Upcoming Phones in 2025: ಭಾರತದಲ್ಲಿ ಮುಂಬರಲಿರುವ Samsung, OPPO, Nothing, OnePlus ಮತ್ತು iQOO ಫೋನ್‌ಗಳು!

Updated on 26-Dec-2024
HIGHLIGHTS

Upcoming Phones in 2025 ಮುಂದಿನ ಹೊಸ 2025 ವರ್ಷದಲ್ಲಿ ಬಿಡುಗಡೆಯಾಗಲು ಸಜ್ಜಗಿರುವ ಸ್ಮಾರ್ಟ್‌ಫೋನ್‌ಗಳು.

ವಿಶೇಷವೆಂದರೆ ಕೆಲವು ಬ್ರ್ಯಾಂಡ್‌ಗಳು ತಮ್ಮ ಮುಂಬರಲಿರುವ ಫೋನ್ಗಳ ಮಾಹಿತಿಯನ್ನು ಸಹ ಈಗಾಗಲೇ ಪೋಸ್ಟ್ ಮಾಡಿ ದೃಢಪಡಿಸಿದ್ದಾರೆ.

ಮುಂರಲಿರುವ Nothing phone 3, OPPO Reno 13 series, ⁠Samsung galaxy S25 Series, ⁠iQOO Neo 10 Pro, ಮತ್ತು ⁠OnePlus 13 Series ಫೋನ್‌ಗಳು.

Upcoming Phones in 2025: ಪ್ರಸ್ತುತ ಈ ವರ್ಷ ಕಳೆದು ಹೊಸ 2025 ವರ್ಷದ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಇದನ್ನು ಗಮನಟ್ಟುಕೊಂಡು ಈಗಾಗಲೇ ಮುಂದಿನ ಹೊಸ 2025 ವರ್ಷದಲ್ಲಿ ಬಿಡುಗಡೆಗೊಳಿಸಲು ಸ್ಮಾರ್ಟ್ಫೋನ್ ತಯಾರಕ ಕಂಪನಿಗಳಾಗಿರುವ Samsung, OPPO, Nothing, OnePlus ಮತ್ತು iQOO ತಯಾರಕರು ಸಿದ್ಧರಾಗಿದ್ದಾರೆ. ಇದರಲ್ಲಿ ವಿಶೇಷವೆಂದರೆ ಕೆಲವು ಬ್ರ್ಯಾಂಡ್‌ಗಳು ತಮ್ಮ ಮುಂಬರಲಿರುವ ಫೋನ್ಗಳ ಡೇಟ್ ಮತ್ತು ಮೋಡಲ್ ಮಾಹಿತಿಯನ್ನು ಈಗಾಗಲೇ ಪೋಸ್ಟ್ ಮಾಡಿ ದೃಢಪಡಿಸಿದ್ದಾರೆ.

Upcoming Phones in 2025

ಈಗಾಗಲೇ ನಿಮಗೆ ತಿಳಿದಿರುವಂತೆ ಟೆಕ್ನಾಲಜಿ ಹೆಚ್ಚು ವೇಗವಾಗಿ ಬೆಳೆಯುತ್ತಿದ್ದು ಕೈಗೆಟಕುವ ಬೆಲೆಗೆ 5G ಸ್ಮಾರ್ಟ್ಫೋನ್ ಮಾರಾಟ ಮಾಡುತ್ತಿರುವ ಕಂಪನಿಗಳು ಈ ಮುಂಬರಲಿರುವ ಫೋನ್ಗಳಲ್ಲಿ ಸಾಮಾನ್ಯ ಫೀಚರ್ಗಳಿಗಿಂತ ಹೊಸ ಮತ್ತು ಹೆಚ್ಚಿನ ಫೀಚರ್ ನೀಡಲು ಕೆಲಸ ಮಾಡುತ್ತಿವೆ. ಇದರಲ್ಲಿ Nothing phone 3, OPPO Reno 13 series, ⁠Samsung galaxy S25 Series, ⁠iQOO Neo 10 Pro, ಮತ್ತು ⁠OnePlus 13 Series ಸ್ಮಾರ್ಟ್ಫೋನ್ಗಳು ಈ 2025 ವರ್ಷದಲ್ಲಿ ಬಿಡುಗಡೆಗೆ ದೃಢಪಟ್ಟಿವೆ.

⁠OnePlus 13 Series

ಈ ಸ್ಮಾರ್ಟ್ಫೋನ್ ಈಗಾಗಲೇ ಬಿಡುಗಡೆಯಾಗಿರುವ OnePlus 12 ಫೋನ್ಗಳ ಕ್ಯಾಮೆರಾವನ್ನು ತನ್ನೊಂದಿಗೆ ಹೊಂದಿಕೊಂಡು 7ನೇ ಜನವರಿ 2025 ರಂದು ಬಿಡುಗಡೆಯಾಗಲಿದ್ದು ಇವುಗಳ ಸೋರಿಕೆಯ ಫೀಚರ್ ಆಧಾರದ ಮೇರೆಗೆ ಇವುಗಳ ಬೆಲೆಯಲ್ಲಿ ಮಾತ್ರ ಕೊಂಚ ಹೆಚ್ಚುವರಿಯನ್ನು ಕಾಣಲು ಸಾಧ್ಯವಾಗುತ್ತದೆ. ಇದರಲ್ಲಿ ಒಟ್ಟು OnePlus 13 ಮತ್ತು OnePlus 13R ನಿರೀಕ್ಷಿಸಲಾಗಿದೆ.

Upcoming smartphones in 2025

Nothing Phone 3

ಈ ಜನಪ್ರಿಯ ಸ್ಮಾರ್ಟ್ಫೋನ್ ಮುಂದಿನ 2025 ವರ್ಷದಲ್ಲಿ Snapdragon 8 Gen 3 or Elite ಚಿಪ್ ಜೊತೆಗೆ ಬಿಡುಗಡೆಯನ್ನು ನಿರೀಕ್ಷಿಸಲಾಗಿದ್ದು 1 ವರ್ಷವನ್ನು ಕಡಿತಗೊಳಿಸಿರುವ ಈ ಬ್ರಾಂಡ್ ಒಟ್ಟಿಗೆ 3 ಫೋನ್ಗಳನ್ನು ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ಅವೆಂದರೆ Nothing Phone 3, Nothing Phone 3a ಮತ್ತು Nothing Phone 3a Pro / Plus ಆದರೆ ಇದರ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಈ ಸ್ಮಾರ್ಟ್ಫೋನ್ಗಳು ವರ್ಷದ 2ನೇ ವಾರದ ನಂತರ ಬಿಡುಗಡೆಗೊಳಿಸುವುದಾಗಿ ನಿರೀಕ್ಷಿಸಲಾಗಿದೆ.

OPPO Reno 13 Series

ಈ ಸ್ಮಾರ್ಟ್ಫೋನ್ ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿದ್ದು ಈಗ ಭಾರತದ ಸರದಿಯಾಗಿದೆ. ಕಂಪನಿ OPPO Reno 13 Series ಬಗ್ಗೆ ಅಧಿಕೃತವಾಗಿ ಪೋಸ್ಟ್ ಮಾಡಿದ್ದೂ ಈ ಸುದ್ದಿಯನ್ನು ಬರೆಯುವಾಗ ಕೇವಲ ಬಿಡುಗಡೆಯ ಪೋಸ್ಟ್ ಮೂಲಕ ಕೇವಲ ಕಮಿಂಗ್ ಸೂನ್ (Comming Soon) ಎನ್ನುವ ಪೋಸ್ಟ್ ಮಾತ್ರ ನೀಡಿದ್ದು ಡೇಟ್ ಕಂಫಾರ್ಮ್ ಮಾಡಿಲ್ಲ. ಇದರಲ್ಲಿ ನಿಮಗೆ OPPO Reno 13 ಮತ್ತು OPPO Reno 13 Pro ಎಂಬ ಎರಡು ಹೊಸ 5G ಸ್ಮಾರ್ಟ್ಫೋನ್ಗಳನ್ನು ನಿರೀಕ್ಷಿಸಲಾಗಿದೆ. ಈ ಫೋನ್ ಇದರ ಫೀಚರ್ ಬಗ್ಗೆ ಮಾತನಾಡುವದಾದರೆ ಚೀನಾದ ರೂಪಾಂತರದಂತೆಯೇ ಬಿಡುಗಡೆಯನ್ನು ಇದೆ ಜನವರಿ ತಿಂಗಳಲ್ಲಿ ನಿರೀಕ್ಷಿಸಲಾಗಿದೆ.

Also Read: WhatsApp Stop Working: ಜನವರಿ 1 ರಿಂದ ಈ ಫೋನ್‌ಗಳಲ್ಲಿ ವಾಟ್ಸಾಪ್ ಸ್ಥಗಿತ! ನಿಮ್ಮ ಫೋನ್ ಈ ಪಟ್ಟಿಯಲ್ಲಿದೆಯೇ?

⁠Samsung Galaxy S25 Series

ಸ್ಯಾಮ್​ಸಂಗ್​ ತನ್ನ ಮುಂಬರಲಿರುವ ಪ್ರೀಮಿಯಂ ಸ್ಮಾರ್ಟ್ಫೋನ್ ವಿಭಾಗದಲ್ಲಿನ ⁠Samsung Galaxy S25 Series ಅನ್ನು ಸಹ ಬಿಡುಗಡೆಗೊಳಿಸಲು ಸಜ್ಜಾಗಿದ್ದು ಇದರಲ್ಲಿ ಒಟ್ಟಾರೆಯಾಗಿ 3 ರೂಪಾಂತರಗಳನ್ನು ⁠Samsung Galaxy S25 5G, ⁠Samsung Galaxy S25 Slim 5G ಮತ್ತು ⁠Samsung Galaxy S25 Ultra 5G ನಿರೀಕ್ಷಿಸಲಾಗಿದೆ. ಅಲ್ಲದೆ ಈ ಫೋನ್ಗಳು ಮುಂದಿನ ವರ್ಷ 22ನೇ ಜನವರಿ 2025 ರಂದು ಬಿಡುಗಡೆಯಾಗುವುದಾಗಿ ಮಾಹಿತಿ ಸೋರಿಕೆಯಾಗಿದೆ.

Upcoming smartphones in 2025

⁠iQOO Neo 10 Pro

ಈಗಾಗಲೇ ತನ್ನ ತಾಯ್ನಾಡಾಗಿರುವ ಚೀನಾದಲ್ಲಿ ಬಿಡುಗಡೆಯಾಗಿರುವ ಈ ⁠iQOO Neo 10 ಸರಣಿ ಈಗ ಭಾರತಕ್ಕೂ ಕಾಲಿಡಲಿದೆ. ಇದರಲ್ಲಿ ಎರಡು ⁠iQOO Neo 10 ಮತ್ತು ⁠iQOO Neo 10 Pro ರೂಪಾಂತರ ಬರಲಿದ್ದು ಇದರ ಫೀಚರ್ ಆಧಾರಿತವಾಗಿ ಇದರ ಬೆಲೆಯನ್ನು ಸುಮಾರು 39,999 ರೂಗಳಿಂದ ನಿರೀಕ್ಷಿಸಲಾಗಿದೆ. ಅಲ್ಲದೆ ಈ ಫೋನ್ಗಳು ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗುವುದಾಗಿ ನಿರೀಕ್ಷಿಸಲಾಗಿದೆ. ಭಾರತದಲ್ಲಿ ಸ್ಟೋರೇಜ್ ಅನ್ನು ಕಡಿಮೆ ಮಾಡಬಹುದು. ಯಾಕೆಂದರೆ ಚೀನಾದಲ್ಲಿ 5 ರೂಪಾಂತರದಲ್ಲಿ ಬಿಡುಗಡೆಗೊಳಿಸಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :