Vivo V40 Series ಫೋನ್‌ಗಳು 50MP ZEISS ಕ್ಯಾಮೆರಾಗಳೊಂದಿಗೆ ಭಾರತದಲ್ಲಿ ಬಿಡುಗಡೆ ಸಜ್ಜು!
ಮುಂಬರಲಿರುವ Vivo V40 Series ಫೋನ್‌ಗಳು 50MP ZEISS ಕ್ಯಾಮೆರಾಗಳೊಂದಿಗೆ ಬಿಡುಗಡೆಯಾಗಲಿವೆ.
ವಿವೋ ಕಂಪನಿ ಈ ಸರಣಿಯಲ್ಲಿ ಪ್ರಸ್ತುತ Vivo V40 ಮತ್ತು Vivo V40 Pro ರೂಪಾಂತರವನ್ನು ಬಿಡುಗಡೆಗೊಳಿಸಲಿದೆ.
Vivo V40 Series ಭಾರತದಲ್ಲಿ 7ನೇ ಆಗಸ್ಟ್ 2024 ರಂದು ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಲಿದೆ.
Vivo V40 Series to launch in India soon: ಭಾರತದಲ್ಲಿ Vivo ತಮ್ಮ ಮುಂಬರಲಿರುವ Vivo V40 Series ಸ್ಮಾರ್ಟ್‌ಫೋನ್ ಸರಣಿಯನ್ನು ಪ್ರಾರಂಭಿಸಲು ಸಿದ್ಧವಾಗಿದ್ದು ಈ ಸರಣಿಯ ಸ್ಮಾರ್ಟ್ಫೋನ್ಗಳಲ್ಲಿ ಕಂಪನಿ ಪ್ರಸ್ತುತ Vivo V40 ಮತ್ತು Vivo V40 Pro ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಈ ಮುಂಬರುವ ವಿವೋ ಸ್ಮಾರ್ಟ್‌ಫೋನ್ ನೀವು ಊಹೆಗಿಂತ ಅಧಿಕವಾಗಿ ಬರೋಬ್ಬರಿ ನಾಲ್ಕು 50MP ಮೆಗಾಪಿಕ್ಸಿಲ್ ಹೊಂದಿರುವ ZEISS ಸೆನ್ಸರ್‌ಗಳ ಕ್ಯಾಮೆರಾ ಲೆನ್ಸ್ ಅನ್ನು ಫೋನ್ ಒಳಗೊಳ್ಳಲಿದೆ. ಇದರ ಬಗ್ಗೆ ಈಗಾಗಲೇ Vivo ಕಂಪನಿ ಒಂದಿಷ್ಟು ಮಾಹಿತಿಯನ್ನು ಫ್ಲಿಪ್ಕಾರ್ಟ್ ಮೂಲಕ ಹಂಚಿಕೊಂಡಿದೆ. ಆದರೆ ಈ Vivo V40 Series ಭಾರತದಲ್ಲಿ 7ನೇ ಆಗಸ್ಟ್ 2024 ರಂದು ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಲಿದೆ.
Vivo V40 Series ಕ್ಯಾಮೆರಾ ಹೇಗಿರಲಿದೆ?
Vivo ತಮ್ಮ ಮುಂಬರಲಿರುವ Vivo V40 Series ಸ್ಮಾರ್ಟ್‌ಫೋನ್ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಕ್ಯಾಮೆರಾ ಪ್ರಿಯಾರಿಗಾಗಿ ಪ್ರಮುಖವಾದ ಸೆನ್ಸರ್ ನೀಡುತ್ತಿದ್ದು ಕಂಪನಿಯ ತಮ್ಮ ಟೀಸರ್‌ನಿಂದ ಈ ಫೋನ್ ಪವರ್ಫುಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಎಂದು ತೋರುತ್ತದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50MP Zeiss ಅಲ್ಟ್ರಾ ವೈಡ್ ಕ್ಯಾಮೆರಾದೊಂದಿಗೆ OIS ಬೆಂಬಲದೊಂದಿಗೆ 50MP (Sony IMX 921) ಮುಖ್ಯ ಕ್ಯಾಮೆರಾ ಮತ್ತು 50MP (Sony IMX 816) ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ.
ಇದಲ್ಲದೆ ಈ ಫೋನ್ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 50MP ವೈಡ್ ಆಂಗಲ್ ಕ್ಯಾಮೆರಾವನ್ನು ಸಹ ಒಳಗೊಂಡಿರುವ ನಿರೀಕ್ಷೆಗಳಿವೆ. ಕಂಪನಿಯ ಈ ಸ್ಮಾರ್ಟ್ಫೋನ್ 4 ದೊಡ್ಡ ಮತ್ತು ಅತ್ಯುತ್ತಮವಾದ ಕ್ಯಾಮೆರಾ ZEISS ಸೆನ್ಸರ್‌ಗಳ ಆಪ್ಟಿಕ್ಸ್ ಮತ್ತು ಫಿಲ್ಟರ್‌ಗಳ ಬೆಂಬಲವನ್ನು ಹೊಂದಿವೆ. ಈ ಫೋನ್ 2X ಆಪ್ಟಿಕಲ್ ಮತ್ತು 50X Zeiss ಹೈಪರ್ ಜೂಮ್ ಬೆಂಬಲದೊಂದಿಗೆ ಬರುತ್ತದೆ. ಅತ್ಯುತ್ತಮವಾದ ಪೋಟ್ರೇಟ್ ಮತ್ತು ನೈಟ್ ಮೊಡ್ ಫೋಟೋಗಳೊಂದಿಗೆ ನೀವು ಈ ಫೋನ್‌ನೊಂದಿಗೆ ಉತ್ತಮ ವೀಡಿಯೊಗಳನ್ನು ಪಡೆಯಬಹುದು ಎಂದು Vivo ಹೇಳುತ್ತದೆ.
Also Read: ನಿಮಗೊತ್ತಾ! mAadhaar ಅಪ್ಲಿಕೇಶನ್‌ನಿಂದ ಯಾವುದೇ ಮಾಹಿತಿ ಅಪ್ಡೇಟ್ ಮಾಡಲು ಅರ್ಜಿ ಸಲ್ಲಿಸಬಹುದು!
Vivo V40 Series ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳೇನು?
ಈ Vivo 40 ಸರಣಿಯ ಫೋನ್‌ಗಳ ವಿನ್ಯಾಸ ಮತ್ತು ಇತರ ವೈಶಿಷ್ಟ್ಯಗಳಿಗೆ ಬಂದಾಗ ಈ ಫೋನ್ ವಿನ್ಯಾಸ ಮತ್ತು ನೋಟದಲ್ಲಿ ಉತ್ತಮವಾಗಿ ಕಾಣುತ್ತದೆ. ಫೋನ್ ಆಕರ್ಷಕ ಹಿಂಬದಿಯ ಕ್ಯಾಮೆರಾ ವಿನ್ಯಾಸ ಮತ್ತು ಔರಾ ಲೈಟ್ ಅನ್ನು ಸಹ ಹೊಂದಿದೆ. ಈ ಮುಂಬರುವ ಫೋನ್ IP68 ರೇಟಿಂಗ್‌ನೊಂದಿಗೆ ನೀರಿನ ನಿರೋಧಕವಾಗಿದೆ. ವಿವೋ ಈ ಫೋನ್‌ನ ಬ್ಯಾಟರಿ ಮತ್ತು ಚಾರ್ಜ್ ತಂತ್ರಜ್ಞಾನವನ್ನು ಮೊದಲೇ ಮಾಡಿದೆ. ಈ ಫೋನ್ 5500 mAh ದೊಡ್ಡ ಬ್ಯಾಟರಿ ಮತ್ತು 80W ಫಾಸ್ಟ್ ಚಾರ್ಜ್ ಬೆಂಬಲವನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ವಿವೋ ಈ ಫೋನ್ ಅನ್ನು ಮೂರು ಪ್ರೀಮಿಯಂ ಬಣ್ಣಗಳಲ್ಲಿ ಲೋಟಸ್ ಪರ್ಪಲ್, ಗಂಗಾ ಬ್ಲೂ ಮತ್ತು ಟೈಟಾನಿಯಂ ಗ್ರೇಗಳಲ್ಲಿ ನೀಡಲಾಗುವುದು ಎಂದು ಲೇವಡಿ ಮಾಡುತ್ತಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile