Vivo V27 Series: ಜನಪ್ರಿಯ ಸ್ಮಾರ್ಟ್ಫೋನ್ ಕಂಪನಿ ವಿವೋ ತನ್ನ ಹೊಚ್ಚ ಹೊಸ ಮುಂಬರಲಿರು ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ. Vivo V27 ಸೀರೀಸ್ ಮಾರ್ಚ್ 1 ರಂದು ಪ್ರಾರಂಭಗೊಳ್ಳಲಿದೆ ಎಂದು ಕಂಪನಿಯು ಅಧಿಕೃತವಾಗಿ ಘೋಷಿಸಿದೆ. ಬಿಡುಗಡೆ ದಿನಾಂಕವನ್ನು ಘೋಷಿಸುವುದರ ಜೊತೆಗೆ ಕಂಪನಿಯು ಸ್ಮಾರ್ಟ್‌ಫೋನ್‌ಗೆ ಸಂಬಂಧಿತ ಸಾಕಷ್ಟು ಮಾಹಿತಿಗಳನ್ನು ಬಹಿರಂಗಪಡಿಸಿದೆ.
ವಿವೋ ಕಂಪನಿಯ ಈ ಸರಣಿಯಲ್ಲಿ Vivo V27, Vivo V27 Pro, ಮತ್ತು Vivo V27e ಮೂರು ಮಾಡೆಲ್ಗಳನ್ನು ಬಿಡುಗಡೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. Vivo V27 ಸೀರೀಸ್ 2022 ರಲ್ಲಿ ಬಿಡುಗಡೆಯಾದ Vivo V25 ಶ್ರೇಣಿಯ ಉತ್ತರಾಧಿಕಾರಿಯಾಗಲಿದೆ. ಮುಂದಿನ ಕೆಲವು ದಿನಗಳಲ್ಲಿ Vivo V27 ಸೀರೀಸ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದ್ದು ಇಲ್ಲಿಯವರೆಗೆ ಬೆಳಕಿಗೆ ಬಂದಿರುವ V27 ಸೀರೀಸ್ ಬಗೆಗಿನ 5 ದೊಡ್ಡ ಮಾಹಿತಿಗಳು ಇಲ್ಲಿದೆ ನೋಡಿ.
https://twitter.com/Vivo_India/status/1628981619393699840?ref_src=twsrc%5Etfw
➥Vivo V27 ಸೀರೀಸ್ ಡಿಸ್ಪ್ಲೇ – Vivo V27 120Hz ರಿಫ್ರೆಶ್ ದರದೊಂದಿಗೆ ಕರ್ವ್ಡ್ 3D ಡಿಸ್ಪ್ಲೇಯನ್ನು ಹೊಂದಿದೆ. ಅದರ ಡಿಸ್ಪ್ಲೇ ಎಲ್ಲಾ ಕಡೆಯೂ ಅತ್ಯುತ್ತಮ ವಿನ್ಯಾಸವನ್ನು ವಿವೋ ಇಂಡಿಯಾ ಟ್ವೀಟ್ ಮಾಡಿದೆ. Vivo V27 ಸೀರೀಸ್ ಫೋನ್‌ಗಳು ಅಲ್ಟ್ರಾ-ಸ್ಲಿಮ್ ವಿನ್ಯಾಸದೊಂದಿಗೆ ಬಿಡುಗಡೆಗೊಳ್ಳಲಿದೆ.
➥Vivo V27 ಸೀರೀಸ್ ವಿನ್ಯಾಸ – V23 ಸೀರೀಸ್ ನಲ್ಲಿ ಹಿಂಭಾಗದ ಬಣ್ಣವನ್ನು ಬದಲಾಯಿಸುವ ವಿನ್ಯಾಸವನ್ನು ಒಳಗೊಂಡಿರುತ್ತದೆ. #vivoV27Series ನ ಬಣ್ಣ ಬದಲಾಯಿಸುವ ಗ್ಲಾಸ್ ವಿನ್ಯಾಸದೊಂದಿಗೆ ಸ್ಪಾಟ್‌ಲೈಟ್ ಹೊಳೆಯಲಿ” ಎಂದು ಕಂಪನಿಯು ಟ್ವೀಟ್ ಮಾಡಿದೆ.
➥Vivo V27 ಸೀರೀಸ್ ಪ್ರೋಸೆಸರ್ – ಮೀಡಿಯಾ ಟೆಕ್ ಡೈಮೆನ್ಸಿಟಿ 7200L ನಿಂದ Vivo V27 ಚಾಲಿತವಾಗುವ ಸಾಧ್ಯತೆಯಿದೆ. ಆದರೆ Pro ವೇರಿಯಂಟ್ ಡೈಮೆನ್ಸಿಟಿ 8200 ಪ್ರೋಸೆಸರ್ನೊಂದಿಗೆ ಬರಬಹುದು.
➥Vivo V27 ಸೀರೀಸ್ ಅಧಿಕೃತ ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ವರದಿಗಳ ಪ್ರಕಾರ Vivo V27 ಸೀರೀಸ್ನ ಆರಂಭಿಕ ಬೆಲೆ ರೂ 30,000 ಆಗಿರಬಹುದು.
➥Vivo V27 ಸೀರೀಸ್ ಬ್ಯಾಟರಿ: ವರದಿಗಳ ಪ್ರಕಾರ Vivo V27 ಸೀರೀಸ್ 4500 mAh ಬ್ಯಾಟರಿಯನ್ನು ಪಡೆಯುವ ನಿರೀಕ್ಷೆಯಿದ್ದು 67W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.