Vivo T4 5G In India
ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ ವಿವೋ (Vivo) ತನ್ನ ಮುಂಬರಲಿರುವ Vivo T4 5G ಸ್ಮಾರ್ಟ್ಫೋನ್ 3D Curve ಡಿಸ್ಪ್ಲೇ ಮತ್ತು Snapdragon ಚಿಪ್‌ನೊಂದಿಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರ ಬಗ್ಗೆ ಈಗಾಗಲೇ ಕಂಪನಿ ಮುಂಬರಲಿರುವ Vivo T4 5G ಸ್ಮಾರ್ಟ್ಫೋನ್ ಬಗ್ಗೆ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಮಾರಾಟವಾಗಲಿದ್ದು ಇದರ ಮೈಕ್ರೋಸೈಟ್ ಪೇಜ್ ಸಹ ಪ್ರಕಟಿಸಿದೆ. ಆದರೆ ಪ್ರಸ್ತುತ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳನ್ನು ನೀಡಿಲ್ಲದ ವಿವೋ ಕೇವಲ ಡಿಸೈನಿಂಗ್ ಮಾತ್ರ ಪೋಸ್ಟ್ ಮಾಡಿದ್ದೂ ಇದರಿಂದ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಪ್ರಸ್ತುತ ಈ Vivo T4 5G ಸ್ಮಾರ್ಟ್ಫೋನ್ ಬ್ಯಾಟರಿಯ ಬಗ್ಗೆ ಇನ್ನೂ ಯಾವುದೇ ರೀತಿಯ ಅಧಿಕೃತ ಮಾಹಿತಿಗಳನ್ನು ನೀಡಿಲ್ಲವಾದರೂ ಟ್ವಿಟ್ಟರ್ ಮತ್ತು ಇಂಟರ್ನೆಟ್ನಲ್ಲಿ ಒಂದಿಷ್ಟು ಟಿಪ್‌ಸ್ಟರ್ ಇದರ ಬಗ್ಗೆ ಮಾಹಿತಿಯನ್ನು ಟ್ವಿಟ್ ಮಾಡಿದ್ದಾರೆ. ಆದರೆ ಇದು ಎಷ್ಟು ನಿಜ ಎನ್ನುವುದನ್ನು ನಾವು ಕಾದು ನೋಡಬೇಕಿದೆ ಅಷ್ಟೇ ಆದರೂ ಚೀನಾದಲ್ಲಿ ಈಗಷ್ಟೇ ಬಿಡುಗಡೆಯಾದ Vivo Y300 Pro+ ಸ್ಮಾರ್ಟ್ಫೋನ್ ಈ ಬ್ಯಾಟರಿ ಫೀಚರ್ಗಳನ್ನು ಹೊಂದಿದೆ.
ಇದರ ಆಧಾರದ ಮೇಲೆ ಭಾರತದಲ್ಲೂ ಈಗ ಬಿಡುಗಡೆ ಸಜ್ಜಾಗಿರುವ ಈ Vivo T4 5G ಸ್ಮಾರ್ಟ್ಫೋನ್ ನಿರೀಕ್ಷಿತ ಫೀಚರ್ ಬಗ್ಗೆ ಮಾತನಾಡುವದಾದರೆ Vivo T4 5G ಸ್ಮಾರ್ಟ್ಫೋನ್ ಬರೋಬ್ಬರಿ 7300mAh ಬ್ಯಾಟರಿಯೊಂದಿಗೆ 45W ಫಾಸ್ಟ್ ಚಾರ್ಜಿಂಗ್ನೊಂದಿಗೆ ಬರುವ ವಿವೋದ ಮೊಟ್ಟ ಮೊದಲ ಸ್ಮಾರ್ಟ್ಫೋನ್ ಆಗಲಿದೆ. ಆದರೆ ಇದರ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳಿಲ್ಲ ಎನ್ನುವುದನ್ನು ನೀವು ಗಮನಿಸಬೇಕಿದೆ.
ಇದರ ನಿರೀಕ್ಷಿತ ಫೀಚರ್ಗಳನ್ನು ನೋಡುವುದಾದರೆ ಫೋನ್ 6.67 ಇಂಚಿನ FHD+ AMOLED ಪ್ಯಾನಲ್ ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರವನ್ನು ಹೊಂದಿರುವ ನಿರೀಕ್ಷೆಗಳಿವೆ. ಅಲ್ಲದೆ Vivo T4 5G ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಫೋನ್ ಹಿಂಭಾಗದಲ್ಲಿ 50MP ಮತ್ತು 2MP ಡ್ಯೂಯಲ್ ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದಲ್ಲಿ ವಿಡಿಯೋ ಕರೆ ಮತ್ತು ಸೆಲ್ಫಿಗಾಗಿ 32MP ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿರುವ ನಿರೀಕ್ಷೆಗಳಿವೆ.
Vivo T4 5G ಸ್ಮಾರ್ಟ್ಫೋನ್ ಫೋನ್ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ನಿಂದ ಚಾಲಿತವಾಗಲಿದೆ ಎಂದು ಟೀಸರ್ ಬಹಿರಂಗಪಡಿಸುತ್ತದೆ. ಆದಾಗ್ಯೂ ಕಂಪನಿಯು ಚಿಪ್‌ಸೆಟ್‌ನ ಪೂರ್ಣ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ. ವರದಿಗಳ ಪ್ರಕಾರ ಈ ಫೋನ್ Snapdragon ಚಿಪ್‌ಸೆಟ್‌ನೊಂದಿಗೆ ಬಿಡುಗಡೆಯಾಗಬಹುದು. ವಿವೋ ತನ್ನ ಮುಂಬರುವ ಫೋನ್ ಅನ್ನು ಟರ್ಬೊ ಡಿಸ್ಪ್ಲೇ ಎಂಬ ಪದದೊಂದಿಗೆ ಟೀಸರ್ ಮಾಡಿದ್ದು ಫೋನ್ ಸೆಂಟರ್ ಪಂಚ್ ಹೋಲ್ ಕಟೌಟ್ ಅನ್ನು ಹೊಂದಿರುತ್ತದೆ. ಕೊನೆಯದಾಗಿ ಪ್ರಸ್ತುತ ಅದೇ 7300mAh ಬ್ಯಾಟರಿಯೊಂದಿಗೆ 45W ಫಾಸ್ಟ್ ಚಾರ್ಜಿಂಗ್ನೊಂದಿಗೆ ಬರುವ ನಿರೀಕ್ಷೆಗಳಿವೆ.