Vivo T3 Ultra 5G ಭಾರತದಲ್ಲಿ 50MP ಸೆಲ್ಫಿ ಕ್ಯಾಮೆರಾದೊಂದಿಗೆ ನಾಳೆ ಬಿಡುಗಡೆ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

Vivo T3 Ultra 5G ಭಾರತದಲ್ಲಿ 50MP ಸೆಲ್ಫಿ ಕ್ಯಾಮೆರಾದೊಂದಿಗೆ ನಾಳೆ ಬಿಡುಗಡೆ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
HIGHLIGHTS

Vivo T3 Ultra 5G ಸ್ಮಾರ್ಟ್ಫೋನ್ ನಾಳೆ ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆಗೊಳಿಸಲು ಸಿದ್ದವಾಗಿದೆ.

Vivo T3 Ultra 5G ಸ್ಮಾರ್ಟ್ಫೋನ್ ಯಾವುದೇ ಸಂಶವಿಲ್ಲದೆ ನೇರವಾಗಿ Flipkart ಮೂಲಕ ಮಾರಾಟವಾಗಲಿದೆ.

ಫೋನ್ 1.5K 120Hz 3D Curved AMOLED ಡಿಸ್ಪ್ಲೇ ಮತ್ತು MediaTek Dimensity 9200+ ಚಿಪ್ ಹೊಂದಿದೆ.

ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ವಿವೋ (Vivo) ಈಗ ತನ್ನ ಲೇಟೆಸ್ಟ್ Vivo T3 Ultra 5G ಸ್ಮಾರ್ಟ್ಫೋನ್ ಅನ್ನು ನಾಳೆ ಅಂದರೆ 12ನೇ ಸೆಪ್ಟೆಂಬರ್ 2024 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆಗೊಳಿಸಲು ಸಿದ್ದವಾಗಿದೆ. ಅಲ್ಲದೆ ಕಂಪನಿ Vivo T3 Ultra 5G ಸ್ಮಾರ್ಟ್ಫೋನ್ ಬಿಡುಗಡೆಗೂ ಮುಂಚಿತವಾಗಿ ಇದರ ಒಂದಿಷ್ಟು ಫೀಚರ್ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಈ ಫೀಚರ್ ಆಧಾರದಿಂದಲೇ ನಿರೀಕ್ಷಿತ ಬೆಲೆ ಮತ್ತು ಹೆಚ್ಚಿನ ವಿಶೇಷತೆಗಳನ್ನು ಊಹಿಸಬಹುದು.

ವಿವೋ ಕಂಪನಿ ಪ್ರಸ್ತುತ ಮುಖ್ಯವಾಗಿ 1.5K 120Hz 3D Curved AMOLED ಡಿಸ್ಪ್ಲೇ ಮತ್ತು MediaTek Dimensity 9200+ ಚಿಪ್ ಜೊತೆಗೆ 12GB RAM ನೀಡುವುದಾಗಿ ಮಾಹಿತಿ ನೀಡಿದೆ. ನಾಳೆ ಬಿಡುಗಡೆಯಗಲಿರುವ ಈ Vivo T3 Ultra 5G ಭಾರತದಲ್ಲಿ ಯಾವ ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೊಂದಿಗೆ ಬರುತ್ತದೆ ಎನ್ನುವುದನ್ನು ಈ ಕೆಳಗೆ ಹಂತ ಹಂತವಾಗಿ ವಿವರಗಳನ್ನು ತಿಳಿಯಿರಿ.

Also Read: Reliance Jio ಸದ್ದಿಲ್ಲದೆ ಹೊಸ JioPhone Prima 2 ಕೇವಲ 2799 ರೂಗಳಿಗೆ ಬಿಡುಗಡೆಯಾಗಿದೆ

ಭಾರತದಲ್ಲಿ Vivo T3 Ultra 5G ನಿರೀಕ್ಷಿತ ಬೆಲೆ ಮತ್ತು ಲಭ್ಯತೆ

ಮೊದಲಿಗೆ ಈ ಮುಂಬರಲಿರುವ ಸ್ಮಾರ್ಟ್ಫೋನ್ ನಿರೀಕ್ಷಿತ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ Vivo T3 Ultra 5G ನಿಮಗೆ ಒಟ್ಟಾರೆಯಾಗಿ ಎರಡು ರೂಪಾಂತರಗಳಲ್ಲಿ ಬಿಡುಗಡೆಯನ್ನು ನಿರೀಕ್ಷಿಸಬಹುದು. ಅವೆಂದರೆ ಮೊದಲಿಗೆ 8GB RAM ಮತ್ತು 256GB ಸ್ಟೋರೇಜ್ 29,999 ರೂಗಳಿಗೆ ಬರಬಹುದು. ಇದರ ಕ್ರಮವಾಗಿ ಮತ್ತೊಂದು 12GB RAM ಮತ್ತು 512GB ಸ್ಟೋರೇಜ್ ಸುಮಾರು 30,999 ರೂಗಳಿಗೆ ನಿರೀಕ್ಷಿಸಬಹುದು. ಆದರೆ ಬಿಡುಗಡೆಯ ನಂತರವಷ್ಟೇ ಇವುಗಳ ರೂಪಾಂತರ ಮತ್ತು ಬೆಲೆ ಪಡೆಯಬಹುದು. ಅಲ್ಲದೆ ಈಗಾಗಲೇ ಕಂಪನಿ Vivo T3 Ultra 5G ಮೈಕ್ರೋಸೈಟ್ ಅನ್ನು ಫ್ಲಿಪ್ಕಾರ್ಟ್ ಮೂಲಕ ಪೋಸ್ಟ್ ಮಾಡಿದ್ದು ಈ ಸ್ಮಾರ್ಟ್ಫೋನ್ ಯಾವುದೇ ಸಂಶವಿಲ್ಲದೆ ನೇರವಾಗಿ Flipkart ಮೂಲಕ ಮಾರಾಟವಾಗಲಿದೆ.

Vivo T3 Ultra 5G with 50MP Selfi camera launch date confirmed in India
Vivo T3 Ultra 5G with 50MP Selfi camera launch date confirmed in India

ಭಾರತದಲ್ಲಿ Vivo T3 Ultra 5G ಫೀಚರ್ ಮತ್ತು ವಿಶೇಷಣಗಳು

Vivo T3 Ultra 5G ಸ್ಮಾರ್ಟ್ಫೋನ್ ಕರ್ವ್ ಕಾರ್ನರ್ಗಳೊಂದಿಗೆ 6.78 ಇಂಚಿನ 1.5K 120Hz 3D Curved AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ. ಈ ಸ್ಕ್ರೀನ್ HDR10+ ಬೆಂಬಲದೊಂದಿಗೆ 120Hz ರಿಫ್ರೆಶ್ ರೇಟ್ ಅನ್ನು ಹೊಂದಿದ್ದು ಸುಮಾರು 4500nits ಗರಿಷ್ಠ ಹೊಳಪನ್ನು ನೀಡುತ್ತದೆ. ಸ್ಮಾರ್ಟ್ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50MP ಸೋನಿ IMX921 ಪ್ರೈಮರಿ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿರುತ್ತದೆ. ಸ್ಮಾರ್ಟ್ಫೋನ್ ಸೆಲ್ಫಿಗಳಿಗಾಗಿ 50MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗ ಮತ್ತು ಹಿಂಭಾಗದ ಎರಡೂ ಕ್ಯಾಮೆರಾಗಳು 60fps 4K ವೀಡಿಯೋ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತವೆ ಮತ್ತು ವರ್ಧಿತ ಫೋಟೋ ಗುಣಮಟ್ಟಕ್ಕಾಗಿ ಔರಾ ಲೈಟ್ ರಿಂಗ್-LED ಫ್ಲ್ಯಾಷ್ ಅನ್ನು ಅಳವಡಿಸಲಾಗಿದೆ.

Vivo T3 Ultra 5G with 50MP Selfi camera launch date confirmed in India
Vivo T3 Ultra 5G with 50MP Selfi camera launch date confirmed in India

Vivo T3 Ultra 5G ಸ್ಮಾರ್ಟ್ಫೋನ್ MediaTek Dimensity 9200+ ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ. ಈಗಾಗಲೇ ಹೇಳಿರುವಂತೆ ಸ್ಮಾರ್ಟ್ಫೋನ್ 256GB 8GB ಮತ್ತು 12GB LPDDR4x RAM ಜೊತೆಗೆ 256GB ಮತ್ತು 512GB ಸ್ಟೋರೇಜ್ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಇದರ ಹೆಚ್ಚುವರಿಯಾಗಿ ಸ್ಮಾರ್ಟ್ಫೋನ್ ಉತ್ತಮವಾದ 5500mAh ಬ್ಯಾಟರಿಯನ್ನು 80W ಫಾಸ್ಟ್ ಚಾರ್ಜಿಂಗ್ನೊಂದಿಗೆ ಬರುವುದಾಗಿ ನಿರೀಕ್ಷಿಸಲಾಗಿದೆ. ಇದರ ಈ ದೊಡ್ಡ ಬ್ಯಾಟರಿಯ ಹೊರತಾಗಿಯೂ ಫೋನ್ 7.58mm ನಲ್ಲಿ ಸ್ಲಿಮ್ ಪ್ರೊಫೈಲ್ ಅನ್ನು ನಿರ್ವಹಿಸುತ್ತದೆ. Vivo T3 Ultra 5G ಸ್ಮಾರ್ಟ್ಫೋನ್ IP68 ರೇಟೆಡ್ ಧೂಳು ಮತ್ತು ನೀರಿನ ಪ್ರತಿರೋಧವನ್ನು ಅಳವಡಿಸಿರುವುದನ್ನು ನಿರೀಕ್ಷಿಸಲಾಗುತ್ತಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo