8GB RAM ಮತ್ತು ಸೋನಿ ಕ್ಯಾಮೆರಾವುಳ್ಳ Vivo T3 5G ನಾಳೆ ಬಿಡುಗಡೆ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

Updated on 20-Mar-2024
HIGHLIGHTS

Vivo T3 5G ಸ್ಮಾರ್ಟ್ಫೋನ್ ನಿಮಗೆ 50MP ಸೋನಿ IMX882 ಪ್ರೈಮರಿ ಕ್ಯಾಮೆರಾ IOS ಜೊತೆಗೆ ಬರಲಿದೆ.

ಹೊಸ Vivo T3 5G ಸ್ಮಾರ್ಟ್ಫೋನ್ ಅನ್ನು ನಾಳೆ ಅಂದ್ರೆ 21ನೇ ಮಾರ್ಚ್ 2024 ರಂದು ಬಿಡುಗಡೆಗೊಳಿಸಲು ಸಜ್ಜಾಗಿದೆ.

Vivo T3 5G ಸ್ಮಾರ್ಟ್ಫೋನ್ ಅತ್ಯುತ್ತಮ ಡಿಸ್ಪ್ಲೇ ಮತ್ತು ಪವರ್ಫುಲ್ ಬ್ಯಾಟರಿಯೊಂದಿಗೆ ಸುಮಾರು 20,000 ರೂಗಳಿಗೆ ಬಿಡುಗಡೆ.

Vivo T3 5G to launch in India on 21 March 2024: ಕ್ಯಾಮೆರಾ ವಿಭಾಗದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ವಿವೊ ಭಾರತದಲ್ಲಿ ತನ್ನ ಮುಂಬರಲಿರುವ ಹೊಸ Vivo T3 ಸ್ಮಾರ್ಟ್ಫೋನ್ ಅನ್ನು ನಾಳೆ ಅಂದ್ರೆ 21ನೇ ಮಾರ್ಚ್ 2024 ರಂದು ಬಿಡುಗಡೆಗೊಳಿಸಲು ಸಜ್ಜಾಗಿದೆ. ಸ್ಮಾರ್ಟ್ಫೋನ್ ಬಿಡುಗಡೆಗೂ ಮುಂಚಿತವಾಗಿ ಕೆಲವು ಹೊಸ ಫೀಚರ್ ಮತ್ತು ಭಾರಿ ಕೊಡುಗೆಗಳೊಂದಿಗೆ ಸ್ಮಾರ್ಟ್‌ಫೋನ್ ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಹೊಸ ಮತ್ತು ಮುಂಬರಲಿರುವ ಸ್ಮಾರ್ಟ್ಫೋನ್ ನಿಮಗೆ ಸೋನಿ ಕ್ಯಾಮೆರಾದೊಂದಿಗೆ ಅತ್ಯುತ್ತಮ ಡಿಸ್ಪ್ಲೇ ಮತ್ತು ಪವರ್ಫುಲ್ ಬ್ಯಾಟರಿ ಮತ್ತು ಪ್ರೊಸೆಸರ್ನೊಂದಿಗೆ ಸುಮಾರು 20,000 ರೂಗಳೊಳಗೆ ಬಿಡುಗಡೆಯಾಗುವುದಾಗಿ ನಿರೀಕ್ಷಿಸಲಾಗಿದೆ.

Also Read: Voice Clone Fraud: ಸುಮಾರು 83% ಭಾರತೀಯರು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಾಯ್ಸ್ ವಂಚನೆಗೆ ಬಲಿಯಾಗಿದ್ದಾರೆ!

Vivo T3 5G ನಿರೀಕ್ಷಿತ ವಿಶೇಷಣಗಳು

ಈ ಮುಂಬರಲಿರುವ ವಿವೊ ಸ್ಮಾರ್ಟ್ಫೋನ್ 6.67 ಇಂಚಿನ FHD + AMOLED ಡಿಸ್ಪ್ಲೇಯೊಂದಿಗೆ 120Hz ರಿಫ್ರೆಶ್ ರೇಟ್ ಮತ್ತು 1800 nits ವರೆಗಿನ ಹೊಳಪನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಸ್ಮಾರ್ಟ್ಫೋನ್ ನಿಮಗೆ 50MP ಸೋನಿ IMX882 ಪ್ರೈಮರಿ ಕ್ಯಾಮೆರಾ IOS ಜೊತೆಗೆ ಬಂದ್ರೆ ಮತ್ತೊಂದು 2MP ಲೆನ್ಸ್ ಬೊಕೆ ಸೆನ್ಸರ್ ಆಗಿದ್ದು ಫ್ಲಿಕರ್ ಸೆನ್ಸರ್ ಹೊಂದಿರಬಹುದು. ಕೊನೆಯದಾಗಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 16MP ಮುಂಭಾಗದ ಕ್ಯಾಮೆರಾದೊಂದಿಗೆ ಬರಲಿದೆ.

Vivo T3 5G to launch in India on 21 March 2024 – GetSetTurbo #vivoT3

ಸ್ಮಾರ್ಟ್ಫೋನ್ ಮೀಡಿಯಾಟೆಕ್ ಸರಣಿಯ ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು ಕಂಪನಿಯು ನಿರ್ದಿಷ್ಟ ಮಾದರಿಯನ್ನು ಟ್ವಿಟ್ಟರ್ ಮೂಲಕ ಬಹಿರಂಗಪಡಿಸಿದೆ. ಇದು MediaTek Dimensity 7200 ಪ್ರೊಸೆಸರ್ನೊಂದಿಗೆ ಆಂಡ್ರಾಯ್ಡ್ 14 ಆಧಾರವಾಗಿ ಬರುವ ನಿರೀಕ್ಷೆಗಳಿವೆ. ಇದರ ಮೆಮೊರಿಯಲ್ಲಿ ಸ್ಮಾರ್ಟ್‌ಫೋನ್ 8GB RAM ಮತ್ತು 128GB ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಎಂಬ ಎರಡು ಆಯ್ಕೆಗಳೊಂದಿಗೆ ಬರುವುದಾಗಿ ನಿರೀಕ್ಷಿಸಲಾಗಿದೆ. ಫೋನ್ 44W ಫ್ಲ್ಯಾಶ್‌ಚಾರ್ಜ್ ತಂತ್ರಜ್ಞಾನಕ್ಕೆ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದುವ ನಿರೀಕ್ಷೆಯಿದೆ.

ವಿವೋ T3 5G ನಿರೀಕ್ಷಿತ ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ Vivo T3 5G ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ಮಾತನಾಡುವುದಾದರೆ ಈಗಾಗಲೇ ಮೇಲೆ ತಿಳಿಸಿರುವಂತೆ ಸ್ಮಾರ್ಟ್‌ಫೋನ್ 8GB RAM ಮತ್ತು 128GB ರೂಪಾಂತರಕ್ಕೆ 17,999 ರೂಗಳಾದರೆ ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಎಂಬ ರೂಪಾಂತರಕ್ಕೆ 19,999 ರೂಗಳಾಗುವ ನಿರೀಕ್ಷೆಗಳಿವೆ. ಫೋನ್ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಬಾಳಿಕೆಗಾಗಿ IP54 ರೇಟಿಂಗ್, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮತ್ತು ಹೆಚ್ಚಿನವು ಸೇರಿವೆ. ಸ್ಮಾರ್ಟ್ಫೋನ್ ಭಾರತದಲ್ಲಿ ಫ್ಲಿಪ್ಕಾರ್ಟ್ ಮೂಲಕ ಮಾರಾಟವಾಗಲಿದ್ದು ಆಸಕ್ತರು ಇದರ ಲೈವ್ ಬಿಡುಗಡೆಯನ್ನು ಮತ್ತು ಇದರ ಮತ್ತಷ್ಟು ಮಾಹಿತಿಯನ್ನು ವಿವೊ ಅಧಿಕೃತ YouTube ಚಾನಲ್‌ನಲ್ಲಿ ವೀಕ್ಷಿಸಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :