50MP ಸೆಲ್ಫಿ ಕ್ಯಾಮೆರಾ ಹೊಂದಿರುವ Vivo V29e 5G! ಬಿಡುಗಡೆಗೂ ಮುಂಚೆಯೇ ಹಲವು ಫೀಚರ್ ಬಹಿರಂಗ!

Updated on 30-Aug-2023
HIGHLIGHTS

Vivo V29e 5G ಸ್ಮಾರ್ಟ್‌ಫೋನ್ ಅನ್ನು ಆಗಸ್ಟ್ 28 ರಂದು ಬಿಡುಗಡೆ ಮಾಡಲು ಸಿದ್ಧವಾಗಿದೆ

ಈ ಸ್ಮಾರ್ಟ್ಫೋನ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನೊಂದಿಗೆ ಬರುವ ನಿರೀಕ್ಷೆಗಳಿವೆ

Vivo V29e 5G ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರುರುವ ನಿರೀಕ್ಷೆ

ಭಾರತದಲ್ಲಿ ವಿವೋ ಕಂಪನಿ ತನ್ನ ಮುಂಬರಲಿರುವ ಹೊಸ Vivo V29e 5G ಸ್ಮಾರ್ಟ್‌ಫೋನ್ ಅನ್ನು ಆಗಸ್ಟ್ 28 ರಂದು ಬಿಡುಗಡೆ ಮಾಡಲು ಸಿದ್ಧವಾಗಿದೆ. ಭಾರತದಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಲು ಸ್ಮಾರ್ಟ್‌ಫೋನ್ ಲಭ್ಯವಿರುತ್ತದೆ ಎಂದು ದೃಢಪಡಿಸಲಾಗಿದೆ. ಇ-ಕಾಮರ್ಸ್ ಪೋರ್ಟಲ್ ಸಾಧನಕ್ಕೆ ಸಂಬಂಧಿಸಿದ ಮೈಕ್ರೋಸೈಟ್ ಅನ್ನು ಸಹ ಲೈವ್ ಮಾಡಿದೆ. Vivo V29e 5G ಭಾರತದಲ್ಲಿ ಸ್ಮಾರ್ಟ್‌ಫೋನ್‌ನ ಬೆಲೆ ರೂ 25,000 ರಿಂದ ರೂ 30,000 ನಡುವೆ ಬರುವ ಸಾಧ್ಯತೆಗಳಿವೆ. 

Vivo V29e 5G ನಿರೀಕ್ಷಿತ ಡಿಸ್ಪ್ಲೇ

ಮುಂಬರುವ Vivo V29e 5G ಪೂರ್ಣ HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.78 ಇಂಚಿನ ಬಾಗಿದ AMOLED ಡಿಸ್ಪ್ಲೇಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದರ ಹೊರತಾಗಿ ಸ್ಮಾರ್ಟ್ಫೋನ್ 1300nits ಬ್ರೈಟ್ನೆಸ್, 360Hz PWM ಮಬ್ಬಾಗಿಸುವಿಕೆ ಮತ್ತು 93.3% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿರುತ್ತದೆ.

https://twitter.com/Vivo_India/status/1692413654015291902?ref_src=twsrc%5Etfw

Vivo V29e 5G ನಿರೀಕ್ಷಿತ ಕ್ಯಾಮೆರಾ

Vivo V29e 5G ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಕ್ಯಾಮರಾ ಮಾಡ್ಯೂಲ್ OIS ಬೆಂಬಲದೊಂದಿಗೆ 64MP ಪ್ರೈಮರಿ ಕ್ಯಾಮರಾವನ್ನು ಒಳಗೊಂಡಿರುತ್ತದೆ. ಕ್ರಮವಾಗಿ 8MP ಅಲ್ಟ್ರಾ-ವೈಡ್ ಕ್ಯಾಮೆರಾದೊಂದಿಗೆ ಜೋಡಿಸಲಾಗುತ್ತದೆ. ಫೋನ್ 4 ಬೊಕೆ ಫ್ಲೇರ್ ಪೋಟ್ರೇಟ್ ಮೋಡ್‌ಗಳನ್ನು ಹೊಂದಿರುತ್ತದೆ. Vivo V29e 5G ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳಿಗಾಗಿ ಭಾರತದ ವಿಶೇಷ ವಿವಾಹ ಶೈಲಿಯ ಮೋಡ್ ಅನ್ನು ಹೊಂದಿರುತ್ತದೆ. ಇದರ ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರುರುವ ನಿರೀಕ್ಷೆ. 

Vivo V29e 5G ನಿರೀಕ್ಷಿತ ವಿಶೇಷಣಗಳು

Vivo V29e 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ನೊಂದಿಗೆ ಬರುವ ನಿರೀಕ್ಷೆ. ಅಲ್ಲದೆ ಭಾರತದಲ್ಲಿ 8GB + 128GB ಮತ್ತು 8GB + 256GB ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಬರಲಿದೆ. ಇದು ಹೆಚ್ಚುವರಿ 8GB RAM ಅನ್ನು ಸೇರಿಸುತ್ತದೆ. ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು ಪಡೆಯುತ್ತದೆ. ಇದು 44W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಒದಗಿಸುತ್ತದೆ. Vivo V29e 5G ಭಾರತದಲ್ಲಿ ಆಗಸ್ಟ್ 28 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :