ಭಾರತದಲ್ಲಿ ವಿವೋ ತನ್ನ ಲೇಟೆಸ್ಟ್ ಸ್ಮಾರ್ಟ್‌ಫೋನ್ Vivo iQOO Z9x 5G ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಭಾರತದಲ್ಲಿ Vivo iQOO Z9x 5G ಸ್ಮಾರ್ಟ್ಫೋನ್ ಮೇ 16ನೇ ಮೇ ರಂದು Amazon ಮೂಲಕ ಮಾರಾಟವಾಗಲು ಸಜ್ಜಾಗಿದೆ. iQOO Z9x 5G ಸ್ಮಾರ್ಟ್ಫೋನ್ Qualcomm Snapdragon 6 Gen 1 ಚಿಪ್‌ಸೆಟ್‌ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈವರೆಗೆ ನಮಗೆ ಲಭ್ಯವಾಗಿರುವ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ನಿಮಗೆ ನೀಡಲಾಗಿದೆ.
ಈ ಸ್ಮಾರ್ಟ್‌ಫೋನ್ ಈ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ಮೂಲಕ ಫೋನ್ ಮಾರಾಟವಾಗಲಿದೆ. ಅದರೊಂದಿಗೆ iQOO Z9x 5G ಸ್ಮಾರ್ಟ್‌ಫೋನ್ ಅನ್ನು ಪ್ರಾರಂಭಿಸಲು ಮೈಕ್ರೋ ವೆಬ್‌ಸೈಟ್ ಅಮೆಜಾನ್‌ನಲ್ಲಿ ಲೈವ್ ಆಗಿದೆ. iQOO Z9x 5G ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾದೊಂದಿಗೆ 44W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6000mAh ಬ್ಯಾಟರಿಯನ್ನು ಹೊಂದಿದೆ.
ಈ ಸ್ಮಾರ್ಟ್‌ಫೋನ್ ಭಾರತದಲ್ಲಿ 16ನೇ ಮೇ 2024 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಮೇಲೆ ತಿಳಿಸಿರುವಂತೆ ಭಾರತದಲ್ಲಿ Vivo iQOO Z9x 5G ಸ್ಮಾರ್ಟ್ಫೋನ್ ಮೇ 16ನೇ ಮೇ ರಂದು Amazon ಮೂಲಕ ಮಾರಾಟವಾಗಲು ಸಜ್ಜಾಗಿದೆ ಎಂದು iQOO ಕಂಪನಿಯ CEO ಆಗಿರುವ @nipunmarya ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವಿಟ್ ಮಾಡಲಾಗಿದೆ. ಅಮೆಜಾನ್‌ನಲ್ಲಿ ಮೈಕ್ರೋ ವೆಬ್‌ಸೈಟ್ ಪೇಜ್ ಸಹ ಈಗಾಗಲೇ ಬಿಡುಗಡೆಗೊಳಿಸಿದೆ.
ಈ ಮುಂಬರಲಿರುವ ಈ iQOO Z9x 5G ಸ್ಮಾರ್ಟ್‌ಫೋನ್‌ನ ಚೀನೀ ರೂಪಾಂತರವು 6.72 ಇಂಚಿನ LCD ಡಿಸ್ಪ್ಲೇಯನ್ನು 120Hz ನ ರಿಫ್ರೆಶ್ ದರದೊಂದಿಗೆ ಹೊಂದಿದೆ. ವೇಗ ಮತ್ತು ಬಹುಕಾರ್ಯಕಕ್ಕಾಗಿ ಈ ಫೋನ್ Qualcomm Snapdragon 6 Gen 1 ಪ್ರೊಸೆಸರ್‌ನಿಂದ ಚಾಲಿತವಾಗಿದೆ.
ಸ್ಮಾರ್ಟ್‌ಫೋನ್‌ನ ಫೋಟೋಗ್ರಫಿಗಾಗಿ ಫೋನ್ 50MP ಪ್ರೈಮರಿ ಮುಖ್ಯ ಕ್ಯಾಮೆರಾ ಮತ್ತು 2MP ಬ್ಲರ್ ಲೆನ್ಸ್ ಅನ್ನು ಹೊಂದಿದೆ. ಆದ್ದರಿಂದ ಫೋನ್ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಹೊಂದಿದೆ. ಫೋನ್ 6000mAh ಬ್ಯಾಟರಿಯಿಂದ ಚಾಲಿತವಾಗಲಿದ್ದು ಇದು 44W FlashCharge ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವುದನ್ನು ನಿರೀಕ್ಷಿಸಬಹುದು.
Also Read: Jio Space Fiber: ಜಿಯೋ ಶೀಘ್ರದಲ್ಲೇ DTH ಮಾದರಿಯಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಸೇವೆ ಆರಂಭಿಸುವ ನಿರೀಕ್ಷೆ!