ವಿವೋ ಕಂಪನಿ ತನ್ನ ಮುಂಬರಲಿರುವ ಹೊಸ T2 ಸರಣಿಯ ಸ್ಮಾರ್ಟ್ಫೋನ್ ಅನ್ನು ತನ್ನ ಪಟ್ಟಿಯಲ್ಲಿ ತಯಾರಿಸಿದೆ. ಇದನ್ನು ಕಂಪನಿ Vivo T2 Pro 5G ಎಂದು ಹೆಸರಿಸಿದ್ದು ಈ ಹೊಸ 5G ಸ್ಮಾರ್ಟ್ಫೋನ್ ಬಿಡುಗಡೆಗಾಗಿ ಅಧಿಕೃತ ದಿನಾಂಕವನ್ನು ಪ್ರಕಟಿಸಿದೆ. ಭಾರತದಲ್ಲಿ Vivo T2 Pro 5G ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಕಂಪನಿಯು ದೃಢಪಡಿಸಿದ ಸ್ವಲ್ಪ ಸಮಯದ ನಂತರ ಈ ಡೇಟ್ ಸಹ ಕಂಫಾರ್ಮ್ ಮಾಡಿದೆ. ಕಂಪನಿಯು ಈಗಾಗಲೇ ಈ ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್ ಮೂಲಕ ಲಭ್ಯವಾಗುವುದಾಗಿ ತಿಳಿಸಿದ್ದು ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದೆ.
ಪೋಸ್ಟರ್ ಮೂಲಕ ಈಗಾಗಲೇ ಈ ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್ ಮೂಲಕ ಲಭ್ಯವಾಗುವುದಾಗಿ ತಿಳಿಸಿದ್ದು Vivo T2 Pro 5G ಭಾರತದಲ್ಲಿ ಸೆಪ್ಟೆಂಬರ್ 22 ರಂದು ಮಧ್ಯಾಹ್ನ 12:00 ಗಂಟೆಗೆ ಬಿಡುಗಡೆಯಾಗಲಿದೆ. ಈ ಲಾಂಚ್ ಈವೆಂಟ್ ಅನ್ನು ಕಂಪನಿಯ YouTube ಚಾನಲ್‌ನಲ್ಲಿ ಲೈವ್ ಸ್ಟ್ರೀಮ್ ಮಾಡುವ ಸಾಧ್ಯತೆಯಿದೆ. ಅಲ್ಲದೆ ಫೋನ್ ಫ್ಲಿಪ್‌ಕಾರ್ಟ್ ಕಂಪನಿಯ ಆನ್‌ಲೈನ್ ಸ್ಟೋರ್ ಮತ್ತು ರಿಟೇಲ್ ಸ್ಟೋರ್‌ಗಳ ಮೂಲಕ ಮಾರಾಟವಾಗಲಿದೆ ಎಂದು ಖಚಿತಪಡಿಸಲಾಗಿದೆ.
https://twitter.com/Vivo_India/status/1702557577375350841?ref_src=twsrc%5Etfw
ಮುಂಬರಲಿರುವ ಈ ಸ್ಮಾರ್ಟ್ಫೋನ್ ಬಿಡುಗಡೆಯ ಪ್ರಕಟಣೆಯು ಟೀಸರ್ ಚಿತ್ರದೊಂದಿಗೆ ಬರುತ್ತದೆ. Vivo T2 Pro 5G ವಿನ್ಯಾಸವನ್ನು ಬಹಿರಂಗಪಡಿಸುತ್ತದೆ. ಬಾಗಿದ ಡಿಸ್ಪ್ಲೇಯೊಂದಿಗೆ ಫೋನ್ ಹೊಳೆಯುವ ಚಿನ್ನದ ಬಣ್ಣದಲ್ಲಿ ಕಂಡುಬರುತ್ತದೆ. ಇದು ಬಾಗಿದ ಅಂಚುಗಳೊಂದಿಗೆ ಪಂಚ್-ಹೋಲ್ ಡಿಸ್ಪ್ಲೇಯನ್ನು ಹೊಂದಿದೆ. ಮತ್ತು ಹಿಂಭಾಗದಲ್ಲಿ ಮ್ಯಾಟರ್ ಫಿನಿಶ್‌ನಂತೆ ಕಾಣುತ್ತದೆ. Vivo T2 Pro 5G ಯ ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಆರಾ ಲೈಟ್ ರಿಂಗ್ ಸಹ ಇದೆ. ಸ್ಮಾರ್ಟ್‌ಫೋನ್ ಹೆಚ್ಚಿನ ಬಣ್ಣಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಭಾರತದಲ್ಲಿ Vivo T2 Pro 5G ಸ್ಮಾರ್ಟ್ಫೋನ್ ಈಗಾಗಲೇ ಮೇಲೆ ತಿಳಿಸಿರುವಂತೆ ನಿಮಗೆ ಫ್ಲಿಪ್ಕಾರ್ಟ್ ಮೂಲಕ ಖರೀದಿಗೆ ಲಭ್ಯವಾಗಲಿದ್ದು 25ನೇ ಸೆಪ್ಟೆಂಬರ್ ರಿಂದ ಮಾರಾಟದವಾಗುವ ನಿರೀಕ್ಷೆಗಳಿವೆ. ಅಲ್ಲದೆ ಇದರ ಬೆಲೆಯ ವಿವರಗಳನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲವಾದರೂ ಇದರ ಬೆಲೆ ಸುಮಾರು 23,999 ರೂಗಳಿಂದ ಆರಂಭವಾಗುವ ನಿರೀಕ್ಷೆಗಳಿವೆ. ಭಾರತದಲ್ಲಿ ಈ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ 2 ವೇರಿಯಂಟ್ ಅಲ್ಲಿ ಬರಬಹುದು ಅವೆಂದರೆ 6GB RAM + 128GB ಮತ್ತು 8GB RAM + 256GB. ಒಟ್ಟಾರೆಯಾಗಿ ಇದರ ಹೈ ವೇರಿಯೆಂಟ್ ಬೆಲೆಯನ್ನು ನೀವು ಸುಮಾರು 25,000 ರೂಗಳೊಳಗೆ ನಿರೀಕ್ಷಿಸಬಹುದು. ಇದರ ಅಸಲಿ ಬೆಲೆ ಮತ್ತು ಅಸಲಿ ಕಹಾನಿ ತಿಳಿಯಲು ಡಿಜಿಟ್ ಕನ್ನಡವನ್ನು ಫಾಲೋ ಮಾಡುತ್ತಿರಿ.
ಮುಂಬರುವ ಈ Vivo T2 Pro 5G ಸ್ಮಾರ್ಟ್‌ಫೋನ್ 120Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 120Hz ರಿಫ್ರೆಶ್ ರೇಟ್ ಡಿಸ್‌ಪ್ಲೇಯನ್ನು ಹೊಂದಿರುತ್ತದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಮತ್ತು 6GB RAM + 128GB ಸ್ಟೋರೇಜ್ ಮತ್ತು 8GB RAM + 256GB ಸ್ಟೋರೇಜ್ ಆಯ್ಕೆಗಳಲ್ಲಿ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ನೀಡಬಹುದು ಎಂದು ಹೇಳಲಾಗುತ್ತದೆ. ಇದು OIS ಗೆ ಬೆಂಬಲದೊಂದಿಗೆ 64MP ಮೆಗಾಪಿಕ್ಸೆಲ್ ಪ್ರೈಮರಿ ರಿಯರ್ ಶೂಟರ್ ಅನ್ನು ಪ್ಯಾಕ್ ಮಾಡುತ್ತದೆ ಎಂದು ವರದಿಯಾಗಿದೆ. ಕ್ಯಾಮೆರಾ 4K ವೀಡಿಯೋಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಇದರಲ್ಲಿ ನಿರೀಕ್ಷಿಸಬಹುದು.