Vivo T3 Ultra 5G ಸ್ಮಾಟ್ಫೋನ್ 50MP ಸೆಲ್ಫಿ ಕ್ಯಾಮೆರಾದೊಂದಿಗೆ ಮೊದಲ ಮಾರಾಟ ಇಂದಿನಿಂದ ಶುರು! ಆಫರ್ ಬೆಲೆ ಎಷ್ಟು?

Updated on 19-Sep-2024
HIGHLIGHTS

Vivo T3 Ultra 5G ಸ್ಮಾರ್ಟ್ಫೋನ್ ಇಂದು ಸಂಜೆ 7:00 ಗಂಟೆಗೆ ಮೊದಲ ಮಾರಾಟವನ್ನು ಶುರುವಾಗಲಿದೆ.

Vivo T3 Ultra 5G ಸ್ಮಾರ್ಟ್ಫೋನ್ 50MP ಸೆಲ್ಫಿ ಕ್ಯಾಮೆರಾ ಮತ್ತು 5500mAh ಬ್ಯಾಟರಿಯೊಂದಿಗೆ ಬರುತ್ತದೆ.

Vivo T3 Ultra 5G ಖರೀದಿಸುವ ಬಳಕೆದಾರರಿಗೆ ಅದ್ದೂರಿಯ ಬ್ಯಾಂಕ್ ಮತ್ತು ವಿನಿಮಯ ಡಿಸ್ಕೌಂಟ್‌ಗಳೊಂದಿಗೆ ಲಭ್ಯವಾಗಲಿದೆ.

Vivo T3 Ultra 5G First Sale Today: ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ವಿವೋ (Vivo) ತನ್ನ ಲೇಟೆಸ್ಟ್ Vivo T3 Ultra 5G ಅನ್ನು ಒಂದು ವಾರದ ಹಿಂದೆ ಅಂದ್ರೆ 12ನೇ ಸೆಪ್ಟೆಂಬರ್ 2024 ರಂದು ಅಧಿರಕೃತವಾಗಿ ಬಿಡುಗಡೆಗೊಳಿಸಿತು ಆದರೆ ಇಂದು ಅಂದ್ರೆ 19ನೇ ಸೆಪ್ಟೆಂಬರ್ 2024 ರಂದು ಸಂಜೆ 7:00 ಗಂಟೆಗೆ ಇದರ ಮೊದಲ ಮಾರಾಟವನ್ನು ಹಮ್ಮಿಕೊಂಡಿದೆ. ಇದರೊಂದಿಗೆ ಈ Vivo T3 Ultra 5G ಖರೀದಿಸುವ ಬಳಕೆದಾರರಿಗೆ ಅದ್ದೂರಿಯ ಬ್ಯಾಂಕ್ ಮತ್ತು ವಿನಿಮಯ ಡಿಸ್ಕೌಂಟ್‌ಗಳೊಂದಿಗೆ ಲಭ್ಯವಾಗಲಿದೆ. ಈ ಲೇಟೆಸ್ಟ್ Vivo T3 Ultra 5G ಸ್ಮಾರ್ಟ್ಫೋನ್ ಫೀಚರ್ ಮತ್ತು ವಿಶೇಷಣಗಳನ್ನು ನೋಡುವುದಾದರೆ ಫೋನ್ 50MP ಸೆಲ್ಫಿ ಕ್ಯಾಮೆರಾ ಮತ್ತು 5500mAh ಬ್ಯಾಟರಿಯೊಂದಿಗೆ ಬರುತ್ತದೆ.

ಭಾರತದಲ್ಲಿ Vivo T3 Ultra 5G ಆಫರ್ ಬೆಲೆ ಮತ್ತು ಲಭ್ಯತೆಯ ಮಾಹಿತಿ

Vivo T3 Ultra 5G ಸ್ಮಾರ್ಟ್ಫೋನ್ ಈಗಾಗಲೇ ಮೇಲೆ ತಿಳಿಸಿರುವಂತೆ ಇದರ ಮೊದಲ ಮಾರಾಟವನ್ನು ಇಂದು ಸಂಜೆ 7:00 ಗಂಟೆಗೆ ಫ್ಲಿಪ್ಕಾರ್ಟ್ ಮತ್ತು ಆಯ್ದ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳ ಮೂಲಕ Lunar Gray ಮತ್ತು Frost Green ಎಂಬ ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಪ್ರಸ್ತುತ ಕೇವಲ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು 31,999 ರೂಗಳಿಗೆ ಬಿಡುಗಡೆಗೊಳಿಸಿದೆ.

Vivo T3 Ultra 5G First Sale Today

ಇದರ ಕ್ರಮವಾಗಿ 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು 33,999 ರೂಗಳಿಗೆ ಬಿಡುಗಡೆಗೊಳಿಸಿದೆ. ಆದರೆ ಕಂಪನಿ ಉತ್ತಮ ಬ್ಯಾಂಕ್ ಆಫರ್ ನೀಡುತ್ತಿದ್ದು ಸ್ಮಾರ್ಫೋನ್ ಬದಲಾವಣೆಯಡಿಯಲ್ಲಿ ಕನಿಷ್ಠ 3000 ರೂಗಳನ್ನು ಮತ್ತು HDFC ಮತ್ತು SBI ಕಾರ್ಡ್ ಬಳಸಿ ಖರೀದಿಸಿದರೆ 3000 ರೂಗಳ ಡಿಸ್ಕೌಂಟ್ ಸಹ ನೀಡುತ್ತಿದೆ.

Also Read: ಮತ್ತೇ Aadhaar Update ದಿನಾಂಕ ವಿಸ್ತರಣೆ! ನಿಮ್ಮ ಆಧಾರ್ ಅನ್ನು ನವೀಕರಿಸುವುದು ಏಕೆ ಮುಖ್ಯ?

Vivo T3 Ultra 5G ಫೀಚರ್ ಮತ್ತು ವಿಶೇಷಣಗಳೇನು?

Vivo T3 Ultra 5G ಸ್ಮಾರ್ಟ್ಫೋನ್ 6.78 ಇಂಚಿನ ಕರ್ವ್ ಡಿಸ್ಪ್ಲೇಯನ್ನು 3D ಕರ್ವ್ಡ್ AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಫೋನ್ 1.5K ರೆಸಲ್ಯೂಶನ್ (2800×1260 ಪಿಕ್ಸೆಲ್ಗಳು) ನೊಂದಿಗೆ ಬರುತ್ತದೆ. ಇದರ ಡಿಸ್ಪ್ಲೇಯಿಂದ ಬರುವ ಬ್ಲೂ ಲೈಟ್ (Blue Light) ಅನ್ನು ನಿಮ್ಮ ಕಣ್ಣುಗಳಿಂದ ರಕ್ಷಿಸುವ ರಕ್ಷಣೆಯೊಂದಿಗೆ ಬರುತ್ತದೆ. ಅಲ್ಲದೆ ಇದರಲ್ಲಿ ಪವರ್ಫುಲ್ ಸೌಂಡ್ ಅನುಭವ ನೀಡಲು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. Vivo T3 Ultra 5G ಸ್ಮಾರ್ಟ್ಫೋನ್ Funtouch OS 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಆಂಡ್ರಾಯ್ಡ್ 14 ಅನ್ನು ಆಧರಿಸಿದೆ. ಫೋನ್ MediaTek Dimensity 9200+ ಚಿಪ್‌ಸೆಟ್ ಹೊಂದಿದೆ.

Vivo T3 Ultra 5G First Sale Today

Vivo T3 Ultra 5G ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾವನ್ನು OIS ಮತ್ತು ಸೋನಿ ಹೊಂದಿದೆ. IMX921 ಲೆನ್ಸ್ ಮತ್ತು 8MP ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮರಾ ಅಲ್ಟ್ರಾ-ವೈಡ್ ಲಭ್ಯವಿದೆ. ಸೆಲ್ಫಿಗಾಗಿ ಫೋನ್ 50MP ಮೆಗಾಪಿಕ್ಸೆಲ್ ಲೆನ್ಸ್ ಅನ್ನು ಹೊಂದಿದೆ. ವಿವೋದ ಸಿಗ್ನೇಚರ್ ಔರಾ ರಿಂಗ್ ಲೈಟ್ ಫೋನ್‌ನಲ್ಲಿ ಲಭ್ಯವಿದೆ. Vivo T3 Ultra 5G ಸ್ಮಾರ್ಟ್ಫೋನ್ AI ಎರೇಸರ್ ಮತ್ತು AI ಫೋಟೋ ವರ್ಧನೆಯಂತಹ ಅನೇಕ AI ಆಧಾರಿತ ವೈಶಿಷ್ಟ್ಯಗಳು ಕ್ಯಾಮರಾದಲ್ಲಿ ಲಭ್ಯವಿದೆ. Vivo T3 Ultra 5G ಸ್ಮಾರ್ಟ್ಫೋನ್ ಫೋನ್ 4K ವೀಡಿಯೊ ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಫೋನ್‌ನಲ್ಲಿ ಕಂಪನಿಯು 2 ವರ್ಷಗಳ ಅಪ್ಡೇಟ್ ಮತ್ತು 3 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ಒದಗಿಸುತ್ತದೆ. Vivo T3 Ultra 5G ಸ್ಮಾರ್ಟ್ಫೋನ್ 80W ಚಾರ್ಜಿಂಗ್ ಅನ್ನು ಬೆಂಬಲದೊಂದಿಗೆ 5500mAh ಬ್ಯಾಟರಿಯನ್ನು ಹೊಂದಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :