50MP ಸೆಲ್ಫಿ ಕ್ಯಾಮೆರಾದೊಂದಿಗೆ ಎಂಟ್ರಿ ಕೊಟ್ಟ Vivo V29e 5G! ಬೆಲೆ ಮತ್ತು ಫೀಚರ್‌ಗಳೇನು ನೀವೇ ನೋಡಿ!

50MP ಸೆಲ್ಫಿ ಕ್ಯಾಮೆರಾದೊಂದಿಗೆ ಎಂಟ್ರಿ ಕೊಟ್ಟ Vivo V29e 5G! ಬೆಲೆ ಮತ್ತು ಫೀಚರ್‌ಗಳೇನು ನೀವೇ ನೋಡಿ!
HIGHLIGHTS

Vivo V29e 5G ಫೋನ್ 44W ಚಾರ್ಜಿಂಗ್ ಜೊತೆಗೆ 5000mAh ಬ್ಯಾಟರಿಯನ್ನು ಹೊಂದಿದೆ

Vivo V29e 5G ಸ್ಮಾರ್ಟ್ಫೋನ್ 50MP ಸೆಲ್ಫಿ ಕ್ಯಾಮೆರಾದೊಂದಿಗೆ Snapdragon 695 ಪ್ರೊಸೆಸರ್ ಹೊಂದಿದೆ

ಭಾರತದ ಮೊದಲ 5G ಸ್ಮಾರ್ಟ್ಫೋನ್ 50MP ಆಟೋಫೋಕಸ್ ಸೆಲ್ಫಿ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಿದೆ

ನೀವು ನಿಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅತ್ಯುತ್ತಮ ಸೆಲ್ಫಿ ಫೋಟೋಗಳನ್ನು ಹಾಕಬೇಕೆಂದುಕೊಂಡಿದ್ದರೆ ಈ ಸುದ್ದಿಯನ್ನು ಮರೆಯದೆ ಪೂರ್ತಿಯಾಗಿ ಓದಿ. ಏಕೆಂದರೆ ಸೆಲ್ಫಿ (Selfie) ಕ್ಯಾಮೆರಾಕ್ಕಾಗಿ ವಿವೋ ತನ್ನ ಹೊಚ್ಚ ಹೊಸ 5G ಸ್ಮಾರ್ಟ್ಫೋನ್ ಅನ್ನು 50MP ಆಟೋ ಫೋಕಸ್ ಫೀಚರ್ ಜೊತೆಗೆ Vivo V29e 5G ಸ್ಮಾರ್ಟ್ಫೋನ್ ಅನ್ನು ಕೈಗೆಟಕುವ ಬೆಲೆಗೆ ಬಿಡುಗಡೆಗೊಳಿಸಿದೆ. Vivo V29e 5G ಫೋನ್ 44W ಚಾರ್ಜಿಂಗ್ ಜೊತೆಗೆ 5000mAh ಬ್ಯಾಟರಿಯನ್ನು ಹೊಂದಿದೆ. Vivo V29e 5G ಸ್ಮಾರ್ಟ್ಫೋನ್ 50MP ಸೆಲ್ಫಿ ಕ್ಯಾಮೆರಾದೊಂದಿಗೆ Snapdragon 695 ಪ್ರೊಸೆಸರ್ ಹೊಂದಿದೆ

Vivo V29e 5G ಬೆಲೆ ಮತ್ತು ಲಭ್ಯತೆ

ವಿವೋ ಕಂಪನಿಯ ಈ ಕೂಲ್ Vivo V29e 5G ಸ್ಮಾರ್ಟ್ಫೋನ್ ನಿಮಗೆ 2 ಸ್ಟೋರೇಜ್ ವೇರಿಯಂಟ್‍‍ಗಳಲ್ಲಿ ಬರುತ್ತದೆ. ಇವುಗಳ ಲಭ್ಯತೆ ಮತ್ತು ಬೆಲೆಯ ಬಗ್ಗೆ ಕೆಳಗೆ ಮಾಹಿತಿ ನೀಡಲಾಗಿದೆ. ಸ್ಮಾರ್ಟ್ಫೋನ್ ಆರ್ಟಿಸ್ಟಿಕ್ ರೆಡ್ ಮತ್ತು ಆರ್ಟಿಸ್ಟಿಕ್ ಬ್ಲೂ ಬಣ್ಣಗಳ ನಡುವೆ ಆಯ್ಕೆಯಲ್ಲಿ ಲಭ್ಯವಿದೆ. ಆಸಕ್ತರು ಫ್ಲಿಪ್ಕಾರ್ಟ್ ಮತ್ತು ವಿವೋ ಸೈಟ್‌ಗಳಿಗೆ ಭೇಟಿ ನೀಡಿ ಖರೀದಿಸಬಹುದು.

8GB RAM – 128GB Storage – 26,999/-   
8GB RAM – 256GB Storage – 28,999/-

Vivo V29e 5G ಕ್ಯಾಮೆರಾ 

Vivo V29e 5G ಸ್ಮಾರ್ಟ್ಫೋ  ಹಿಂಭಾಗದಲ್ಲಿ 2 ಕ್ಯಾಮೆರಾ ಸೆನ್ಸರ್‌ಗಳನ್ನು ಸೇರಿಸಿದ್ದು ಪ್ರೈಮರಿ ಕ್ಯಾಮೆರಾ 64MP ಮೆಗಾಪಿಕ್ಸೆಲ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ  (OIS) ಕ್ಯಾಮೆರಾ ಸೆನ್ಸರ್ ಮತ್ತು 8MP ಮೆಗಾಪಿಕ್ಸೆಲ್ ವೈಡ್ ಆಂಗಲ್ ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿದೆ. ಇದರಲ್ಲಿ ಪ್ರೀಮಿಯಂ ಲುಕ್‌ಗಾಗಿ ಹಿಂಭಾಗದಲ್ಲಿ ಗ್ಲಾಸ್ ಫಿನಿಶ್ ನೀಡಿದ್ದು ಪೋರ್ಟ್ರೇಟ್, ಮೈಕ್ರೋ ಮೂವಿ, ಹೈ-ರೆಸಲ್ಯೂಶನ್, ಪನೋರಮ, ಸ್ಲೋ-ಮೋ, ಡಬಲ್ ಎಕ್ಸ್‌ಪೋಸರ್, ಡ್ಯುಯಲ್ ವ್ಯೂ, ಸೂಪರ್‌ಮೂನ್ ಮತ್ತು ಲೈಟ್ ಎಫೆಕ್ಟ್‌ಗಳು ಇದರಲ್ಲಿ ಸೇರಿಸಿದೆ. ಈ ಸ್ಮಾರ್ಟ್ಫೋನ್ ಲೇಟೆಸ್ಟ್ Vivo ಕಂಪನಿಯ  ಕೊಡುಗೆಯು ಹೆಚ್ಚು ಕೈಗೆಟುಕುವ ಬೆಲೆಯಾಗಿದೆ. Vivo 29e 5G ಪ್ರಮುಖ ಫೀಚರ್ಗಳಲ್ಲಿ Eye AF ಆಟೋ ಫೋಕಸ್‌ನೊಂದಿಗೆ 50MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವೇ ಇದರ ಬಹುದೊಡ್ಡ ಅಂಶವಾಗಿದೆ.

Vivo V29e 5G ವಿಶೇಷಣಗಳು

Vivo V29e 5G ಸ್ಮಾರ್ಟ್ಫೋನ್ ಲೇಟೆಸ್ಟ್ ಸಾಫ್ಟ್ ಕೋಕಾಕೋಲಾ ಡಿಸೈನಿಂಗ್ ಬಿಲ್ಡ್ ಹೊಂದಿದ್ದು 6.73 ಇಂಚಿನ AMOLED ಡಿಸ್ಪ್ಲೇಯನ್ನು 3D ಕರ್ವ್ ಜೊತೆಗೆ 120Hz ರಿಫ್ರೆಶ್ ರೇಟ್ ಜೊತೆಗೆ FHD+ ರೆಸಲ್ಯೂಶನ್ (2400×1080 ಪಿಕ್ಸೆಲ್‌ಗಳು) ಹೊಂದಿದೆ. ಫೋನ್ Qualcomm Snapdragon 695 5G ಪ್ರೊಸೆಸರ್ ಮತ್ತು 5000mAh ಬ್ಯಾಟರಿಯಿಂದ ಶಕ್ತಿಯನ್ನು ಪಡೆಯುತ್ತದೆ. ಫೋನ್ 44W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕಂಪನಿಯು ಬಾಕ್ಸ್‌ನಲ್ಲಿ ಚಾರ್ಜರ್ ಅನ್ನು ಸಹ ನೀಡುತ್ತದೆ. Vivo V29e ನ ಇತರ ಪ್ರಮುಖ ವೈಶಿಷ್ಟ್ಯಗಳು 5G, ಟೈಪ್-C ಚಾರ್ಜಿಂಗ್ ಪೋರ್ಟ್, ಡ್ಯುಯಲ್-ಸಿಮ್ ಕಾರ್ಡ್ ಸ್ಲಾಟ್, ಆಂಡ್ರಾಯ್ಡ್ 13-ಆಧಾರಿತ Funtouch OS ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿವೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo