ಮುಂಬರಲಿರುವ Vivo T3 Pro 5G ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!

ಮುಂಬರಲಿರುವ Vivo T3 Pro 5G ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!
HIGHLIGHTS

ವಿವೋ (Vivo) ತನ್ನ ಮುಂಬರಲಿರುವ ಸ್ಮಾರ್ಟ್ಫೋನ್ Vivo T3 Pro ಬಗ್ಗೆ ಒಂದಿಷ್ಟು ಮಾಹಿತಿಯನ್ನು ಬಹಿರಂಗಪಡಿಸಿದೆ.

Vivo T3 Pro ಸ್ಮಾರ್ಟ್ಫೋನ್ 27ನೇ ಆಗಸ್ಟ್ 2024 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆಗೊಳಿಸುವುದಾಗಿ ದೃಢಪಡಿಸಿದೆ.

Vivo T3 Pro ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ (Flipkart) ಮೂಲಕ ಮಾರಾಟಕ್ಕೆ ತರಲಿದೆ.

ವಿವೋ (Vivo) ತನ್ನ ಮುಂಬರಲಿರುವ ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಅತಿ ಶೀಘ್ರದಲ್ಲೇ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದನ್ನು ಕಂಪನಿ Vivo T3 Pro ಎಂದು ಹೆಸರರಿಸಿದ್ದು ಇದರ ಬಿಡುಗಡೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಬಹಿರಂಗಪಡಿಸಿದೆ. ಈ Vivo T3 Pro ಸ್ಮಾರ್ಟ್ಫೋನ್ 27ನೇ ಆಗಸ್ಟ್ 2024 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆಗೊಳಿಸುವುದಾಗಿ ದೃಢಪಡಿಸಿದೆ. Vivo T3 Pro ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ (Flipkart) ಮೂಲಕ ಮಾರಾಟಕ್ಕೆ ತರಲಿದ್ದು ಇದರ ಕೆಲವೊಂದು ಫೀಚರ್ ಮತ್ತು ವಿಶೇಷಣಗಳನ್ನು ಬಿಡುಗಡೆಗೂ ಮುಂಚಿತವಾಗಿ ವಿವೋ (Vivo) ಕಂಪನಿ ಅನಾವರಣಗೊಳಿಸಿದೆ.

Vivo T3 Pro ಸ್ಮಾರ್ಟ್ಫೋನ್ ಬಿಲ್ಡ್ ಮತ್ತು ಡಿಸೈನಿಂಗ್ ಹೇಗಿದೆ?

ಈ ಮುಂಬರಲಿರುವ ಸ್ಮಾರ್ಟ್ಫೋನ್ ಹೇಗೆ ಕಾಣುತ್ತದೆಂದು ನೀವು ಯೋಚಿಸಿ ಈಗಾಗಲೇ ಬಿಡುಗಡೆಯಾಗಿರುವ Vivo T2 Pro ಸ್ಮಾರ್ಟ್ಫೋನ್ ಮದರಾಯಿಯಲ್ಲಿ ಬರಬಹುದೆಂದು ಅಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಲೆಕ್ಕಾಚಾರ ಯಾಕೆಂದರೆ ಇದರ ಅಧಿಕೃತ ಇಮ್ಯಾಜೆಸ್ ಈಗಾಗಲೇ ಬಿಡುಗಡೆಯಾಗಿದ್ದು ಈ ಸ್ಮಾರ್ಟ್ಫೋನ್ iQOO 12 ಮಾದರಿಗೆ ಹೆಚ್ಚು ಹೋಲುವ ಡಿಸೈನಿಂಗ್ ಅನ್ನು ಹೊಂದಿರುದನ್ನು ಗಮನಿಸಬಹುದು. ಅದರಲ್ಲೂ ವಿಶೇಷವಾಗಿ ಹಿಂಭಾಗದಲ್ಲಿ ದುಂಡಾದ ಚೌಕಾಕಾರದ ಕ್ಯಾಮೆರಾ ಮಾಡ್ಯೂಲ್ ವಿಷಯದಲ್ಲಿ ಹೆಚ್ಚು ಹೋಲುತ್ತದೆ.

Upcoming Vivo T3 Pro 5G launch date confirmed in India
Upcoming Vivo T3 Pro 5G launch date confirmed in India

Vivo T3 Pro ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳೇನು?

ಈ ಮುಂಬರಲಿರುವ Vivo T3 Pro ಬಗ್ಗೆ ಅಧಿಕೃತವಾಗಿ ಬಿಡುಗಡೆಯಾದ ಇಮೇಜ್ ಆಧಾರದ ಮೇರೆಗೆ ಈ ಫೋನ್ 3D ಕರ್ವ್ಡ್ AMOLED ಡಿಸ್ಪ್ಲೇಯೊಂದಿಗೆ 6.78 ಇಂಚಿನ 1.5K ಮತ್ತು 120Hz ರಿಫ್ರೆಶ್ ರೇಟ್‌ನೊಂದಿಗೆ ನಿರೀಕ್ಷಿಸಬಹುದು. Vivo T3 Pro ಬಾಗಿದ ಡಿಸ್ಪ್ಲೇಯೊಂದಿಗೆ ಬರುವ ಅತಿ ತೆಳ್ಳಗಿನ ಅಂದ್ರೆ ಕೇವಲ 7.49mm ಗಾತ್ರದಲ್ಲಿ ಬಿಡುಗಡೆಯಾಗುವುದಾಗಿ ನಿರೀಕ್ಷಿಸಲಾಗಿದೆ. Vivo T3 Pro ಸ್ಮಾರ್ಟ್ಫೋನ್ ಡುಯಲ್ ಕ್ಯಾಮೆರಾ ಸೆಟಪ್ನೊಂದಿಗೆ ಬರಲಿದ್ದು 50MP IMX 882 ಸೆನ್ಸರ್ ಜೊತೆಗೆ OIS ಬೆಂಬಲಿರುವ ನಿರೀಕ್ಷೆಗಳಿವೆ. ಕಾರ್ಯಕ್ಷಮತೆಯ ವಿಷಯದಲ್ಲಿ ಟೀಸರ್‌ನಿಂದ ಬಹಿರಂಗಪಡಿಸಿದಂತೆ ಫೋನ್ ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ನಿಂದ ಚಾಲಿತವಾಗುತ್ತದೆ. ಪ್ರಸ್ತುತ ವದಂತಿಯ ಪ್ರಕಾರ ಈ ಸ್ಮಾರ್ಟ್ಫೋನ್ Snapdragon 7 Gen3 ಪ್ರೊಸೆಸರ್ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

Upcoming Vivo T3 Pro 5G launch date confirmed in India
Upcoming Vivo T3 Pro 5G launch date confirmed in India

ಈ Vivo T3 Pro ಸ್ಮಾರ್ಟ್ಫೋನ್ ಸುಮಾರು 5500mAh ಬ್ಯಾಟರಿಯೊಂದಿಗೆ ಸುಮಾರು 45W ಫಾಸ್ಟ್ ಚಾರ್ಜರ್ ಜೋಡಿಸಲ್ಪಟ್ಟಿರುವುದಾಗಿ ವದಂತಿಗಳಿವೆ. ಗಮನಾರ್ಹವಾಗಿ ಫೋನ್ ಹಿಂದಿನ ಪ್ಯಾನೆಲ್‌ಗಾಗಿ ವೆಜಿಟೇರಿಯನ್ ಆಯ್ಕೆಯನ್ನು ಹೊಂದಿರುತ್ತದೆ ಎಂದು ಅಧಿಕೃತ ಚಿತ್ರಗಳಿಂದ ಕಾಣಿಸಿಕೊಳ್ಳುತ್ತದೆ. Vivo T3 Pro ಫೋನ್ ಲೇಟೆಸ್ಟ್ ಆಂಡ್ರಾಯ್ಡ್ 14 ಆಧಾರಿತ ಬಿಡುಗಡೆಯಾಗಲಿದ್ದು LPDDR4x RAM ಜೊತೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಗಳಿವೆ. ಪ್ರಸ್ತುತ Vivo T3 Pro ಸ್ಮಾರ್ಟ್ಫೋನ್ ಬಗ್ಗೆ ಕಂಪನಿಯು ಅಧಿಕೃತವಾಗಿ ಏನನ್ನೂ ಬಹಿರಂಗಪಡಿಸದಿದ್ದರೂ ಏನನ್ನು ನಿರೀಕ್ಷಿಸಬಹುದು ಎಂಬ ಕಲ್ಪನೆಯನ್ನು ಪಡೆಯಲು ನಾವು ಹಿಂದಿನ ವದಂತಿಗಳನ್ನು ಉಲ್ಲೇಖಿಸಬಹುದು.

Also Read: Airtel ಪ್ರತಿದಿನ 3GB ಡೇಟಾ ಮತ್ತು ಕರೆಯೊಂದಿಗೆ ಉಚಿತ OTT ನೀಡುವ ಈ ಯೋಜನೆಯ ಬೆಲೆ ಎಷ್ಟು?

Vivo T3 Pro ನಿರೀಕ್ಷಿತ ಬೆಲೆ ಮತ್ತು ಲಭ್ಯತೆಯ ಮಾಹಿತಿ!

ಈ ಮುಂಬರಲಿರುವ ಸ್ಮಾರ್ಟ್ಫೋನ್ ಪ್ರಸ್ತುತ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದ್ದು ಮೊದಲನೆಯದು 6GB RAM ಮತ್ತು 128GB ಸ್ಟೋರೇಜ್ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಮಾದರಿಯಲ್ಲಿ ಸುಮಾರು 20,000 ರೂಗಳಿಂದ 25,000 ರೂಗಳೊಳಗೆ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಈಗಾಗಲೇ ಮೇಲೆ ತಿಳಿಸಿರುವಂತೆ ಈ ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಲಿದ್ದು ಈಗಾಗಲೇ ಇದರ ಮೈಕ್ರೋ ಸೈಟ್ ಪೇಜ್ ಬಿಡುಗಡೆಗೊಳಿಸಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo