ಭಾರತದಲ್ಲಿ ವಿವೋ ಕಂಪನಿ ತನ್ನ ಲೇಟೆಸ್ಟ್ Vivo Y200 Pro 5G ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. Vivo ತನ್ನ Y ಸರಣಿಯ ಸ್ಮಾರ್ಟ್‌ಫೋನ್‌ಗಳ ಪಟ್ಟಿಗೆ ಮ್ಮತೊಂದು ಹೊಸ ಮತ್ತು ಹೆಚ್ಚು ನಿರೀಕ್ಷಿತ 5G ಸ್ಮಾರ್ಟ್ಫೋನ್ ಅನ್ನು ಸೇರಿಸಿ ಭಾರತದಲ್ಲಿ ಕಂಪನಿಯ ಅತ್ಯಂತ ದುಬಾರಿ ಸರಣಿಯನ್ನು ಮತ್ತಷ್ಟು ವಿಸ್ತರಿಸಿದೆ. Y200 Pro 5G ಸ್ಮಾರ್ಟ್ಫೋನ್ ನಿಮಗೆ ಕ್ವಾಲ್ಕಾಮ್ ಚಿಪ್‌ಸೆಟ್‌ನಿಂದ ನಡೆಸಲ್ಪಡುವ ಸ್ಮಾರ್ಟ್‌ಫೋನ್ ಕರ್ವ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ Vivo Y200 Pro ಸ್ಮಾರ್ಟ್ಫೋನ್ 64MP ಪ್ರೈಮರಿ ಕ್ಯಾಮೆರಾ ಸೆನ್ಸರ್ನೊಂದಿಗೆ 8GB RAM ಮತ್ತು 5000mAh ಬ್ಯಾಟರಿಯನ್ನು ಬೆಂಬಲಿಸುತ್ತದೆ.
Vivo Y200 Pro 5G ಸ್ಮಾರ್ಟ್ಫೋನ್ ಬೆಲೆ ಮತ್ತು ಆಫರ್ ಬಗ್ಗೆ ಮಾತನಾಡುವುದಾದರೆ ಇದರ ಬೆಲೆಯನ್ನು ಸುಮಾರು 24,999 ರೂಗಳಿಗೆ ಬಿಡುಗಡೆಗೊಳಿಸಿದ್ದು ಇದನ್ನು ನೀವು ಸಿಲ್ಕ್ ಗ್ರೀನ್ ಮತ್ತು ಸಿಲ್ಕ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಸ್ಮಾರ್ಟ್‌ಫೋನ್ ಖರೀದಿಸಬಹುದು. ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್ ಮತ್ತು ವಿವೋ ಇಂಡಿಯಾ ಇ-ಸ್ಟೋರ್ನಲ್ಲಿ ಆನೈನಲ್ಲಿ ಖರೀದಿಸಬಹುದು. ಗ್ರಾಹಕರು ದೇಶದ ಅಧಿಕೃತ ಚಿಲ್ಲರೆ ಅಂಗಡಿಗಳಿಂದ ಸ್ಮಾರ್ಟ್‌ಫೋನ್ ಅನ್ನು ಆಫ್‌ಲೈನ್‌ನಲ್ಲಿ ಖರೀದಿಸಬಹುದು.
ವಿವೋ ಕಂಪನಿ ಇದರ ಬಿಡುಗಡೆಯಾ ಕೊಡುಗೆಗಳ ಭಾಗವಾಗಿ ಕಂಪನಿಯು SBI ಕಾರ್ಡ್, IDFC ಫಸ್ಟ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕ್ ಮತ್ತು ಹೆಚ್ಚಿನವುಗಳಲ್ಲಿ 2,500 ರೂಪಾಯಿಗಳ ತ್ವರಿತ ಕ್ಯಾಶ್‌ಬ್ಯಾಕ್ ಅನ್ನು ನೀಡುತ್ತಿದೆ. ಗ್ರಾಹಕರು V-ಶೀಲ್ಡ್ ರಕ್ಷಣೆಯಂತಹ ಹೆಚ್ಚುವರಿ ಪ್ರಯೋಜನಗಳ ಜೊತೆಗೆ ಎಲ್ಲಾ-ಹೊಸ Y200 Pro 5G ಅನ್ನು ದಿನಕ್ಕೆ ರೂ 45 ಕ್ಕೆ ಪಾವತಿಸುವ ಆಯ್ಕೆಯನ್ನು ಸಹ ಪಡೆಯಬಹುದು.
Also Read: ಅಪ್ಪಿತಪ್ಪಿಯೂ ನಿಮ್ಮ ಫೋನ್ ಅಥವಾ ಎಟಿಎಂ ಕಾರ್ಡ್‌ಗಳಿಗೆ ಈ ಸರಳ PIN ಮತ್ತು Password ಇಡಲೇಬೇಡಿ!
ಈ ಲೇಟೆಸ್ಟ್ ಸ್ಮಾರ್ಟ್ಫೋನ್ 6.78 ಇಂಚಿನ ಪೂರ್ಣ HD+ ಕರ್ವ್ AMOLED ಡಿಸ್ಕ್ ಜೊತೆಗೆ 1080×2400 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದರ ಡಿಸ್ಪ್ಲೇ 1300 ನಿಟ್‌ಗಳ ಗರಿಷ್ಠ ಹೊಳಪಿನ ಮಟ್ಟವನ್ನು ಮತ್ತು 120Hz ವರೆಗೆ ರಿಫ್ರೆಶ್ ದರವನ್ನು ನೀಡುತ್ತದೆ. Vivo Y200 Pro ಸ್ಮಾರ್ಟ್ಫೋನ್ ಡುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ 64MP ಮುಖ್ಯ ಕ್ಯಾಮೆರಾವನ್ನು f/1.79 ಅಪರ್ಚರ್‌ನೊಂದಿಗೆ 2MP ಪೋರ್ಟ್ರೇಟ್ ಕ್ಯಾಮೆರಾವನ್ನು f/2.4 ಅಪರ್ಚರ್‌ನೊಂದಿಗೆ ಹೊಂದಿದೆ. ಅಲ್ಲದೆ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16MP ಸೆನ್ಸರ್ ಅನ್ನು ಒಳಗೊಂಡಿದೆ.
ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ 8GB RAM ನೊಂದಿಗೆ ಜೋಡಿಸಲಾದ ಆಕ್ಷಾ-ಕೋರ್ ಕ್ವಾಲ್ಕಾಮ್ ಸ್ಟಾಪ್‌ಡ್ರಾಗನ್ 695 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಸ್ಮಾರ್ಟ್‌ಫೋನ್ 128GB ಇಂಟರ್ನಲ್ ಸ್ಟೋರೇಜ್ ನೀಡುತ್ತದೆ. ಬಳಕೆದಾರರು ಇದನ್ನು ಮೈಕ್ರೋ SD ಕಾರ್ಡ್ ಸೇರಿಸುವ ಮೂಲಕ 1TB ವರೆಗೆ ವಿಸ್ತರಿಸಬಹುದು. Vivo Y200 Pro 5G ಕಂಪನಿಯು FunTouch OS 14 ತನ್ನದೆಯಾದ ಸ್ವಂತ ಲೇಯರ್‌ನೊಂದಿಗೆ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಅನ್ನು ನಡೆಸುತ್ತದೆ. ಸ್ಮಾರ್ಟ್‌ಫೋನ್ ಇನ್-ಡಿಸ್ಟ್ರೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಕೊನೆಯದಾಗಿ ಸ್ಮಾರ್ಟ್ಫೋನ್ 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ.