12GB RAM ಮತ್ತು 50MP ಸೆಲ್ಫಿ ಕ್ಯಾಮೆರಾವುಳ್ಳ Vivo V30 Lite 5G ಸ್ಮಾರ್ಟ್ಫೋನ್ ಬಿಡುಗಡೆ | Tech News

12GB RAM ಮತ್ತು 50MP ಸೆಲ್ಫಿ ಕ್ಯಾಮೆರಾವುಳ್ಳ Vivo V30 Lite 5G ಸ್ಮಾರ್ಟ್ಫೋನ್ ಬಿಡುಗಡೆ | Tech News
HIGHLIGHTS

ವಿವೋ ತನ್ನ ಹೊಚ್ಚ ಹೊಸ Vivo V30 Lite 5G ಸ್ಮಾರ್ಟ್ಫೋನ್ ಅನ್ನು ಇಂದು ಮೆಕ್ಸಿಕೋದಲ್ಲಿ ಸದ್ದಿಲ್ಲದೆ ಬಿಡುಗಡೆ ಮಾಡಲಾಗಿದೆ.

ಸ್ಮಾರ್ಟ್ಫೋನ್ 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4800mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ ವಿವೋ ತನ್ನ ಹೊಚ್ಚ ಹೊಸ Vivo V30 Lite 5G ಸ್ಮಾರ್ಟ್ಫೋನ್ ಅನ್ನು ಇಂದು ಮೆಕ್ಸಿಕೋದಲ್ಲಿ ಸದ್ದಿಲ್ಲದೆ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ ಪವರ್ಫುಲ್ 695 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಸ್ಮಾರ್ಟ್ಫೋನ್ 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4800mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದು 50MP ಮೆಗಾಪಿಕ್ಸೆಲ್ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾ ಸೆನ್ಸರ್ ವ್ಯವಸ್ಥೆಯನ್ನು ಹೊಂದಿದೆ. Vivo V30 Lite 5G ಸ್ಮಾರ್ಟ್ಫೋನ್ ಒಂದಿಷ್ಟು ಮಾಹಿತಿಗಳನ್ನು ಈ ಲೇಖನದಲ್ಲಿ ತಿಳಿಯೋಣ.

Also Read: ಸೂಪರ್ Electric Car SU7 ಬಿಡುಗಡೆಗೊಳಿಸಿದ Xiaomi, ಸ್ಮಾರ್ಟ್‌ಫೋನ್‌ನಿಂದಲೇ ಫುಲ್ ಕಂಟ್ರೋಲ್

Vivo V30 Lite 5G ಫೀಚರ್ ಮತ್ತು ವಿಶೇಷಣಗಳು

Vivo V30 Lite 5G ಸ್ಮಾರ್ಟ್ಫೋನ್ 6.67 ಇಂಚಿನ ಕರ್ವ್ಡ್-ಎಡ್ಜ್ AMOLED E4 ಸ್ಕ್ರೀನ್ ಮೇಲೆ ಪಂಚ್-ಹೋಲ್ ಅನ್ನು ಹೊಂದಿದೆ. ಇದು 1080 x 2400 ಪಿಕ್ಸೆಲ್‌ಗಳ ಪೂರ್ಣ HD+ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಹೊಂದಿದೆ. ಸ್ಮಾರ್ಟ್ಫೋನ್ ಮುಂಭಾಗದಲ್ಲಿ 50MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು ಅದು ಆಟೋಫೋಕಸ್‌ಗೆ ಬೆಂಬಲದೊಂದಿಗೆ ಬರುತ್ತದೆ.

Vivo V30 Lite 5G Launched

ಇದರ ಬ್ಯಾಕ್ ಕ್ಯಾಮೆರಾದಲ್ಲಿ ಪ್ರೈಮರಿ 64MP ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತೊಂದು 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಕೊನೆಯದಾಗಿ 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಹೊಂದಿದೆ. ಇದರ ಹಾರ್ಡ್ವೇರ್ ಬಗ್ಗೆ ಮಾತನಾಡುವುದಾದರೆ ಇದು ಸ್ನಾಪ್‌ಡ್ರಾಗನ್ 695 ಚಾಲಿತ Vivo V30 Lite 5G ಸ್ಮಾರ್ಟ್ಫೋನ್ 12GB LPDDR4x RAM ಮತ್ತು 256GB UFS 2.2 ಸ್ಟೋರೇಜ್‌ನೊಂದಿಗೆ ರವಾನಿಸುತ್ತದೆ. ಇದರಲ್ಲಿ ನಿಮಗೆ ಆಂಡ್ರಾಯ್ಡ್ 13 ನೋಡಲು ಲಾಭ್ಭ್ಯವಿರುತ್ತದೆ. ಇದು 44W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4800mAh ಬ್ಯಾಟರಿಯನ್ನು ಹೊಂದಿದೆ.

ವಿವೋ V30 Lite 5G ಬೆಲೆ

ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಪ್ರಸ್ತುತ ಕೇವಲ ಮೆಕ್ಸಿಕೋದಲ್ಲಿ ಮಾತ್ರ ಲಭ್ಯವಿದ್ದು ಇದರ ಬೆಲೆ 8,999 MXN ಮೆಕ್ಸಿಕನ್ ಪೆಸೊ (44,227 ರೂಗಳು) ಆಗಿದೆ. ಇದು ಫಾರೆಸ್ಟ್ ಬ್ಲ್ಯಾಕ್ ಮತ್ತು ರೋಸ್ ಗೋಲ್ಡ್ ನಂತಹ ಎರಡು ಛಾಯೆಗಳಲ್ಲಿ ಬರುತ್ತದೆ. Vivo V30 Lite 5G ಸ್ಮಾರ್ಟ್ಫೋನ್ ಮೆಕ್ಸಿಕೊವನ್ನು ಹೊರತುಪಡಿಸಿ ಮುಂಬರುವ ವಾರಗಳಲ್ಲಿ ಕೆಲವು ಏಷ್ಯನ್ ಮಾರುಕಟ್ಟೆಗಳಲ್ಲಿ ಸ್ಮಾರ್ಟ್ಫೋನ್ ಬಿಡುಗಡೆಯಾಗುವ ನಿರೀಕ್ಷೆಯಿದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo