Vivo V40 Series ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ 7ನೇ ಆಗಸ್ಟ್ 2024 ರಂದು ಬಿಡುಗಡೆ ಕಂಫಾರ್ಮ್!

Vivo V40 Series ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ 7ನೇ ಆಗಸ್ಟ್ 2024 ರಂದು ಬಿಡುಗಡೆ ಕಂಫಾರ್ಮ್!
HIGHLIGHTS

ಮುಂಬರಲಿರುವ Vivo V40 Series ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯ ದಿನಾಂಕವನ್ನು ಈಗ ಧೃಡವಾಗಿದೆ.

ಈ ಸರಣಿಯಲ್ಲಿ ಪ್ರಸ್ತುತ Vivo V40 ಮತ್ತು Vivo V40 Pro ಎರಡು ಸ್ಮಾರ್ಟ್‌ಫೋನ್‌ಗಳು ಅನಾವರಣಗೊಳ್ಳಲಿದೆ.

Vivo V40 Series ಫೋನ್‌ಗಳು 7ನೇ ಆಗಸ್ಟ್ 2024 ರಂದು ಮಧ್ಯಾಹ್ನ 12:00 ಗಂಟೆಗೆ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಲಿದೆ.

ಭಾರತದಲ್ಲಿ ಚೀನಾದ ಸ್ಮಾರ್ಟ್ಫೋನ್ ತಯಾರಕ ಕಂಪನಿ ವಿವೋ ತನ್ನ ಮುಂಬರಲಿರುವ Vivo V40 Series ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯ ದಿನಾಂಕವನ್ನು ಈಗ ಅಧಿಕೃತವಾಗಿ ಘೋಷಿಸಿದ್ದಾರೆ. ಕಂಪನಿ ಈ ಸರಣಿಯಲ್ಲಿ ಪ್ರಸ್ತುತ Vivo V40 ಮತ್ತು Vivo V40 Pro ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಲಿದೆ. Vivo V40 Series ಸ್ಮಾರ್ಟ್‌ಫೋನ್‌ಗಳನ್ನು 7ನೇ ಆಗಸ್ಟ್ 2024 ರಂದು ಮಧ್ಯಾಹ್ನ 12:00 ಗಂಟೆಗೆ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಲಿದೆ. ಇದರ ಬಗ್ಗೆ ಕಂಪನಿ ಈಗಾಗಲೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನು ಅಪ್ಡೇಟ್ ಸಹ ಮಾಡಿದೆ. Vivo V40 Series ಸ್ಮಾರ್ಟ್‌ಫೋನ್‌ಗಳ ಬಿಡುಗಡೆಗೂ ಮುಂಚೆ ಲಭ್ಯವಿರುವ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪರಿಶಿಸಲಿಸಬಹುದು.

Vivo V40 Series ಸ್ಮಾರ್ಟ್‌ಫೋನ್‌ ನಿರೀಕ್ಷಿತ ಬೆಲೆ ಮತ್ತು ಲಭ್ಯತೆ

ಈ ಮುಂಭಾಗಳಿರುವ ವಿವೊ ಕಂಪನಿಯ ಈ Vivo V40 Series ಸ್ಮಾರ್ಟ್‌ಫೋನ್‌ ನಿರೀಕ್ಷಿತ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ ಕಂಪನಿ ಈಗಾಗಲೇ ಮೇಲೆ ತಿಳಿಸುವಂತೆ ಪ್ರಸ್ತುತ Vivo V40 ಸ್ಮಾರ್ಟ್ಫೋನ್ 8GB RAM ಮತ್ತು 256GB ಸ್ಟೋರೇಜ್ 29,000 ರೂಗಳಿಗೆ ನಿರೀಕ್ಷಿಸದರೆ ಇದರ ಮತ್ತೊಂದು 8GB RAM ಮತ್ತು 512GB ಸ್ಟೋರೇಜ್ ಸುಮಾರು 32,999 ರೂಗಳಿಗೆ ನಿರೀಕ್ಷಿಸಬಹುದು.

Also Read: ನಿಮ್ಮ ಪ್ರತಿಯೊಂದು Internet ಚಟುವಟಿಕೆಯನ್ನು Google Track ಮಾಡುತ್ತದೆ! ನಿಲ್ಲಿಸಲು ತಕ್ಷಣ ಈ ಸೆಟ್ಟಿಂಗ್ ON ಮಾಡಿ!

ಇದರ ಕ್ರಮವಾಗಿ Vivo V40 Pro ಸ್ಮಾರ್ಟ್ಫೋನ್ 8GB RAM ಮತ್ತು 256GB ಸ್ಟೋರೇಜ್ 34,999 ರೂಗಳಿಗೆ ನಿರೀಕ್ಷಿಸದರೆ ಇದರ ಮತ್ತೊಂದು 8GB RAM ಮತ್ತು 512GB ಸ್ಟೋರೇಜ್ ಸುಮಾರು 37,999 ರೂಗಳಿಗೆ ನಿರೀಕ್ಷಿಸಬಹುದು. ಈ ಸ್ಮಾರ್ಟ್‌ಫೋನ್‌ಗಳು ಫ್ಲಿಪ್ಕಾರ್ಟ್ ಬಿಗ್ ಫ್ರೀಡಂ ಸೇಲ್ ಮೂಲಕ ಮಾರಾಟಕ್ಕೆ ಲಭ್ಯವಾಗುವ ನಿರೀಕ್ಷೆಗಳಿವೆ.

Vivo V40 Series launch date confirmed in India on 7th August 2027
Vivo V40 Series launch date confirmed in India on 7th August 2027

Vivo V40 Series ನಿರೀಕ್ಷಿತ ಕ್ಯಾಮೆರಾ ಫೀಚರ್ಗಳು

Vivo ತಮ್ಮ ಮುಂಬರಲಿರುವ Vivo V40 Series ಸ್ಮಾರ್ಟ್‌ಫೋನ್ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಕ್ಯಾಮೆರಾ ಪ್ರಿಯಾರಿಗಾಗಿ ಪ್ರಮುಖವಾದ ಸೆನ್ಸರ್ ನೀಡುತ್ತಿದ್ದು ಕಂಪನಿಯ ತಮ್ಮ ಟೀಸರ್‌ನಿಂದ ಈ ಫೋನ್ ಪವರ್ಫುಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಎಂದು ತೋರುತ್ತದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50MP Zeiss ಅಲ್ಟ್ರಾ ವೈಡ್ ಕ್ಯಾಮೆರಾದೊಂದಿಗೆ OIS ಬೆಂಬಲದೊಂದಿಗೆ 50MP (Sony IMX 921) ಮುಖ್ಯ ಕ್ಯಾಮೆರಾ ಮತ್ತು 50MP (Sony IMX 816) ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ.

ಇದಲ್ಲದೆ ಈ ಫೋನ್ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 50MP ವೈಡ್ ಆಂಗಲ್ ಕ್ಯಾಮೆರಾವನ್ನು ಸಹ ಒಳಗೊಂಡಿರುವ ನಿರೀಕ್ಷೆಗಳಿವೆ. ಕಂಪನಿಯ ಈ ಸ್ಮಾರ್ಟ್ಫೋನ್ 4 ದೊಡ್ಡ ಮತ್ತು ಅತ್ಯುತ್ತಮವಾದ ಕ್ಯಾಮೆರಾ ZEISS ಸೆನ್ಸರ್‌ಗಳ ಆಪ್ಟಿಕ್ಸ್ ಮತ್ತು ಫಿಲ್ಟರ್‌ಗಳ ಬೆಂಬಲವನ್ನು ಹೊಂದಿವೆ. ಈ ಫೋನ್ 2X ಆಪ್ಟಿಕಲ್ ಮತ್ತು 50X Zeiss ಹೈಪರ್ ಜೂಮ್ ಬೆಂಬಲದೊಂದಿಗೆ ಬರುತ್ತದೆ. ಅತ್ಯುತ್ತಮವಾದ ಪೋಟ್ರೇಟ್ ಮತ್ತು ನೈಟ್ ಮೊಡ್ ಫೋಟೋಗಳೊಂದಿಗೆ ನೀವು ಈ ಫೋನ್‌ನೊಂದಿಗೆ ಉತ್ತಮ ವೀಡಿಯೊಗಳನ್ನು ಪಡೆಯಬಹುದು ಎಂದು Vivo ಹೇಳುತ್ತದೆ.

Vivo V40 Series launch date confirmed in India on 7th August 2027
Vivo V40 Series launch date confirmed in India on 7th August 2027

Vivo V40 Series ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳೇನು?

ಈ Vivo 40 ಸರಣಿಯ ಫೋನ್‌ಗಳ ವಿನ್ಯಾಸ ಮತ್ತು ಇತರ ವೈಶಿಷ್ಟ್ಯಗಳಿಗೆ ಬಂದಾಗ ಈ ಫೋನ್ ವಿನ್ಯಾಸ ಮತ್ತು ನೋಟದಲ್ಲಿ ಉತ್ತಮವಾಗಿ ಕಾಣುತ್ತದೆ. ಫೋನ್ ಆಕರ್ಷಕ ಹಿಂಬದಿಯ ಕ್ಯಾಮೆರಾ ವಿನ್ಯಾಸ ಮತ್ತು ಔರಾ ಲೈಟ್ ಅನ್ನು ಸಹ ಹೊಂದಿದೆ. ಈ ಮುಂಬರುವ ಫೋನ್ IP68 ರೇಟಿಂಗ್‌ನೊಂದಿಗೆ ನೀರಿನ ನಿರೋಧಕವಾಗಿದೆ. ವಿವೋ ಈ ಫೋನ್‌ನ ಬ್ಯಾಟರಿ ಮತ್ತು ಚಾರ್ಜ್ ತಂತ್ರಜ್ಞಾನವನ್ನು ಮೊದಲೇ ಮಾಡಿದೆ. ಈ ಫೋನ್ 5500 mAh ದೊಡ್ಡ ಬ್ಯಾಟರಿ ಮತ್ತು 80W ಫಾಸ್ಟ್ ಚಾರ್ಜ್ ಬೆಂಬಲವನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ವಿವೋ ಈ ಫೋನ್ ಅನ್ನು ಮೂರು ಪ್ರೀಮಿಯಂ ಬಣ್ಣಗಳಲ್ಲಿ ಲೋಟಸ್ ಪರ್ಪಲ್, ಗಂಗಾ ಬ್ಲೂ ಮತ್ತು ಟೈಟಾನಿಯಂ ಗ್ರೇಗಳಲ್ಲಿ ನೀಡಲಾಗುವುದು ಎಂದು ಲೇವಡಿ ಮಾಡುತ್ತಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo