50MP ಸೆಲ್ಫಿ ಕ್ಯಾಮೆರಾದ Vivo V30 5G ಬೆಲೆಯಲ್ಲಿ ಭಾರಿ ಕಡಿತ! ಹೊಸ ಬೆಲೆ ಮತ್ತು ಫೀಚರ್ಗಳೇನು?

50MP ಸೆಲ್ಫಿ ಕ್ಯಾಮೆರಾದ Vivo V30 5G ಬೆಲೆಯಲ್ಲಿ ಭಾರಿ ಕಡಿತ! ಹೊಸ ಬೆಲೆ ಮತ್ತು ಫೀಚರ್ಗಳೇನು?
HIGHLIGHTS

ದೀಪಾವಳಿ ಉಡುಗೊರೆಯಾಗಿ ಇತ್ತೀಚಿಗೆ ಬಿಡುಗಡೆಯಾದ ಜನಪ್ರಿಯ Vivo V30 5G ಸ್ಮಾರ್ಟ್ಫೋನ್ ಬೆಲೆಯಲ್ಲಿ ಭಾರಿ ಕಡಿತಗೊಳಿಸಿದೆ.

Amazon ಬರೋಬ್ಬರಿ 2,000 ರೂಪಾಯಿಗಳಷ್ಟು ಮತ್ತು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 1000 ರೂಗಳ ರಿಯಾಯಿತಿಯನ್ನು ಸಹ ಪಡೆಯಬಹುದು.

Vivo V30 5G ಸ್ಮಾರ್ಟ್ಫೋನ್ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 50MP ಮುಂಭಾಗದ ಕ್ಯಾಮೆರಾವನ್ನು ಬೆಂಬಲಿಸುತ್ತದೆ.

ಚೀನಾದ ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಕ ಬ್ರಾಂಡ್ ವಿವೋ (Vivo) ತನ್ನ ಅಭಿಮಾನಿಗಳಿಗೆ ದೀಪಾವಳಿ ಉಡುಗೊರೆಯಾಗಿ ಇತ್ತೀಚಿಗೆ ಬಿಡುಗಡೆಯಾದ ಜನಪ್ರಿಯ Vivo V30 5G ಸ್ಮಾರ್ಟ್ಫೋನ್ ಬೆಲೆಯಲ್ಲಿ ಭಾರಿ ಕಡಿತಗೊಳಿಸಿದೆ. ಕಂಪನಿಯು Vivo V30 5G ಪ್ರಸ್ತುತದ 5G ಬೆಲೆಯಲ್ಲಿ ಬರೋಬ್ಬರಿ 2,000 ರೂಪಾಯಿಗಳಷ್ಟು ಕಡಿಮೆ ಮಾಡಿದೆ. ಈ ಮೂಲಕ ಈಗ Vivo V30 5G ಫೋನ್ ಅನ್ನು ಕಂಪನಿಯು ಮಧ್ಯಮ ಬಜೆಟ್ ಶ್ರೇಣಿಯಲ್ಲಿ ಪರಿಚಯಿಸಿದೆ. ಇದರಲ್ಲಿ ನೀವು 50MP ಪ್ರೈಮರಿ ಕ್ಯಾಮೆರಾ ಜೊತೆಗೆ 80W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಪಡೆಯುತ್ತೀರಿ. ಆದ್ದರಿಂದ ಹೆಚ್ಚು ಸಮಯ ವ್ಯರ್ಥ ಮಾಡದೆ ಹೊಸ Vivo V30 5G ಫೋನ್ ಬೆಲೆ ಮತ್ತು ಎಲ್ಲಾ ವಿವರಗಳನ್ನು ತಿಳಿಯಿರಿ.

ಇದನ್ನೂ ಓದಿ: ನಿಮ್ಮ ಮದುವೆಯಾದ ನಂತರ Aadhaar ಕಾರ್ಡ್‌ನಲ್ಲಿ ಹೆಸರು ಮತ್ತು ವಿಳಾಸವನ್ನು ಬದಲಾಯಿಸುವುದು ಹೇಗೆ?

ಭಾರತದಲ್ಲಿ Vivo V30 5G ಹೊಸ ಬೆಲೆ ಎಷ್ಟು?

Vivo V30 5G ಫೋನ್‌ನ ಪ್ರಸ್ತುತ ಬೆಲೆಯಲ್ಲಿ Amazon ಬರೋಬ್ಬರಿ 2,000 ರೂಪಾಯಿಗಳಷ್ಟು ಬೆಲೆ ಕಡಿಮೆಗೊಳಿಸಿದೆ. ಅಲ್ಲದೆ ನೀವು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 1000 ರೂಗಳ ರಿಯಾಯಿತಿಯನ್ನು ಸಹ ಪಡೆಯಬಹುದು. ಇದರ ನಂತರ ಈ ಫೋನ್‌ನ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಕೇವಲ ರೂ 28,999 ರೂಗಳಿಗೆ ಖರೀದಿಸಬಹುದು.

Vivo V30 5G got price dropped in India

ಇದರ ಕ್ರಮವಾಗಿ ಈ ಫೋನ್‌ನ 8GB+ 256GB ರೂಪಾಂತರವನ್ನು ರೂ 30,999 ರೂಗಳಿಗೆ ಮತ್ತು ಅಂತಿಮವಾಗಿ ಈ Vivo V30 5G ಫೋನ್‌ನ ಟಾಪ್ ಎಂಡ್ ಅಂದರೆ 12GB RAM ರೂಪಾಂತರವು 32,999 ರೂಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಈ Vivo 5G ಫೋನ್ ಪೀಕಾಕ್ ಗ್ರೀನ್, ಅಂಡಮಾನ್ ಬ್ಲೂ ಮತ್ತು ಕ್ಲಾಸಿಕ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ನೀವು ಈ ಫೋನ್ ಅನ್ನು ಹೊಸ ಬೆಲೆಗೆ Amazon ನಿಂದ ಖರೀದಿಸಬಹುದು.

ಭಾರತದಲ್ಲಿ Vivo V30 5G ವೈಶಿಷ್ಟ್ಯಳೇನು?

Vivo V30 5G ಫೋನ್ 6.78 ಇಂಚಿನ FHD + ಪಂಚ್-ಹೋಲ್ ಡಿಸ್ಪ್ಲೇಯನ್ನು ಬೆಂಬಲಿಸುತ್ತದೆ. ಪರದೆಯನ್ನು AMOLED ಪ್ಯಾನೆಲ್‌ನಲ್ಲಿ ನಿರ್ಮಿಸಲಾಗಿದೆ. ಇದು 120Hz ರಿಫ್ರೆಶ್ ದರದಲ್ಲಿ ಕಾರ್ಯನಿರ್ವಹಿಸುತ್ತದೆ. ಉತ್ತಮ ಕಾರ್ಯಕ್ಷಮತೆಗಾಗಿ ಈ ಫೋನ್ Qualcomm Snapdragon 7 Gen 3 Octa-core ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಈ Vivo V30 5G ಫೋನ್ 12GB ವಿಸ್ತರಿಸಬಹುದಾದ RAM ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಫೋನ್ 8GB ಮತ್ತು 12GB RAM ಅನ್ನು ಹೊಂದಿದೆ. ಇದನ್ನು ವರ್ಚುವಲ್ RAM ಜೊತೆಗೆ 24GB ವರೆಗೆ ವಿಸ್ತರಿಸಬಹುದು. ಅಲ್ಲದೆ ಈ ಫೋನ್ 128GB ಮತ್ತು 256GB ಸ್ಟೋರೇಜ್ ಆಯ್ಕೆಗಳೊಂದಿಗೆ ಲಭ್ಯವಿದೆ.

Vivo V30 5G got price dropped in India

Vivo V30 5G ಫೋನ್ ಹಿಂಭಾಗದ ಪ್ಯಾನೆಲ್‌ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಫೋನ್ OIS ಜೊತೆಗೆ 50MP ಪ್ರೈಮರಿ ಸೆನ್ಸರ್ ಮತ್ತು 50MP ಅಲ್ಟ್ರಾ-ಆಂಗಲ್ ಲೆನ್ಸ್ ಹೊಂದಿದೆ. ಆದ್ದರಿಂದ ಇದು ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 50MP ಮುಂಭಾಗದ ಕ್ಯಾಮೆರಾವನ್ನು ಬೆಂಬಲಿಸುತ್ತದೆ. ಪವರ್ ಬ್ಯಾಕಪ್‌ಗಾಗಿ ಈ ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ. ಈ ಫೋನ್ 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಬ್ಯಾಟರಿಯೊಂದಿಗೆ ಫೋನ್ ಮೂಲಭೂತ ಕಾರ್ಯಗಳೊಂದಿಗೆ ಎರಡು ದಿನಗಳವರೆಗೆ ಇರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo