Vivo iQOO ಗೇಮಿಂಗ್ ಸ್ಮಾರ್ಟ್ಫೋನ್ ಸ್ನಾಪ್ಡ್ರಾಗನ್ 855 ಪ್ರೊಸೆಸರೊಂದಿಗೆ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಹೊಂದಿದೆ.

Vivo iQOO ಗೇಮಿಂಗ್ ಸ್ಮಾರ್ಟ್ಫೋನ್ ಸ್ನಾಪ್ಡ್ರಾಗನ್ 855 ಪ್ರೊಸೆಸರೊಂದಿಗೆ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಹೊಂದಿದೆ.
HIGHLIGHTS

Vivo iQOO ಫೋನ್ 6.41 ಇಂಚಿನ ಪೂರ್ಣ ಎಚ್ಡಿ + ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ.

ಕಳೆದ ತಿಂಗಳು ವಿವೊ iQOO ಹೆಸರಿನ ಹೊಸ ಸಬ್ ಬ್ರಾಂಡ್ ಅನ್ನು ಅನಾವರಣಗೊಳಿಸಿತು. ಆದರೆ ಆ ಸಮಯದಲ್ಲಿ ಈ ಚೀನೀ ಕಂಪನಿಯಲ್ಲಿ  ಏನಾಗುತ್ತಿದೆ ಎಂಬುದು ಯಾರಿಗೂ ತಿಳಿದಿಲ್ಲ. ವಿವೊ ಅಂತಿಮವಾಗಿ ಈಗ ಮೊದಲ iQOO ಸ್ಮಾರ್ಟ್ಫೋನ್ ಅನ್ನು ಗೇಮರುಗಳಿಗಾಗಿ ಉನ್ನತಮಟ್ಟದ ಸ್ಮಾರ್ಟ್ಫೋನ್ ಎಂದು ಅನಾವರಣಗೊಳಿಸಿದೆ. ಈ ಫೋನಿನ ಫೀಚರ್ ತಿಳಿಯುವ ಮುನ್ನ ಇದರ ಅಲ್ಲಿನ ಬೆಲೆ ನೋಡೋಣ 

ಈ ಫೋನ್ ಚೀನಾದಲ್ಲಿ 6GB/ 128GB ಬೇಸ್ಗಾಗಿ 2998 ಯುವಾನ್ (ಸುಮಾರು 32,000 ರೂ) ನ ಆರಂಭಿಕ ಬೆಲೆಗೆ ಲಭ್ಯವಿರುತ್ತದೆ. 8GB / 128GB ಮತ್ತು 8GB / 256GB ಆಯ್ಕೆಗಳನ್ನು ಕ್ರಮವಾಗಿ 3298 ಯುವಾನ್ (ಸುಮಾರು ರೂ 35,000) ಮತ್ತು 3598 ಯುವಾನ್ (ಸುಮಾರು ರೂ 38,000) ಅನ್ನು ಖರೀದಿಸಬಹುದು. ವೈವೋ 4298 ಯುವಾನ್ (ಸುಮಾರು 45,500) ಸುಮಾರು 12GB ಯ RAM ಮತ್ತು 256GB ಸ್ಟೋರೇಜ್ ಆಗಿದ್ದು ಇದು ಉನ್ನತ ಆವೃತ್ತಿಯನ್ನು ನೀಡುತ್ತದೆ. 

ಈ ಎಲ್ಲಾ ಮಾದರಿಗಳು  Lava Orange ಮತ್ತು Electro-Optic Blue ಬಣ್ಣಗಳಲ್ಲಿ ಲಭ್ಯವಾಗಲಿವೆ. ಇದರ ಫೀಚರ್ ಭಾಗಕ್ಕೆ ಬಂದಾಗ Vivo iQOO ನಿಮಗೆ 1080 × 2340 ಪಿಕ್ಸೆಲ್ಗಳ ರೆಸಲ್ಯೂಶನ್ ಮತ್ತು 19.5: 9 ರ ಆಕಾರ ಅನುಪಾತದೊಂದಿಗೆ ಬರುತ್ತದೆ. ಅಲ್ಲದೆ ಈ ಫೋನ್ 6.41 ಇಂಚಿನ ಪೂರ್ಣ ಎಚ್ಡಿ + ಸೂಪರ್ AMOLED ಡಿಸ್ಪ್ಲೇಯನ್ನು ಸಜ್ಜುಗೊಳಿಸುತ್ತದೆ. ಇದರ ಡಿಸ್ಪ್ಲೇಯಲ್ಲಿ ವಾಟರ್ ಡ್ರಾಪ್ ಡ್ರಾಪ್ ಎನ್ನಿಯನ್ನು ಸಂಯೋಜಿಸುತ್ತದೆ. ಇದು ಸ್ಕ್ರೀನ್ ಟು ಬಾಡಿ ಅನುಪಾತವನ್ನು 91.7% ಪ್ರತಿಶತಕ್ಕೆ ನೀಡುತ್ತದೆ. 
 
ಈ ಫೋನ್ ಕ್ವಾಲ್ಕಾಮ್ನ ಇತ್ತೀಚಿನ ಸ್ನಾಪ್ಡ್ರಾಗನ್ 855 ಇದು ಒಂದು ಆಕ್ಟಾ-ಕೋರ್ 7nm ಚಿಪ್ಸೆಟ್ ಮತ್ತು ಅಡ್ರಿನೊ 640 ಜಿಪಿಯು ಜೊತೆಗೂಡಿರುತ್ತದೆ. ಇದು ಆಂಡ್ರೋಯ್ಡ್ 9 ಪೈನಲ್ಲಿ Funtouch OS 9 ರೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು 44 ವ್ಯಾಟ್ ಅತೀ ಫಾಸ್ಟ್ ಚಾರ್ಜಿಂಗ್ಗಾಗಿ 4000mAh ಬ್ಯಾಟರಿ ಹೊಂದಿದೆ. ಟ್ರಿಪಲ್-ಕ್ಯಾಮರಾ ಸೆಟಪ್ ಅನ್ನು 12MP+ 13MP ವಿಶಾಲ-ಕೋನ ಸೋನಿ IMX263 ಲೆನ್ಸ್ ಮತ್ತು 2MP ಡೆಪ್ ಸೆನ್ಸರ್ ಅನ್ನು ಒಳಗೊಂಡಿರುತ್ತದೆ. ಮುಂಭಾಗದಲ್ಲಿ f / 2.0 ಅಪೆರ್ಚರೊಂದಿಗೆ 12MP ಸೆಲ್ಫಿ ಕ್ಯಾಮರಾ ಇದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo