ಭಾರತದಲ್ಲಿ ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ವಿವೋ (Vivo) ತಮ್ಮ ಹೊಸ ಸ್ಮಾರ್ಟ್‌ಫೋನ್‌ಗಳನ್ನು V40 ಸರಣಿಯಲ್ಲಿ ಇಂದು ಅಂದ್ರೆ 7ನೇ ಆಗಸ್ಟ್ 2024 ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿವೆ. ಕಂಪನಿ ಈ Vivo V40 Series ವಿಭಾಗದಲ್ಲಿ ಪ್ರಮುಖವಾಗಿ Vivo V40 ಮತ್ತು Vivo V40 Pro ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಲೇಟೆಸ್ಟ್ ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಗೆ ಬಿಡುಗಡೆಗೊಳಿಸಿದೆ. Vivo V40 Series ವಿಶೇಷತೆಗಳನ್ನು ನೋಡುವುದಾದರೆ ಇವುಗಳಲ್ಲಿನ 50MP ಸೆಲ್ಫಿ ಕ್ಯಾಮೆರಾ, ಮತ್ತು ಡಸ್ಟ್ ಮತ್ತು ವಾಟರ್ ಪ್ರೂಫ್‌ಗಾಗಿ IP68 ರೇಟಿಂಗ್ ನೊಂದಿಗೆ 5500mAh ಬ್ಯಾಟರಿಯನ್ನು ಹೊಂದಿವೆ. ಇವುಗಳ ಬೆಲೆ ಮತ್ತು ಲಭ್ಯತೆಯೊಂದಿಗೆ ಟಾಪ್ ಫೀಚರ್‌ಗಳೇನು ಎಂಬುದನ್ನು ಈ ಕೆಳಗೆ ತಿಳಿಯಬಹುದು.
Also Read: 16GB RAM ಮತ್ತು Intel Core i7 ಪ್ರೊಸೆಸರ್‌ನ ಈ MSI Laptop ಅತಿ ಕಡಿಮೆ ಬೆಲೆಗೆ ಅಮೆಜಾನ್‌ನಲ್ಲಿ ಮಾರಾಟವಾಗುತ್ತಿದೆ
ಭಾರತದಲ್ಲಿ ಇಂದು ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ವಿವೋ (Vivo) ಸ್ಮಾರ್ಟ್‌ಫೋನ್ ಬ್ರಾಂಡ್ ತನ್ನ ಲೇಟೆಸ್ಟ್ Vivo V40 ಮತ್ತು Vivo V40 Pro ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಿದ್ದು ಇದರ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ ಸ್ಮಾರ್ಟ್‌ಫೋನ್‌ಗಳು ಇಂದಿನಿಂದ ಪ್ರೀ-ಆರ್ಡರ್ ಮಾಡಲು ಲಭ್ಯವಿದ್ದು ಮೊದಲಿಗೆ Vivo V40 Pro ಸ್ಮಾರ್ಟ್‌ಫೋನ್ ಇದರ ಮೊದಲ ಮಾರಾಟ 13ನೇ ಆಗಸ್ಟ್ 2024 ರಿಂದ ಮತ್ತು Vivo V40 ಸ್ಮಾರ್ಟ್‌ಫೋನ್ ಇದರ ಮೊದಲ ಮಾರಾಟ 19ನೇ ಆಗಸ್ಟ್ 2024 ರಿಂದ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮತ್ತು ವಿವೋ ವೆಬ್‌ಸೈಟ್ ಮೂಲಕ ಮೊದಲ ಮಾರಾಟದಲ್ಲಿ ಖರೀದಿಸಲು ಲಭ್ಯವಾಗಲಿದೆ.
ಕೊನೆಯದಾಗಿ ಈ Vivo V40 Series ಸ್ಮಾರ್ಟ್‌ಫೋನ್‌ಗಳ ಫೀಚರ್ ಮತ್ತು ವಿಶೇಷತೆಗಳನ್ನು ನೋಡುವುದಾದರೆ ಮೊದಲಿಗೆ Vivo V40 ಮತ್ತು Vivo V40 Pro ಸ್ಮಾರ್ಟ್ಫೋನ್ ಗ್ಲಾಸ್ ಬ್ಯಾಕ್ ಪ್ಯಾನಲ್ನೊಂದಿಗೆ 6.78 ಇಂಚಿನ AMOLED ಡಿಸ್ಪ್ಲೇಯನ್ನು 2800×1260 ಪಿಕ್ಸೆಲ್‌ಗಳ ರೆಸಲ್ಯೂಷನ್ನೊಂದಿಗೆ ಬರುತ್ತದೆ. ಅಲ್ಲದೆ ಇವುಗಳ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಜೊತೆಗೆ ಸುಮಾರು 4500 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿವೆ.
Vivo V40 Pro ಸ್ಮಾರ್ಟ್ಫೋನ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9200+ ಪ್ರೊಸೆಸರ್ ಜೊತೆಗೆ 12GB RAM ಮತ್ತು 512GB ವರೆಗೆ ಸ್ಟೋರೇಜ್ ಹೊಂದಿದೆ. ಮತ್ತೊಂದೆಡೆ Vivo V40 ಸ್ಮಾರ್ಟ್ಫೋನ್ 4nm Qualcomm Snapdragon7 Gen 3 ಪ್ರೊಸೆಸರ್ ನಲ್ಲಿ 12GB RAM ಮತ್ತು 512GB ಸ್ಟೋರೇಜ್ ಕಾರ್ಯನಿರ್ವಹಿಸುತ್ತದೆ. ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸ್ಕ್ಯಾನರ್ ಅನ್ನು ಪ್ರದರ್ಶಿಸುತ್ತಾರೆ. ಎರಡೂ ಹ್ಯಾಂಡ್‌ಸೆಟ್‌ಗಳು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68-ರೇಟೆಡ್ ನಿರ್ಮಾಣವನ್ನು ಹೊಂದಿವೆ. ಎರಡು ಫೋನ್ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ Vivo V40 ಮತ್ತು Vivo V40 Pro ಎರಡರಲ್ಲೂ 5500mAh ಬ್ಯಾಟರಿಗಳನ್ನು ಪ್ಯಾಕ್ ಮಾಡಿದೆ.
Vivo V40 ಸ್ಮಾರ್ಟ್ಫೋನ್ OIS ಮತ್ತು AF ಜೊತೆಗೆ 50MP ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 50MP ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾವನ್ನು ಒಳಗೊಂಡಂತೆ Zeiss ನೊಂದಿಗೆ ಸಹ-ಇಂಜಿನಿಯರಿಂಗ್ ಮಾಡಲಾದ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಕ್ರಮವಾಗಿ Vivo V40 Pro ಔರಾ ಲೈಟ್ ಫ್ಲ್ಯಾಷ್‌ನೊಂದಿಗೆ Zeiss-ಬ್ರಾಂಡ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಕ್ಯಾಮೆರಾ ಸೆಟಪ್ ಆಟೋಫೋಕಸ್ ಮತ್ತು OIS ಬೆಂಬಲದೊಂದಿಗೆ 50MP ಮೆಗಾಪಿಕ್ಸೆಲ್ ಸೋನಿ IMX921 ಪ್ರೈಮರಿ ಸೆನ್ಸರ್ 50MP ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಮತ್ತು 2x ಆಪ್ಟಿಕಲ್ ಜೂಮ್ ಮತ್ತು 50x ಡಿಜಿಟಲ್ ಜೂಮ್‌ನೊಂದಿಗೆ ಮತ್ತೊಂದು 50MP ಮೆಗಾಪಿಕ್ಸೆಲ್ ಸೋನಿ IMX816 ಟೆಲಿಫೋಟೋ ಪೋಟ್ರೇಟ್ ಸೆನ್ಸರ್ ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಎರಡೂ ಹ್ಯಾಂಡ್‌ಸೆಟ್‌ಗಳು 50MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿವೆ.