Vivo V40 Series to launch in India soon: ಭಾರತದಲ್ಲಿ Vivo ತಮ್ಮ ಮುಂಬರಲಿರುವ Vivo V40 Series ಸ್ಮಾರ್ಟ್‌ಫೋನ್ ಸರಣಿಯನ್ನು ಪ್ರಾರಂಭಿಸಲು ಸಿದ್ಧವಾಗಿದ್ದು ಈ ಸರಣಿಯ ಸ್ಮಾರ್ಟ್ಫೋನ್ಗಳಲ್ಲಿ ಕಂಪನಿ ಪ್ರಸ್ತುತ Vivo V40 ಮತ್ತು Vivo V40 Pro ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಈ ಮುಂಬರುವ ವಿವೋ ಸ್ಮಾರ್ಟ್‌ಫೋನ್ ನೀವು ಊಹೆಗಿಂತ ಅಧಿಕವಾಗಿ ಬರೋಬ್ಬರಿ ನಾಲ್ಕು 50MP ಮೆಗಾಪಿಕ್ಸಿಲ್ ಹೊಂದಿರುವ ZEISS ಸೆನ್ಸರ್‌ಗಳ ಕ್ಯಾಮೆರಾ ಲೆನ್ಸ್ ಅನ್ನು ಫೋನ್ ಒಳಗೊಳ್ಳಲಿದೆ. ಇದರ ಬಗ್ಗೆ ಈಗಾಗಲೇ Vivo ಕಂಪನಿ ಒಂದಿಷ್ಟು ಮಾಹಿತಿಯನ್ನು ಫ್ಲಿಪ್ಕಾರ್ಟ್ ಮೂಲಕ ಹಂಚಿಕೊಂಡಿದೆ. ಆದರೆ ಈ Vivo V40 Series ಭಾರತದಲ್ಲಿ 7ನೇ ಆಗಸ್ಟ್ 2024 ರಂದು ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಲಿದೆ.
Vivo ತಮ್ಮ ಮುಂಬರಲಿರುವ Vivo V40 Series ಸ್ಮಾರ್ಟ್‌ಫೋನ್ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಕ್ಯಾಮೆರಾ ಪ್ರಿಯಾರಿಗಾಗಿ ಪ್ರಮುಖವಾದ ಸೆನ್ಸರ್ ನೀಡುತ್ತಿದ್ದು ಕಂಪನಿಯ ತಮ್ಮ ಟೀಸರ್‌ನಿಂದ ಈ ಫೋನ್ ಪವರ್ಫುಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಎಂದು ತೋರುತ್ತದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50MP Zeiss ಅಲ್ಟ್ರಾ ವೈಡ್ ಕ್ಯಾಮೆರಾದೊಂದಿಗೆ OIS ಬೆಂಬಲದೊಂದಿಗೆ 50MP (Sony IMX 921) ಮುಖ್ಯ ಕ್ಯಾಮೆರಾ ಮತ್ತು 50MP (Sony IMX 816) ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ.
ಇದಲ್ಲದೆ ಈ ಫೋನ್ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 50MP ವೈಡ್ ಆಂಗಲ್ ಕ್ಯಾಮೆರಾವನ್ನು ಸಹ ಒಳಗೊಂಡಿರುವ ನಿರೀಕ್ಷೆಗಳಿವೆ. ಕಂಪನಿಯ ಈ ಸ್ಮಾರ್ಟ್ಫೋನ್ 4 ದೊಡ್ಡ ಮತ್ತು ಅತ್ಯುತ್ತಮವಾದ ಕ್ಯಾಮೆರಾ ZEISS ಸೆನ್ಸರ್‌ಗಳ ಆಪ್ಟಿಕ್ಸ್ ಮತ್ತು ಫಿಲ್ಟರ್‌ಗಳ ಬೆಂಬಲವನ್ನು ಹೊಂದಿವೆ. ಈ ಫೋನ್ 2X ಆಪ್ಟಿಕಲ್ ಮತ್ತು 50X Zeiss ಹೈಪರ್ ಜೂಮ್ ಬೆಂಬಲದೊಂದಿಗೆ ಬರುತ್ತದೆ. ಅತ್ಯುತ್ತಮವಾದ ಪೋಟ್ರೇಟ್ ಮತ್ತು ನೈಟ್ ಮೊಡ್ ಫೋಟೋಗಳೊಂದಿಗೆ ನೀವು ಈ ಫೋನ್‌ನೊಂದಿಗೆ ಉತ್ತಮ ವೀಡಿಯೊಗಳನ್ನು ಪಡೆಯಬಹುದು ಎಂದು Vivo ಹೇಳುತ್ತದೆ.
Also Read: ನಿಮಗೊತ್ತಾ! mAadhaar ಅಪ್ಲಿಕೇಶನ್‌ನಿಂದ ಯಾವುದೇ ಮಾಹಿತಿ ಅಪ್ಡೇಟ್ ಮಾಡಲು ಅರ್ಜಿ ಸಲ್ಲಿಸಬಹುದು!
ಈ Vivo 40 ಸರಣಿಯ ಫೋನ್‌ಗಳ ವಿನ್ಯಾಸ ಮತ್ತು ಇತರ ವೈಶಿಷ್ಟ್ಯಗಳಿಗೆ ಬಂದಾಗ ಈ ಫೋನ್ ವಿನ್ಯಾಸ ಮತ್ತು ನೋಟದಲ್ಲಿ ಉತ್ತಮವಾಗಿ ಕಾಣುತ್ತದೆ. ಫೋನ್ ಆಕರ್ಷಕ ಹಿಂಬದಿಯ ಕ್ಯಾಮೆರಾ ವಿನ್ಯಾಸ ಮತ್ತು ಔರಾ ಲೈಟ್ ಅನ್ನು ಸಹ ಹೊಂದಿದೆ. ಈ ಮುಂಬರುವ ಫೋನ್ IP68 ರೇಟಿಂಗ್‌ನೊಂದಿಗೆ ನೀರಿನ ನಿರೋಧಕವಾಗಿದೆ. ವಿವೋ ಈ ಫೋನ್‌ನ ಬ್ಯಾಟರಿ ಮತ್ತು ಚಾರ್ಜ್ ತಂತ್ರಜ್ಞಾನವನ್ನು ಮೊದಲೇ ಮಾಡಿದೆ. ಈ ಫೋನ್ 5500 mAh ದೊಡ್ಡ ಬ್ಯಾಟರಿ ಮತ್ತು 80W ಫಾಸ್ಟ್ ಚಾರ್ಜ್ ಬೆಂಬಲವನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ವಿವೋ ಈ ಫೋನ್ ಅನ್ನು ಮೂರು ಪ್ರೀಮಿಯಂ ಬಣ್ಣಗಳಲ್ಲಿ ಲೋಟಸ್ ಪರ್ಪಲ್, ಗಂಗಾ ಬ್ಲೂ ಮತ್ತು ಟೈಟಾನಿಯಂ ಗ್ರೇಗಳಲ್ಲಿ ನೀಡಲಾಗುವುದು ಎಂದು ಲೇವಡಿ ಮಾಡುತ್ತಿದೆ.