiber ಧಮಾಕ ಆಫರ್ ಪಡೆಯೋದು ಹೇಗೆ?

ಭಾರತದಲ್ಲಿ Vivo V40e 5G ನಿರೀಕ್ಷಿತ ಬೆಲೆ ಮತ್ತು ಲಭ್ಯತೆ

ಮೊದಲಿಗೆ ಈ ಮುಂಬರಲಿರುವ ಸ್ಮಾರ್ಟ್ಫೋನ್ ನಿರೀಕ್ಷಿತ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ Vivo V40e 5G ನಿಮಗೆ ಒಟ್ಟಾರೆಯಾಗಿ ಎರಡು ರೂಪಾಂತರಗಳಲ್ಲಿ ಬಿಡುಗಡೆಯನ್ನು ನಿರೀಕ್ಷಿಸಬಹುದು. ಅವೆಂದರೆ ಮೊದಲಿಗೆ 8GB RAM ಮತ್ತು 256GB ಸ್ಟೋರೇಜ್ 29,999 ರೂಗಳಿಗೆ ಬರಬಹುದು. ಇದರ ಕ್ರಮವಾಗಿ ಮತ್ತೊಂದು 8GB RAM ಮತ್ತು 512GB ಸ್ಟೋರೇಜ್ ಸುಮಾರು 32,999 ರೂಗಳಿಗೆ ನಿರೀಕ್ಷಿಸಬಹುದು. ಆದರೆ ಬಿಡುಗಡೆಯ ನಂತರವಷ್ಟೇ ಇವುಗಳ ರೂಪಾಂತರ ಮತ್ತು ಬೆಲೆ ಪಡೆಯಬಹುದು. ಅಲ್ಲದೆ ಈಗಾಗಲೇ ಕಂಪನಿ Vivo V40e 5G ಮೈಕ್ರೋಸೈಟ್ ಅನ್ನು ಫ್ಲಿಪ್ಕಾರ್ಟ್ ಮೂಲಕ ಪೋಸ್ಟ್ ಮಾಡಿದ್ದು ಈ ಸ್ಮಾರ್ಟ್ಫೋನ್ ಯಾವುದೇ ಸಂಶವಿಲ್ಲದೆ ನೇರವಾಗಿ Flipkart ಮೂಲಕ ಮಾರಾಟವಾಗಲಿದೆ.

Vivo V40e 5G launch date confirmed in India
Vivo V40e 5G launch date confirmed in India

ಭಾರತದಲ್ಲಿ Vivo V40e 5G ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳು

Vivo V40e 5G ಸ್ಮಾರ್ಟ್ಫೋನ್ ಕರ್ವ್ ಕಾರ್ನರ್ಗಳೊಂದಿಗೆ 6.78 ಇಂಚಿನ 1.5K 120Hz 3D Curved AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ. ಈ ಸ್ಕ್ರೀನ್ HDR10+ ಬೆಂಬಲದೊಂದಿಗೆ 120Hz ರಿಫ್ರೆಶ್ ರೇಟ್ ಅನ್ನು ಹೊಂದಿದ್ದು ಸುಮಾರು 4500nits ಗರಿಷ್ಠ ಹೊಳಪನ್ನು ನೀಡುತ್ತದೆ. ಸ್ಮಾರ್ಟ್ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50MP ಪ್ರೈಮರಿ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿರುತ್ತದೆ. ಸ್ಮಾರ್ಟ್ಫೋನ್ ಸೆಲ್ಫಿಗಳಿಗಾಗಿ 50MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ.

Vivo V40e 5G ಸ್ಮಾರ್ಟ್ಫೋನ್ MediaTek Dimensity ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ. ಈಗಾಗಲೇ ಹೇಳಿರುವಂತೆ ಸ್ಮಾರ್ಟ್ಫೋನ್ 256GB 8GB ಮತ್ತು 12GB LPDDR4x RAM ಜೊತೆಗೆ 256GB ಮತ್ತು 512GB ಸ್ಟೋರೇಜ್ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಇದರ ಹೆಚ್ಚುವರಿಯಾಗಿ ಸ್ಮಾರ್ಟ್ಫೋನ್ ಉತ್ತಮವಾದ 5500mAh ಬ್ಯಾಟರಿಯನ್ನು 80W ಫಾಸ್ಟ್ ಚಾರ್ಜಿಂಗ್ನೊಂದಿಗೆ ಬರುವುದಾಗಿ ನಿರೀಕ್ಷಿಸಲಾಗಿದೆ. ಇದರ ಈ ದೊಡ್ಡ ಬ್ಯಾಟರಿಯ ಹೊರತಾಗಿಯೂ ಫೋನ್ ಸ್ಲಿಮ್ ಪ್ರೊಫೈಲ್ ಅನ್ನು ನಿರ್ವಹಿಸುತ್ತದೆ. Vivo V40e 5G ಸ್ಮಾರ್ಟ್ಫೋನ್ IP68 ರೇಟೆಡ್ ಧೂಳು ಮತ್ತು ನೀರಿನ ಪ್ರತಿರೋಧವನ್ನು ಅಳವಡಿಸಿರುವುದನ್ನು ನಿರೀಕ್ಷಿಸಲಾಗುತ್ತಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo