Vivo T3 Ultra 5G ಸ್ಮಾರ್ಟ್ಫೋನ್ 50MP ಸೆಲ್ಫಿ ಕ್ಯಾಮೆರಾ ಮತ್ತು 5500mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ

Vivo T3 Ultra 5G ಸ್ಮಾರ್ಟ್ಫೋನ್ 50MP ಸೆಲ್ಫಿ ಕ್ಯಾಮೆರಾ ಮತ್ತು 5500mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ
HIGHLIGHTS

ಭಾರತದಲ್ಲಿ Vivo ತನ್ನ ಹೊಸ ಸ್ಮಾರ್ಟ್‌ಫೋನ್ Vivo T3 Ultra 5G ಸ್ಮಾರ್ಟ್ಫೋನ್ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

50MP ಸೇಲ್ಫಿ ಕ್ಯಾಮೆರಾ ಮತ್ತು 80W ಚಾರ್ಜಿಂಗ್ ಅನ್ನು ಬೆಂಬಲದೊಂದಿಗೆ 5500mAh ಬ್ಯಾಟರಿಯನ್ನು ಒದಗಿಸಲಾಗಿದೆ.

Vivo T3 Ultra 5G ಸ್ಮಾರ್ಟ್ಫೋನ್ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಬೆಲೆಯನ್ನು 31,999 ರೂಗಳಿಗೆ ಬಿಡುಗಡೆ.

ಭಾರತದಲ್ಲಿ Vivo ತನ್ನ ಹೊಸ ಸ್ಮಾರ್ಟ್‌ಫೋನ್ Vivo T3 Ultra 5G ಸ್ಮಾರ್ಟ್ಫೋನ್ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. Vivo T3 Ultra 5G ಕಂಪನಿಯ T ಸರಣಿಯಲ್ಲಿ ಬಿಡುಗಡೆಯಾದ ಅತ್ಯಂತ ದುಬಾರಿ ಫೋನ್ ಅಂದರೆ ತಪ್ಪಿಲ್ಲ. ಇದರಲ್ಲಿ ನಿಮಗೆ AMOLED ಡಿಸ್ಪ್ಲೇಯೊಂದಿಗೆ 50MP ಸೇಲ್ಫಿ ಕ್ಯಾಮೆರಾ ಮತ್ತು 80W ಚಾರ್ಜಿಂಗ್ ಅನ್ನು ಬೆಂಬಲದೊಂದಿಗೆ 5500mAh ಬ್ಯಾಟರಿಯನ್ನು ಒದಗಿಸಲಾಗಿದೆ.

ಈ Vivo T3 Ultra 5G ಫೋನ್ ಅದರ ವಿಭಾಗದಲ್ಲಿ ಸಾಕಷ್ಟು ತೆಳುವಾಗಿದ್ದು ಪವರ್ಫುಲ್ ಪ್ರೊಸೆಸರ್ ಜೊತೆಗೆ ಲೇಟೆಸ್ಟ್ ಫೀಚರ್ಗಳನ್ನು ಸ್ಮಾರ್ಟ್ಫೋನ್ ಹೊಂದಿದೆ. ಭಾರತದಲ್ಲಿ ಇಂದು ಅಂದರೆ 12ನೇ ಸೆಪ್ಟೆಂಬರ್ 2024 ರಂದು ಬಿಡುಗಡೆಯಾಗಿರುವ ಈ Vivo T3 Ultra 5G ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ಇತರ ವಿವರಗಳನ್ನು ಈ ಕೆಳಗೆ ತಿಳಿಯಿರಿ.

ಭಾರತದಲ್ಲಿ Vivo T3 Ultra 5G ಬೆಲೆ ಮತ್ತು ಲಭ್ಯತೆಯ ವಿವರಗಳು

ಈ Vivo T3 Ultra 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ 3 ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ Vivo T3 Ultra 5G ಸ್ಮಾರ್ಟ್ಫೋನ್ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಬೆಲೆಯನ್ನು ಸುಮಾರು 31,999 ರೂಗಳಿಗೆ ಬಿಡುಗಡೆಗೊಳಿಸಿದ್ದು ಇದರ 8GB RAM ಮತ್ತು 256GB ಸ್ಟೋರೇಜ್ ಬೆಲೆಯನ್ನು ಸುಮಾರು 33,999 ರೂಗಳಿಗೆ ಮತ್ತು ಕೊನೆಯದಾಗಿ ಇದರ 12GB RAM ಮತ್ತು 256GB ಸ್ಟೋರೇಜ್ ಬೆಲೆಯನ್ನು ಸುಮಾರು 35,999 ರೂಗಳಿಗೆ ಬಿಡುಗಡೆಗೊಳಿಸಿದೆ.

Vivo T3 Ultra 5G launched in India with 50MP selfie camera and 5500mAh battery
Vivo T3 Ultra 5G launched in India with 50MP selfie camera and 5500mAh battery

ಆದರೆ ನೀವು HDFC ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ರೂ 3,000 ರಿಯಾಯಿತಿಯನ್ನು ಪಡೆಯಬಹುದು. ಫೋನ್ ಅನ್ನು ಫಾರೆಸ್ಟ್ ಗ್ರೀನ್ ಮತ್ತು ಲೂನಾರ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ಗ್ರಾಹಕರು ಇದನ್ನು ಫ್ಲಿಪ್‌ಕಾರ್ಟ್, ವಿವೋ ಇ-ಸ್ಟೋರ್ ಮತ್ತು ಪಾಲುದಾರ ಚಿಲ್ಲರೆ ಅಂಗಡಿಗಳಿಂದ 19ನೇ ಸೆಪ್ಟೆಂಬರ್ 2024 ರಂದು ಸಂಜೆ 7:00 ಗಂಟೆಯಿಂದ ಖರೀದಿಸಬಹುದು.

