ವಿವೋ ನಿನ್ನೆ ಚೀನಾದಲ್ಲಿ ಹೊಸ U ಸರಣಿಯನ್ನು ಬಿಡುಗಡೆಗೊಳಿಸಿದೆ. ಇದು ಕಂಪನಿಯ U ಸರಣಿಯ ಮೊದಲ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿತು. ಇದನ್ನು Vivo U1 ಎಂದು ಹೆಸರಿಸಿದೆ. ಈ ಹೊಸ Vivo U1 ಸ್ಮಾರ್ಟ್ಫೋನ್ ವಾಟರ್ಡ್ರಾಪ್ ನಾಚ್ ಡಿಸ್ಪ್ಲೇಯನ್ನು ಹೊಂದಿದ್ದು ಒಂದು ದೊಡ್ಡ ಬ್ಯಾಟರಿಯನ್ನು ಈ ಫೋನ್ ಹೊಂದಿದೆ. ಅಲ್ಲದೆ ಡ್ಯುಯಲ್ ಬ್ಯಾಕ್ ಕ್ಯಾಮೆರಾಗಳೊಂದಿಗೆ ಬರುತ್ತದೆ. Vivo U1 ಪ್ರೀಮಿಯಂ ಖರೀದಿದಾರರಿಗೆ ಬದಲಾಗಿ ಜನಸಾಮಾನ್ಯರಿಗೆ ಒದಗಿಸುವ ಒಂದು ಖಚಿತವಾದ ಬಜೆಟ್ ಹ್ಯಾಂಡ್ಸೆಟ್ ಅನಂತ ಹೇಳಬವುದು.
ಇದರ ಕೇಳೇ ಸ್ಪೆಸಿಫಿಕೇಷನ್ ಬಗೆ ಹೇಳಬೇಕೆಂದರೆ 19: 9 ಆಸ್ಪೆಕ್ಟ್ ರೇಷುವನ್ನು 2.5D ಕರ್ವ್ ಗ್ಲಾಸ್ ಮೇಲೆ 6.22 ಇಂಚಿನ ಫುಲ್ ವ್ಯೂ ಡಿಸ್ಪ್ಲೇಯೊಂದಿಗೆ ಈ ಫೋನನ್ನು ಅಳವಡಿಸಲಾಗಿದೆ. ಇದರ ಮುಖ್ಯಭಾಗದಲ್ಲಿ ಸ್ನಾಪ್ಡ್ರಾಗನ್ 439 ಪ್ರೊಸೆಸರ್ಯೊಂದಿಗೆ ನಿರ್ವಹಿಸುತ್ತದೆ. ಇದು ಈ ಫೋನಲ್ಲಿ ಮೈಕ್ರೊ ಎಸ್ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾದ ಸ್ಟೋರೇಜ್ ಬೆಂಬಲದೊಂದಿಗೆ ಮೂರು ಸಂರಚನೆಗಳಲ್ಲಿ ಬಜೆಟ್ ಸ್ಮಾರ್ಟ್ಫೋನ್ ನೀಡಲಾಗುತ್ತಿದೆ.
ಇದು ನಿಮಗೆ 13MP ಪ್ರೈಮರಿ ಶೂಟರ್ ಮತ್ತು 2MP ಡೆಪ್ತ್ ಸೆನ್ಸರ್ ಇದರ ಹಿಂಭಾಗದಲ್ಲಿ LED ಫ್ಲಾಶ್ ಮತ್ತು AR ಮೋಡ್ನಿಂದ ಬೆಂಬಲಿತವಾಗಿದೆ. ಇದರ ಫ್ರಂಟಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8MP ಮೆಗಾಪಿಕ್ಸೆಲ್ ಇಡಲಾಗಿದೆ. ಅಲ್ಲದೆ ಈ ಫೋನಲ್ಲಿ ನಿಮಗೆ Funtouch OS 4.5 ಆಂಡ್ರಾಯ್ಡ್ ಆಧರಿಸಿ 8.1 ಬಾಕ್ಸ್ ಹೊರಗೆ Oreo ಹೊಂದಿದ್ದು ಸೆಕ್ಯುರಿಟಿಗಾಗಿ ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್ಲಾಕ್ ಅನ್ನು ಹೊಂದಿದೆ. ಇದು 4G LTE, Wi-Fi, ಬ್ಲೂಟೂತ್ 5.0, ಮತ್ತು GPS ಅನ್ನು ನೀಡುತ್ತದೆ.
ಮೊದಲಿಗೆ ಈ ಸ್ಮಾರ್ಟ್ಫೋನ್ಗಳ ಚೀನಾದಲ್ಲಿನ ಮಾರಾಟದ ಬೆಲೆಯನ್ನು ಭಾರತಕ್ಕೆ ಹೋಲಿಸಿ ನೋಡಿದರೆ ಈ ರೀತಿಯ ಬೆಲೆಗಳಿಗೆ ಹೋಲಿಸಬವುದು.
3GB/32GB – RMB 799 ಭಾರತದಲ್ಲಿ 8,430 ರೂಗಳು
3GB/64GB – RMB 999 ಭಾರತದಲ್ಲಿ 10,300 ರೂಗಳು
4GB/64GB – RAM 1199 ಭಾರತದಲ್ಲಿ 12650 ರೂಗಳಲ್ಲಿ ಚೀನಾದಲ್ಲಿ ಮಾರಾಟ ಮಾಡಲಾಗುತ್ತದೆ. ಫೋನ್ ಈಗಾಗಲೇ ಚೀನಾದಲ್ಲಿ ಮಾರಾಟವಾಗಿದೆ. ಈ ಫೋನ್ ಸ್ಟಾರಿ ನೈಟ್ ಬ್ಲಾಕ್, ಅರೋರಾ ಮತ್ತು ಅರೋರಾ ಕೆಂಪು ಬಣ್ಣಗಳಲ್ಲಿ ನೀಡಲಾಗುತ್ತಿದೆ. ಆದರೆ ಈ ಕ್ಷಣದಲ್ಲಿ ಈ ಹ್ಯಾಂಡ್ಸೆಟ್ ಗ್ಲೋಬಲಿ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿಗಳಿಲ್ಲ.