ಈ ಹಿಂದೆ ಜಿಎಸ್ಟಿ ದರಗಳ ಹೆಚ್ಚಳದ ನಂತರ ಬಹುತೇಕ ಎಲ್ಲಾ ಸ್ಮಾರ್ಟ್ಫೋನ್ ತಯಾರಕರು ಸ್ಮಾರ್ಟ್ಫೋನ್ಗಳ ಬೆಲೆಯಲ್ಲಿ ಹೆಚ್ಚಳವನ್ನು ಘೋಷಿಸಿದ್ದಾರೆ ಅವುಗಳಲ್ಲಿ ಈ ವಿವೊ ಕಂಪನಿ ಸಹ ಒಳಗೊಂಡಿದೆ. ಬೆಲೆಗಳ ಹೆಚ್ಚಳದ ಮಧ್ಯೆ ವಿವೊ ತನ್ನ ಬಳಕೆದಾರರಿಗೆ ಉತ್ತಮವಾದ ಪರಿಹಾರ ತಂದಿದೆ. ಕಂಪನಿಯು ಅಧಿಕೃತವಾಗಿ ತನ್ನ ಜನಪ್ರಿಯ ಸ್ಮಾರ್ಟ್‌ಫೋನ್ Vivo S1 ಸ್ಮಾರ್ಟ್ಫೋನ್ ಬೆಲೆಯನ್ನು ಭಾರಿ ಕಡಿಮೆ ಮಾಡಿದೆ. ಹೊಸ ಬೆಲೆಯೊಂದಿಗೆ ಈ ಸ್ಮಾರ್ಟ್‌ಫೋನ್ ಅನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ.
ಈ Vivo S1 ಅನ್ನು ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಮೂರು ಶೇಖರಣಾ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಯಿತು. ಕಂಪನಿಯು ತನ್ನ ಬೆಲೆಯಲ್ಲಿ 1,000 ರೂಗಳ ಕುಸಿತಗೊಳಿಸಿ ಹೊಸ ಬೆಲೆಯನ್ನು ನೋಡಿದರೆ ಈಗ ಈ ಫೋನ್‌ನ ಆರಂಭಿಕ ರೂಪಾಂತರವು 16,990 ರೂಗಳಿಗೆ ಲಭ್ಯವಾಗಲಿದ್ದು 17,990 ರೂಗಳ ಬೆಲೆಯೊಂದಿಗೆ ಇದನ್ನು ಬಿಡುಗಡೆ ಮಾಡಲಾಗಿದೆ. ಇದು 4GB + 128GB ಸ್ಟೋರೇಜ್ ಹೊಂದಿದೆ. ಅದೇ ಸಮಯದಲ್ಲಿ 6GB + 64GB ಸ್ಟೋರೇಜ್ ಮಾದರಿ 17,990 ರೂಗಳಿಗೆ ಲಭ್ಯವಿದೆ. ನಂತರ 6GB + 128GB ಸ್ಟೋರೇಜ್ ರೂಪಾಂತರಗಳನ್ನು 19,990 ರೂಗಳಿಗೆ ಖರೀದಿಸಬಹುದು.
Vivo S1 ಸ್ಮಾರ್ಟ್ಫೋನ್ 6.38 ಇಂಚಿನ ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಹೆಲಿಯೊ P65 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಮತ್ತು ಇದು ಪವರ್ ಬ್ಯಾಕಪ್‌ಗಾಗಿ 4500mAh ಬ್ಯಾಟರಿಯನ್ನು ಹೊಂದಿದೆ. ಇದು 18W ಡ್ಯುಯಲ್ ಎಂಜಿನ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನ್ 16MP ಪ್ರೈಮರಿ ಸೆನ್ಸಾರ್ 8MP ವೈಡ್ ಆಂಗಲ್ ಲೆನ್ಸ್ ಮತ್ತು 2MP ಡೆಪ್ತ್ ಸೆನ್ಸಾರ್ ಹೊಂದಿದೆ. ವೀಡಿಯೊ ಕರೆ ಮತ್ತು ಸೆಲ್ಫಿಗಾಗಿ 32MP ಮುಂಭಾಗದ ಕ್ಯಾಮೆರಾವನ್ನು ಒದಗಿಸಲಾಗಿದೆ.
ಈ Vivo S1 ಬಳಕೆದಾರರ ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಅನ್ನು ಬಳಸುತ್ತದೆ. ಇದು ಫೋನ್‌ನ ಪರದೆಯನ್ನು 0.48 ಸೆಕೆಂಡುಗಳಲ್ಲಿ ಅನ್ಲಾಕ್ ಮಾಡಬಹುದು. ಕಂಪನಿಯು ಫ್ಲ್ಯಾಷ್ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಎಂದು ಹೆಸರಿಸಿದೆ. ಸಂಪರ್ಕಕ್ಕಾಗಿ ಇದು 4G LTE ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್ 5.0, ಮೈಕ್ರೋ USB ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಅಂದಹಾಗೆ ಈ ಫೋನ್‌ಗಳು ಪ್ರಸ್ತುತ ಪ್ರೀ- ಬುಕಿಂಗ್‌ಗಾಗಿ ಲಭ್ಯವಿವೆ. ಮತ್ತು ಲಾಕ್‌ಡೌನ್ ಇದ್ದರು ಕಡಿಮೆ ಬೆಲೆಯಲ್ಲಿ ಖರೀದಿಸಬವುದು ಆದರೆ ನೀವಿರುವ ಪಿನ್ ಕೋಡ್ ರೆಡ್ ಝೋನ್ ಒಳಗೆ ಆಗಿರಬಾರದು.