ಭಾರತದಲ್ಲಿ Vivo T3 Ultra 5G ಫೀಚರ್ ಮತ್ತು ವಿಶೇಷಣತೆಗಳೇನು?

ವಿವೋದ ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಅತ್ಯಂತ ತೀಕ್ಷ್ಣವಾದ ಕರ್ವ್ ಫೋನ್ 120Hz ರಿಫ್ರೆಶ್ ದರದೊಂದಿಗೆ 6.78 ಇಂಚಿನ ಡಿಸ್ಪ್ಲೇಯನ್ನು 3D ಕರ್ವ್ಡ್ AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಫೋನ್ 1.5K ರೆಸಲ್ಯೂಶನ್ (2800×1260 ಪಿಕ್ಸೆಲ್ಗಳು) ನೊಂದಿಗೆ ಬರುತ್ತದೆ. ಇದರ ಡಿಸ್ಪ್ಲೇಯಿಂದ ಬರುವ ಬ್ಲೂ ಲೈಟ್ ಅನ್ನು ನಿಮ್ಮ ಕಣ್ಣುಗಳಿಂದ ರಕ್ಷಿಸುವ ರಕ್ಷಣೆಯೊಂದಿಗೆ ಬರುತ್ತದೆ. ಅಲ್ಲದೆ ಇದರಲ್ಲಿ ಪವರ್ಫುಲ್ ಧ್ವನಿಗಾಗಿ ಎರಡು ಅಂದ್ರೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ.

Also Read: ಬರೋಬ್ಬರಿ 1 ಕೋಟಿಗೂ ಅಧಿಕ ಮೊಬೈಲ್ ನಂಬರ್‌ಗಳನ್ನು ಬ್ಲಾಕ್ ಮಾಡಿರುವ TRAI ಮತ್ತು DoT! ಕಾರಣವೇನು?

ಇದು 50MP ಮುಖ್ಯ ಕ್ಯಾಮೆರಾವನ್ನು OIS ಮತ್ತು ಸೋನಿ ಹೊಂದಿದೆ. IMX921 ಲೆನ್ಸ್ ಮತ್ತು 8MP ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮರಾ ಅಲ್ಟ್ರಾ-ವೈಡ್ ಲಭ್ಯವಿದೆ. ಸೆಲ್ಫಿಗಾಗಿ ಫೋನ್ 50MP ಮೆಗಾಪಿಕ್ಸೆಲ್ ಲೆನ್ಸ್ ಅನ್ನು ಹೊಂದಿದೆ. ವಿವೋದ ಸಿಗ್ನೇಚರ್ ಔರಾ ರಿಂಗ್ ಲೈಟ್ ಫೋನ್‌ನಲ್ಲಿ ಲಭ್ಯವಿದೆ. AI ಎರೇಸರ್ ಮತ್ತು AI ಫೋಟೋ ವರ್ಧನೆಯಂತಹ ಅನೇಕ AI ಆಧಾರಿತ ವೈಶಿಷ್ಟ್ಯಗಳು ಕ್ಯಾಮರಾದಲ್ಲಿ ಲಭ್ಯವಿದೆ. ಫೋನ್ 4K ವೀಡಿಯೊ ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತದೆ.

Vivo T3 Ultra 5G launched in India with 50MP selfie camera and 5500mAh battery
Vivo T3 Ultra 5G launched in India with 50MP selfie camera and 5500mAh battery

ಫೋನ್ Funtouch OS 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು Android 14 ಅನ್ನು ಆಧರಿಸಿದೆ. ಇದು ಈ ವಿಭಾಗದಲ್ಲಿ ಅತ್ಯಂತ ವೇಗವಾಗಿ ಬಾಗಿದ ಫೋನ್ ಎಂದು ಕಂಪನಿಯು ಹೇಳಿಕೊಂಡಿದೆ. ಫೋನ್ MediaTek Dimensity 9200+ ಚಿಪ್‌ಸೆಟ್ ಅನ್ನು ಹೊಂದಿದೆ. ಪ್ರೊಸೆಸರ್ ಅನ್ನು RAM ಮತ್ತು ಸ್ಟೋರೇಜ್ ಅವಲಂಬಿಸಿದ್ದು 12GB RAM ಮತ್ತು 256GB ವರೆಗಿನ ಸ್ಟೋರೇಜ್ನೊಂದಿಗೆ ಜೋಡಿಸಲಾಗಿದೆ. ಪ್ರೊಸೆಸರ್ 16,00,000 AnTuTu ಸ್ಕೋರ್ ಅನ್ನು ಸಾಧಿಸಿದೆ ಎಂದು ಕಂಪನಿಯು ಹೇಳಿಕೊಂಡಿದೆ. ಫೋನ್‌ನಲ್ಲಿ ಕಂಪನಿಯು 2 ವರ್ಷಗಳ androidಆಂಡ್ರಾಯ್ಡ್ ಅಪ್ಡೇಟ್ ಮತ್ತು 3 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ಒದಗಿಸುತ್ತದೆ. ಸ್ಮಾರ್ಟ್ಫೋನ್ 80W ಚಾರ್ಜಿಂಗ್ ಅನ್ನು ಬೆಂಬಲದೊಂದಿಗೆ 5500mAh ಬ್ಯಾಟರಿಯನ್ನು ಒದಗಿಸಲಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo