ಚೈನಾದ ವಿವೋ ಸ್ಮಾರ್ಟ್ಫೋನ್ ಬ್ರಾಂಡ್ ಕ್ಯಾಮೆರಾ ವಲಯದಲ್ಲಿ ಅತಿ ಹೆಚ್ಚು ಜನಪ್ರಿಯತೆಗೆ ಹೆಸರುವಾಸಿಯಾಗಿದೆ. ಈ ವಿವೊ ಕಂಪನಿ ತನ್ನ ಮುಂಬರಲಿರುವ ಹೊಚ್ಚ ಹೊಸ ಸ್ಮಾರ್ಟ್ಫೋನ್ ಅನ್ನು ಈಗ ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. Vivo V29 5G ಸರಣಿಯ ಫೋನ್ಗಳು ಈಗಾಗಲೇ ಕಳೆದ ತಿಂಗಳು ಜಾಗತಿಕವಾಗಿ ಮಲೇಷಿಯಾದಲ್ಲಿ ಬಿಡುಗಡೆಯಾಗಿವೆ. ಕಂಪನಿ ಈಗ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲು ಪೂರ್ತಿಯಾಗಿ ಸಿದ್ದವಾಗಿರುವ ನಿರೀಕ್ಷೆಗಳಿವೆ. ಭಾರತದಲ್ಲಿ ಕಂಪನಿ Vivo V29 5G ಮತ್ತು V29 Pro 5G ಸ್ಮಾರ್ಟ್‌ಫೋನ್‌ಗಳು ಈ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.
ವಿವೋ ಈ ತಿಂಗಳ ಅಂತ್ಯದ ವೇಳೆಗೆ V29 5G ಮತ್ತು V29 Pro 5G ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಹೊಸ ಸ್ಮಾರ್ಟ್‌ಫೋನ್‌ಗಳು ಭಾರತ-ನಿರ್ದಿಷ್ಟ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಈ ವೈಶಿಷ್ಟ್ಯಗಳನ್ನು ಇನ್ನೂ ನಿರ್ದಿಷ್ಟಪಡಿಸಲಾಗಿಲ್ಲವಾದರೂ೭ Vivo V29 ಸರಣಿಯು ಭಾರತದಿಂದ ಸ್ಫೂರ್ತಿ ಪಡೆದ ಅದರ 'ಮೆಜೆಸ್ಟಿಕ್ ರೆಡ್' ಬಣ್ಣದಲ್ಲಿ ಪ್ರಾರಂಭಿಸುತ್ತದೆ. Vivo V29 ಮತ್ತು V29 Pro 5G ಫೋನ್‌ಗಳು ಪ್ರೀಮಿಯಂ ವಿನ್ಯಾಸದಲ್ಲಿ ಮತ್ತು ಭಾರತದಿಂದ ಸ್ಫೂರ್ತಿ ಪಡೆದ ಹೊಸ ಬಣ್ಣಗಳಲ್ಲಿ ಬರುತ್ತವೆ ಎಂದು ಹೇಳಲಾಗುತ್ತದೆ. ಅಲ್ಲದೆ, Vivo V29 Pro 5G ಭಾರತ-ವಿಶೇಷ ಉತ್ಪನ್ನವಾಗಿದೆ ಏಕೆಂದರೆ ಇದು ದೇಶದ ಹೊರಗೆ ಬಿಡುಗಡೆಯಾಗುವುದಿಲ್ಲ. ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ ಆದರೆ ಇದು ಸೆಪ್ಟೆಂಬರ್ ಅಂತ್ಯದ ವೇಳೆಗೆ ನಡೆಯಲಿದೆ.
ಡ್ಯುಯಲ್ ನ್ಯಾನೊ ಸಿಮ್ ಬೆಂಬಲಿತ Vivo V29 5G ಜಾಗತಿಕವಾಗಿ Qualcomm Snapdragon 778G SoC ಜೊತೆಗೆ ಮತ್ತು ಆಂಡ್ರಾಯ್ಡ್ 13 ಆಧಾರಿತ Funtouch OS 13 ಬೋರ್ಡ್‌ನಲ್ಲಿ ಬಿಡುಗಡೆಯಾಗಿದೆ. ಇದು 6.78 ಇಂಚಿನ AMOLED ಡಿಸ್ಪ್ಲೇ ಜೊತೆಗೆ 2800 x 1260 ಪಿಕ್ಸೆಲ್ಗಳ ರೆಸಲ್ಯೂಶನ್ ಮತ್ತು 120Hz ನ ರಿಫ್ರೆಶ್ ದರದೊಂದಿಗೆ ಬರುತ್ತದೆ. ಜಾಗತಿಕವಾಗಿ 8GB + 128GB, 8GB + 256GB, ಮತ್ತು 12GB + 256GB ಸ್ಟೋರೇಜ್ ಆಯ್ಕೆಗಳಲ್ಲಿ ನೀಡಲಾಗುತ್ತದೆ. Vivo V29 5G ಹಿಮಾಲಯನ್ ಬ್ಲೂ, ಮೆಜೆಸ್ಟಿಕ್ ರೆಡ್, ಪರ್ಪಲ್ ಫೇರಿ ಮತ್ತು ಸ್ಪೇಸ್ ಬ್ಲ್ಯಾಕ್ ಬಣ್ಣದ ರೂಪಾಂತರಗಳಲ್ಲಿ ಲಭ್ಯವಿದೆ.
Vivo V29 5G ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಮತ್ತು 2MP ಮೆಗಾಪಿಕ್ಸೆಲ್ ಮೊನೊಕ್ರೋಮ್ ಕ್ಯಾಮೆರಾದೊಂದಿಗೆ 50-ಮೆಗಾಪಿಕ್ಸೆಲ್ ಪ್ರೈಮರಿ ಹಿಂಬದಿ ಸೆನ್ಸರ್ ಹೊಂದಿದೆ. ಮುಂಭಾಗದ ಕ್ಯಾಮೆರಾವು ಆಟೋಫೋಕಸ್ನೊಂದಿಗೆ 50MP ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದೆ. ಫೋನ್ 80W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4600mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಭದ್ರತೆಗಾಗಿ ಇದು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿದೆ.