ವಿವೋ ಸ್ಮಾರ್ಟ್ಫೋನ್ ತಯಾರಕ ಇಂದು ಭಾರತದಲ್ಲಿ Vivo V15 Pro ಸ್ಮಾರ್ಟ್ಫೋನನ್ನು ಪ್ರಾರಂಭಿಸಲಿದೆ. ಈ ಫೋನ್ 32MP ಮೆಗಾಪಿಕ್ಸೆಲ್ ಪಾಪ್-ಅಪ್ ಸೆಲ್ಫಿ ಕ್ಯಾಮರಾದೊಂದಿಗೆ AI ಆಧಾರಿತ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಮತ್ತು 48MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಸೇರಿದಂತೆ ಇತರೇ ವಿಶೇಷ ವೈಶಿಷ್ಟ್ಯಗಳೊಂದಿಗೆ ಬರುವ ನಿರೀಕ್ಷಿಸಲಾಗಿದೆ.
ಈ ಫೋನ್ನ ಲೈವ್ ಸ್ಟ್ರೀಮಿಂಗ್ ಇಂದು ಮಧ್ಯಾಹ್ನ 12 ಕ್ಕೆ ವಿವೋ ಇಂಡಿಯಾದ YouTube ಚಾನೆಲ್ನಲ್ಲಿ ವೀಕ್ಷಿಸಬವುದು. ಅಥವಾ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈ Vivo V15 Pro ಅನ್ನು ಅಪ್ಗ್ರೇಡ್ ರೂಪಾಂತರಗಳ ರಾಜ ಅಂತ ಸಹ ಕರೆಯಲಾಗುತ್ತಿದೆ. ಇದರ ಬೆಲೆಯ ಬಗ್ಗೆ ಮಾತನಾಡಬೇಕೆಂದರೆ ಈ ಸ್ಮಾರ್ಟ್ಫೋನಿನ ವೆಚ್ಚದಲ್ಲಿ 3000 ರೂಪಾಯಿ ಕಡಿಮೆ ಮಾಡುವ ನಿರೀಕ್ಷಿಯಿದೆ.
ಏಕೆಂದರೆ ಇದು V11 Pro ಸ್ಮಾರ್ಟ್ಫೋನಿನ ನವೀಕರಿಸಿದ ರೂಪಾಂತರ ಆದ ಕಾರಣ. ಈ Vivo V15 Pro ಅನ್ನು ಭಾರತದಲ್ಲಿ 30,000 ರೂಗಳಿಗೆ ಲಭಿಸಬವುದು. ಆದರೂ ಇದು 33,000 ರೂಗಳವರೆಗೆ ಬಿಡುಗಡೆಯ ಬೆಲೆಯನ್ನು ಘೋಷಿಸುವ ನಿರೀಕ್ಷೆಯಿದೆ. ಆದರೆ ಇದು ಅಂದಾಜಿನ ಬೆಲೆಯಾಗಿದ್ದು ಬಿಡುಗಡೆಯ ನಂತರವಷ್ಟೇ ಇದರ ಬೆಲೆಯನ್ನು ಖಚಿತಪಡಿಸುತ್ತೇವೆ. ಇದು ಪ್ರತ್ಯೇಕವಾಗಿ ನಿಮಗೆ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಇಂಡಿಯಾದ ಮ್ಲಕ ಲಭ್ಯವಾಗಲಿದೆ.
ಇದು 6.39 ಇಂಚಿನ ಪೂರ್ಣ ಎಚ್ಡಿ + ಸೂಪರ್ AMOLED ಅಲ್ಟ್ರಾ ಫುಲ್ವೀವ್ ಡಿಸ್ಪ್ಲೇಯೊಂದಿಗೆ 6GB ಯ RAM ಮತ್ತು 128GB ಯ ಜೊತೆಗಿನ ಸ್ಟೋರೇಜ್ ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಸ್ನಾಪ್ಡ್ರಾಗನ್ 675 Soc ಸೇರಿದೆ. '3 ಡ್ಯುಯಲ್ ಎಂಜಿನ್' ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 3700mAh ಬ್ಯಾಟರಿ ಹೊಂದಿದೆ. Vivo V15 Pro ನಿಮಗೆ ಟ್ರಿಪಲ್ ಕ್ಯಾಮೆರಾ ಸೆಟಪ್ 48MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಜೊತೆಗೆ 5MP ಮೆಗಾಪಿಕ್ಸೆಲ್ ಮತ್ತು ಜೋತೆಗೆ 8MP ಮೆಗಾಪಿಕ್ಸೆಲ್ ಸೆನ್ಸರ್ ತೃತೀಯ ಸೆನ್ಸರನ್ನು ಹೊಂದಿದೆಯೆಂದು ವದಂತಿಗಳಿವೆ. ಇದರಲ್ಲಿ ನಿಮಗೆ AI ವೈಶಿಷ್ಟ್ಯಗಳನ್ನು ಪಟ್ಟಿ ಮಾಡಬಹುದು.