ಭಾರತದಲ್ಲಿ Vivo S1 Pro ಸ್ಮಾರ್ಟ್ಫೋನ್ 4ನೇ ಜನವರಿ 2020 ರಂದು ಬಿಡುಗಡೆಯಾಗಿದೆ. ಕಂಪನಿಯು ‘S’ ಸರಣಿಯ ಮುಂದಿನ ಫೋನ್ ಆಗಿದೆ. ವಿವೋ S ಸರಣಿಯು ಇಂದಿನ ಯುವಕರನ್ನು ಗುರಿಯಾಗಿಸಿಕೊಂಡಿದೆ ಮತ್ತು ಕಾರ್ಯಕ್ಷಮತೆಯೊಂದಿಗೆ ಶೈಲಿಯನ್ನು ಸಂಯೋಜಿಸುತ್ತದೆ. ಆದ್ದರಿಂದ Vivo S1 Pro ಫೋನ್ 48MP ಮೆಗಾಪಿಕ್ಸೆಲ್ ಕ್ವಾಡ್ ಕ್ಯಾಮೆರಾ ಸೆಟಪ್ ಪ್ರೈಮರಿ ಕ್ಯಾಮೆರಾ ಮತ್ತು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32MP ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾವನ್ನು ಒಳಗೊಂಡಿರುತ್ತದೆ.
Vivo S1 Pro ಸ್ಮಾರ್ಟ್ಫೋನ್ 6.39 ಇಂಚಿನ FHD+ ಸೂಪರ್ ಅಮೋಲೆಡ್ ಸ್ಕ್ರೀನ್ ಜೊತೆಗೆ 19.5: 9 ಆಕಾರ ಅನುಪಾತದೊಂದಿಗೆ ಹೊಂದಿದೆ. ಇಲ್ಲಿ ಸ್ಕ್ರೀನ್-ಟು-ಬಾಡಿ 90% ಪ್ರತಿಶತದಷ್ಟು ವಾಟರ್ ಡ್ರಾಪ್ ದರ್ಜೆಯೊಂದಿಗೆ ಇರುತ್ತದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 665 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಮತ್ತು ಈ ಫೋನ್ ಕೇವಲ ಒಂದೇ ಒಂದು ವೇರಿಯಂಟಲ್ಲಿ ಬರುತ್ತದೆ. ಅದು 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿರುತ್ತದೆ. ಇದು ಆಂಡ್ರಾಯ್ಡ್ 9 ಪೈನಲ್ಲಿ ಫಂಟೌಚ್ ಓಎಸ್ 9.2 ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಫೋನ್ ಹೊಸ ವಜ್ರದ ಆಕಾರದ ಮಾಡ್ಯೂಲ್‌ನಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಕಾನ್ಫಿಗರೇಶನ್ ಅನ್ನು ಹೊಂದಿರುತ್ತದೆ. ಇದು 48MP ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲೆನ್ಸ್ ಅನ್ನು ಒಳಗೊಂಡಿದೆ. ಇದರೊಂದಿಗೆ ಕ್ರಮವಾಗಿ 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮ್ಯಾಕ್ರೋ ಶಾಟ್‌ಗಳಿಗಾಗಿ 2MP ಮೆಗಾಪಿಕ್ಸೆಲ್ ಮತ್ತು ಪೋರ್ಟ್ರೇಟ್ ಶಾಟ್‌ಗಳಿಗಾಗಿ 2MP ಮೆಗಾಪಿಕ್ಸೆಲ್ ನೀಡಲಾಗಿದೆ. 32MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸಹ ಇದೆ. ಇದರಲ್ಲಿ 4500mAh ಬ್ಯಾಟರಿಯನ್ನು 18w ಫಾಸ್ಟ್ ಚಾರ್ಜರ್ ಜೊತೆಗೆ ಹೊಂದಿಸಲಾಗಿದೆ.
ಈ ಸ್ಮಾರ್ಟ್ಫೋನ್ Jazzy Blue, Mystic Black, Dreamy White ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಆಫ್‌ಲೈನ್‌ನಲ್ಲಿ ಖರೀದಿಸುವ ಗ್ರಾಹಕರಿಗೆ ICICI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ ಶೇಕಡಾ 10% ರಷ್ಟು ಕ್ಯಾಶ್‌ಬ್ಯಾಕ್ ಮತ್ತು ಆಫರ್‌ನಲ್ಲಿ ಒಂದು ಬಾರಿ ಸ್ಕ್ರೀನ್ ರಿಪ್ಲೇಸ್ಮೆಂಟ್ ಸಹ ಲಭ್ಯವಿದೆ. ಈ Vivo S1 Pro ಸ್ಮಾರ್ಟ್ಫೋನ್ ಬೆಲೆ 19,990 ರೂಗಳಾಗಿವೆ.