8GB RAM ಮತ್ತು 50MP ಕ್ಯಾಮೆರಾವುಳ್ಳ Vivo T3 5G ಭಾರತದಲ್ಲಿ ಲಾಂಚ್! ಬೆಲೆ ಮತ್ತು ಟಾಪ್ 5 ಫೀಚರ್ಗಳೇನು?

8GB RAM ಮತ್ತು 50MP ಕ್ಯಾಮೆರಾವುಳ್ಳ Vivo T3 5G ಭಾರತದಲ್ಲಿ ಲಾಂಚ್! ಬೆಲೆ ಮತ್ತು ಟಾಪ್ 5 ಫೀಚರ್ಗಳೇನು?
HIGHLIGHTS

Vivo T3 5G ಆರಂಭಿಕ 8GB RAM ಮತ್ತು 128GB ಸ್ಟೋರೇಜ್ 19,999 ರೂಗಳಿಂದ ಆರಂಭ.

Vivo T3 5G ಭಾರತದಲ್ಲಿ 5000mAh ಬ್ಯಾಟರಿ ಮತ್ತು 50MP ಕ್ಯಾಮೆರಾದೊಂದಿಗೆ ಬಿಡುಗಡೆಯಾಗಿದೆ.

ವಿವೊ ತನ್ನ ಲೇಟೆಸ್ಟ್ Vivo T3 5G ಸ್ಮಾರ್ಟ್ಫೋನ್ ಅನ್ನು ಇಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

Vivo T3 5G launched in India: ವಿವೋ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಲೇಟೆಸ್ಟ್ ಸ್ಮಾರ್ಟ್ಫೋನ್ 8GB RAM ಮತ್ತು 50MP ಕ್ಯಾಮೆರಾವುಳ್ಳ Vivo T3 5G ಅಧಿಕೃತವಾಗಿ ಇಂದು ಬಿಡುಗಡೆಗೊಳಿಸಿದೆ. ವಿವೋ ಕಂಪನಿಯ ಫ್ಲಿಪ್ಕಾರ್ಟ್ ವೆಬ್‌ಸೈಟ್‌ನಲ್ಲಿ ಈ ಸ್ಮಾರ್ಟ್ಫೋನ್ ತನ್ನದೇಯಾದ ಮೀಸಲಾದ ಮೈಕ್ರೋಸೈಟ್ ಅನ್ನು ಸಹ ಹೊಂದಿದ್ದು ಇದರ ಎಲ್ಲಾ ಮಾಹಿತಿಯನ್ನು ನೀಡುತ್ತಿದೆ. ಸ್ಮಾರ್ಟ್‌ಫೋನ್ ಕುರಿತು ಪ್ರಮುಖ ವಿವರಗಳನ್ನು ನೋಡುವುದಾದರೆ MediaTek Dimensity ಚಿಪ್‌ಸೆಟ್, ವಿನ್ಯಾಸ, ಸೋನಿ ಕ್ಯಾಮೆರಾ ಮತ್ತು ದೊಡ್ಡದಾದ ಬ್ಯಾಟರಿ, ಬೆಲೆಯೊಂದಿಗೆ ಇದರ ಟಾಪ್ 5 ಫೀಚರ್ಗಳೇನು ತಿಳಿಯಿರಿ.

Also Read: Holi 2024: ಹೋಲಿ ಆಡುವಾಗ Smartphone ಮತ್ತು SmartWatch ನೀರು ಮತ್ತು ಬಣ್ಣದಿಂದ ರಕ್ಷಿಸುವುದು ಹೇಗೆ?

ಭಾರತದಲ್ಲಿ Vivo T3 5G ಡಿಸ್ಪ್ಲೇ ಮತ್ತು ಡಿಸೈನ್ ಮಾಹಿತಿ

Vivo T3 5G ಸ್ಮಾರ್ಟ್ಫೋನ್ ನಿಮಗೆ 2400 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ 6.67 ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇಯೊಂದಿಗೆ 120Hz ರಿಫ್ರೆಶ್ ರೇಟ್‌ಗೆ ಬೆಂಬಲವನ್ನು 360Hz ಟಚ್ ಸ್ಯಾಂಪ್ಲಿಂಗ್ ರೆಟ್ ಸಪೋರ್ಟ್ ಮಾಡುತ್ತದೆ. ಅಲ್ಲದೆ ಫೋನ್ ಒಳಗೆ HD ಲೈವ್ ಸ್ಟ್ರೀಮ್ ಮಾಡಲು HDR 10+ ಪ್ರಮಾಣೀಕರಣ ಮತ್ತು 1800 ನಿಟ್‌ಗಳವರೆಗೆ ಗರಿಷ್ಠ ಹೊಳಪನ್ನು ಸಹ ಹೊಂದಿದೆ. ಒಟ್ಟಾರೆಯಾಗಿ ನಿಮಗೆ ಅತ್ಯುತ್ತಮ ಡಿಸ್ಪ್ಲೇ ಅನುಭವವನ್ನು ಫೋನ್ ನೀಡುತ್ತದೆ.

Vivo T3 5G launched in India
Vivo T3 5G launched in India

ಭಾರತದಲ್ಲಿ Vivo T3 5G ಕ್ಯಾಮೆರಾ ಮತ್ತು ಲೆನ್ಸ್ ಮಾಹಿತಿ

Vivo T3 5G ಟ್ರಿಪಲ್ ಬ್ಯಾಕ್ ಕ್ಯಾಮರಾದೊಂದಿಗೆ ಬಿಡುಗಡೆಯಾಗಿದ್ದು 50MP ಮೆಗಾಪಿಕ್ಸೆಲ್ Sony IMX882 ಪ್ರೈಮರಿ ಸೆನ್ಸರ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ ಬರುತ್ತದೆ. ಇದರ ಮತ್ತೊಂದು 2MP ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು ಕೊನೆಯದಾಗಿ ಫ್ಲಿಕರ್ ಸೆನ್ಸರ್ ಅನ್ನು ಸಹ ನೀಡಲಾಗಿದೆ. ಅಲ್ಲದೆ ನೈಟ್ ಫೋಟೋಗ್ರಾಫಿಗಾಗಿ ಫೋನ್ ಹಿಂಭಾಗದಲ್ಲಿ LED ಫ್ಲಾಷ್ ಯೂನಿಟ್ ಅನ್ನು ಒಳಗೊಂಡಿದೆ. ಅಲ್ಲದೆ ಇದರ ಸ್ಕ್ರೀನ್ ಮೇಲ್ಭಾಗದಲ್ಲಿ ಕೇಂದ್ರೀಕೃತ ರಂಧ್ರ-ಪಂಚ್ ಕಟೌಟ್‌ನಲ್ಲಿ ಇರಿಸಲಾದ ಮುಂಭಾಗದ ಕ್ಯಾಮರಾ 16MP ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ.

ಭಾರತದಲ್ಲಿ ವಿವೋ T3 5G ಹಾರ್ಡವೆರ್ ಮತ್ತು ಸ್ಟೋರೇಜ್ ಮಾಹಿತಿ

ಈ ಹೊಸ ಸ್ಮಾರ್ಟ್ ಫೋನ್ ಒಟ್ಟಾರೆಯಾಗಿ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಮೊದಲನೆಯದು 8GB RAM ಮತ್ತು 128GB ಮತ್ತೊಂದು ಅದೇ 8GB RAM ಮತ್ತು 256GB ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್‌ ನಿಂದ ಕಾರ್ಯನಿರ್ವಹಿಸುತ್ತದೆ. Vivo T3 5G ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ಆಧಾರಿತ FuntouchOS 14 ನೊಂದಿಗೆ ರವಾನಿಸುತ್ತದೆ.

ಭಾರತದಲ್ಲಿ Vivo T3 5G ಬ್ಯಾಟರಿ ಮತ್ತು ಸೆನ್ಸರ್ ಮಾಹಿತಿ

Vivo T3 5G ಸ್ಮಾರ್ಟ್ಫೋನ್ ನಿಮಗೆ 44W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯೊಂದಿಗೆ ಬರುತ್ತದೆ. ಇದು 5G, 4G VoLTE, Wi-Fi 6, ಬ್ಲೂಟೂತ್ 5.3, GPS ಮತ್ತು USB ಟೈಪ್-C ಸಂಪರ್ಕವನ್ನು ಪಡೆಯುತ್ತದೆ. ಫೋನ್ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP54 ರೇಟಿಂಗ್ ಅನ್ನು ಹೊಂದಿದೆ ಮತ್ತು ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ.

Vivo T3 5G launched in India
Vivo T3 5G launched in India

ಭಾರತದಲ್ಲಿ ವಿವೋ T3 5G ಬೆಲೆ ಮತ್ತು ಲಭ್ಯತೆ ಮಾಹಿತಿ

ಈ ವಿವೋ ಸ್ಮಾರ್ಟ್ಫೋನ್ ನಿಮಗೆ ಕಾಸ್ಮಿಕ್ ಬ್ಲೂ ಮತ್ತು ಕ್ರಿಸ್ಟಲ್ ಫ್ಲೇಕ್ ಬಣ್ಣದ ಆಯ್ಕೆಗಳಲ್ಲಿ ನೀಡಲಾದ Vivo T3 5G ಬೆಲೆಯ ಬಗ್ಗೆ ಮಾತಂದುವುದಾದರೆ ಇದರ 8GB RAM ಮತ್ತು 128GB ಆರಂಭಿಕ ರೂಪಾಂತರಕ್ಕಾಗಿ 19,999 ರೂಗಳಾದರೆ ಇದರ 8GB RAM ಮತ್ತು 256GB ಕಾನ್ಫಿಗರೇಶನ್ 21,999 ರೂಗಳಾಗಿವೆ. ಆಸಕ್ತರು ವಿವೋ ಇಂಡಿಯಾ ಆನ್‌ಲೈನ್ ಸ್ಟೋರ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಮೊದಲ ಮಾರಾಟ 27ನೇ ಮಾರ್ಚ್ 2024 ರಂದು ಮಧ್ಯಾಹ್ನ 12 ಗಂಟೆಗೆ IST ದೇಶದಲ್ಲಿ ಫೋನ್ ಖರೀದಿಗೆ ಲಭ್ಯವಿರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo