Vivo V30 Series ಭಾರತದಲ್ಲಿ Zeiss ಕ್ಯಾಮೆರಾದೊಂದಿಗೆ ಮಾರ್ಚ್‌ನಲ್ಲಿ ಬಿಡುಗಡೆ! ಬೆಲೆ ಮತ್ತು ಫೀಚರ್‌ಗಳೇನು?

Vivo V30 Series ಭಾರತದಲ್ಲಿ Zeiss ಕ್ಯಾಮೆರಾದೊಂದಿಗೆ ಮಾರ್ಚ್‌ನಲ್ಲಿ ಬಿಡುಗಡೆ! ಬೆಲೆ ಮತ್ತು ಫೀಚರ್‌ಗಳೇನು?
HIGHLIGHTS

ವಿವೋ ಭಾರತದಲ್ಲಿ ತನ್ನ ಮುಂಬರಲಿರುವ Vivo V30 Series ಸ್ಮಾರ್ಟ್‌ಫೋನ್‌ಗಳನ್ನು ಮುಂದಿನ ತಿಂಗಳು ಬಿಡುಗಡೆಗೊಳಿಸಲಿದೆ.

Vivo V30 Series ಸ್ಮಾರ್ಟ್‌ಫೋನ್‌ಗಳನ್ನು 7ನೇ ಮಾರ್ಚ್ 2024 ರಂದು ಮಧ್ಯಾಹ್ನ 12:00pm ಗಂಟೆಗೆ ಲಾಂಚ್ ಮಾಡಲು ಸಜ್ಜಾಗಿದೆ

Vivo V30 Series ಸ್ಮಾರ್ಟ್‌ಫೋನ್‌ಗಳ ಮೈಕ್ರೋಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ರಚಿಸಲಾಗಿದ್ದು ಒಂದಿಷ್ಟು ಮಾಹಿತಿ ಇಲ್ಲಿದೆ.

ಭಾರತದಲ್ಲಿ ಕ್ಯಾಮೆರಾ ವಲಯದಲ್ಲಿ ಹೆಚ್ಚಾಗಿ ಬಳಕೆದಾರರನ್ನು ಹೊಂದಿರುವ ಚೀನಾದ ಈ ಜನಪ್ರಿಯ ವಿವೋ (Vivo) ಸ್ಮಾರ್ಟ್ಫೋನ್ ಬ್ರಾಂಡ್ ಭಾರತದಲ್ಲಿ ತನ್ನ Vivo V30 Series ಸ್ಮಾರ್ಟ್‌ಫೋನ್‌ಗಳನ್ನು ಮುಂದಿನ ತಿಂಗಳು ಅಧಿಕೃತವಾಗಿ ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ. ಈ ಸರಣಿಯು Vivo V0 ಮತ್ತು V30 Pro ಅನ್ನು ಒಳಗೊಂಡಿದೆ. ಕಂಪನಿಯು ಫೆಬ್ರವರಿ ಆರಂಭದಲ್ಲಿ ಆಯ್ದ ಗ್ಲೋಬಲ್ ಮಾರುಕಟ್ಟೆಗಳಲ್ಲಿ Vivo V30 ಅನ್ನು ಅನಾವರಣಗೊಳಿಸಿತು ಈಗ ಈ ಸ್ಮಾರ್ಟ್‌ಫೋನ್‌ನ ಭಾರತದ ರೂಪಾಂತರವನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದೆ. Vivo V30 Series ಫ್ಲಿಪ್‌ಕಾರ್ಟ್‌ನಲ್ಲಿ ಮೈಕ್ರೋಸೈಟ್ ಅನ್ನು ಸಹ ರಚಿಸಿದ್ದು ಒಂದಿಷ್ಟು ಮಾಹಿತಿ ಇಲ್ಲಿದೆ.

Also Read: Vodafone Idea ಪ್ಲಾನ್ Unlimitd ಕರೆ ಮತ್ತು ಡೇಟಾದೊಂದಿಗೆ 1 ವರ್ಷದ Prime Video ಉಚಿತ ಚಂದದಾರಿಕೆ!

Vivo V30 Series ಭಾರತದಲ್ಲಿ ಬಿಡುಗಡೆ

ಭಾರತದಲ್ಲಿ Vivo V30 Series ಸ್ಮಾರ್ಟ್‌ಫೋನ್‌ಗಳನ್ನು ಕಂಪನಿ ಮುಂದಿನ ಅಂದ್ರೆ 7ನೇ ಮಾರ್ಚ್ 2024 ರಂದು ಮಧ್ಯಾಹ್ನ 12:00pm ಗಂಟೆಗೆ ಸರಿಯಾಗಿ ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಸ್ಮಾರ್ಟ್‌ಫೋನ್‌ಗಳು ಮೂರು ಅಂಡಮಾನ್ ಬ್ಲೂ, ಕ್ಲಾಸಿಕ್ ಬ್ಲ್ಯಾಕ್ ಮತ್ತು ಪೀಕಾಕ್ ಗ್ರೀನ್ ಎಂಬ ಬಣ್ಣಗಳಲ್ಲಿ ಲಭ್ಯವಿರುತ್ತವೆ. ಈಗಾಗಲೇ ತಿಳಿಸಿರುವಂತೆ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್, ವಿವೋ ಇಂಡಿಯಾದ ಅಧಿಕೃತ ವೆಬ್‌ಸೈಟ್ ಮತ್ತು ಭಾರತದ ಪ್ರಮುಖ ಅಂಗಡಿಗಳಲ್ಲಿ ಲಭ್ಯವಿರುತ್ತವೆ.

Vivo V30 Series ನಿರೀಕ್ಷಿತ ವಿಶೇಷಣಗಳ ವಿವರ

ಈ ಮುಂಬರಲಿರುವ Vivo V30 ಸ್ಮಾರ್ಟ್‌ಫೋನ್‌ನ ಇತ್ತೀಚೆಗೆ ಅನಾವರಣಗೊಂಡ ಜಾಗತಿಕ ರೂಪಾಂತರಕ್ಕೆ ಹೋಲಿಸಿದರೆ ಭಾರತದಲ್ಲಿ ಫೋನ್ ಸ್ನಾಪ್‌ಡ್ರಾಗನ್ 7 Gen 3 ಪ್ರೊಸೆಸರ್, 80W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿ ಮತ್ತು 6.78 ಇಂಚಿನ 120Hz ಪೂರ್ಣ-HD AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಕ್ಯಾಮರಾ ಮುಂಭಾಗದಲ್ಲಿ ಇದು OIS ಬೆಂಬಲದೊಂದಿಗೆ 50MP ಪ್ರೈಮರಿ ಕ್ಯಾಮೆರಾ ಸೆನ್ಸರ್ ಮತ್ತು ಔರಾ ಲೈಟ್ ಘಟಕದ ಜೊತೆಗೆ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ 50MP ಸೆನ್ಸರ್ ಅನ್ನು ಪಡೆಯುತ್ತದೆ. ಇದು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 50MP ಮುಂಭಾಗದ ಕ್ಯಾಮೆರಾವನ್ನು ಸಹ ಪಡೆಯುತ್ತದೆ.

ವಿವೋ V30 Pro ನಿರೀಕ್ಷಿತ ವಿಶೇಷಣಗಳ ವಿವರ

Vivo V30 Pro ಸ್ಮಾರ್ಟ್ಫೋನ್ ಈಗಾಗಲೇ ಡಿಸೆಂಬರ್ 2023 ರಲ್ಲಿ ಚೀನಾದಲ್ಲಿ ಬಿಡುಗಡೆಯಾದ Vivo S18 ಆವೃತ್ತಿಯಾಗಿದೆ ಎಂದು ನಿರೀಕ್ಷಿಯಲಾಗಿದೆ. ಇದು 6.78 ಇಂಚಿನ ಪೂರ್ಣ HD+ AMOLED ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇದರ Vivo V30 Pro ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾವನ್ನು ಹೊಂದಿಸಲಾಗಿದೆ. ಸ್ಮಾರ್ಟ್‌ಫೋನ್‌ಗಳು OIS-ಬೆಂಬಲಿತ ಪೋರ್ಟ್ರೇಟ್ ಕ್ಯಾಮೆರಾಗಳನ್ನು ಮತ್ತು ಕಪ್ಪು ಪ್ಯಾನೆಲ್‌ನಲ್ಲಿ Vivo ಸಹಿ ಔರಾ ಲೈಟ್ ವೈಶಿಷ್ಟ್ಯವನ್ನು ಸಹ ಪಡೆಯುತ್ತವೆ. ಸ್ಮಾರ್ಟ್‌ಫೋನ್‌ಗಳು ಝೈಸ್ ಲೆನ್ಸ್‌ಗಳೊಂದಿಗೆ ಬರಲಿವೆ.

ಸ್ಮಾರ್ಟ್‌ಫೋನ್ 50MP ಸೋನಿ IMX920 ಪ್ರೈಮರಿ ಸೆನ್ಸರ್ 50MP ಸೋನಿ IMX816 ಪೋರ್ಟ್ರೇಟ್ ಕ್ಯಾಮೆರಾ ಮತ್ತು ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮೂರನೇ ಸೆನ್ಸರ್ ಅನ್ನು ಫೋನ್ ಒಳಗೊಂಡಿರುವ ಸಾಧ್ಯತೆಗಳಿವೆ. Vivo V30 Pro ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಪ್ರೊಸೆಸರ್‌ನೊಂದಿಗೆ ಚಾಲಿತವಾಗುವ ಸಾಧ್ಯತೆಯಿದೆ ಮತ್ತು ಆಂಡ್ರಾಯ್ಡ್ 14 ಆಧಾರಿತ FuntouchOS 14 ಅನ್ನು ರನ್ ಮಾಡುತ್ತದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo