Redmi 14C 5G Luanch on 6th Jan 2025: ಚೀನಾದ ಟೆಕ್ ಕಂಪನಿ Xiaomi ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಅತಿ ಕಡಿಮೆ ಬೆಲೆಗೆ ಲೇಟೆಸ್ಟ್ Redmi A4 5G ಬಿಡುಗಡೆಗೊಳಿಸಿದ ನಂತರ ಈಗ ಮತ್ತೊಂದು ಹೊಸ ಬಜೆಟ್ ಸ್ಮಾರ್ಟ್‌ಫೋನ್ Redmi 14C 5G ಅನ್ನು ಮುಂದಿನ ತಿಂಗಳು 6ನೇ ಜನವರಿಯಂದು ಬಿಡುಗಡೆಗೊಳಿಸುವುದಾಗಿ ದೃಢಪಡಿಸಿದೆ. ಈ Redmi 14C 5G ಸ್ಮಾರ್ಟ್‌ಫೋನ್ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಿಂದ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ ಅನ್ನು 6ನೇ ಜನವರಿ 2025 ರಂದು ಭಾರತೀಯ ಮಾರುಕಟ್ಟೆಯ ಭಾಗವಾಗಿ ಮಾಡಲಾಗುವುದು.
ಹೊಸ Redmi 14C 5G ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ Redmi 14R 5G ಮರುಬ್ರಾಂಡೆಡ್ ಆವೃತ್ತಿಯಾಗಿರಬಹುದು ಎಂದು ಊಹಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಲಾಯಿತು. ಕಂಪನಿಯು ಕಳೆದ ಕೆಲವು ದಿನಗಳಿಂದ ಈ ಫೋನ್ ಬಗ್ಗೆ ಬರುತಿದ್ದ ಸೋರಿಕೆಯನ್ನು ತಡೆಯಲು ಈಗ ಅದರ ವಿನ್ಯಾಸವನ್ನು ಟೀಸರ್ ವೀಡಿಯೊದಲ್ಲಿ ತೋರಿಸಲಾಗಿದೆ. ಇದರ ಡಿಸೈನಿಂಗ್ ಆಧಾರದ ಮೇರೆಗೆ ಬೆಲೆಯ ಬಗ್ಗೆ ಮಾತನಾಡುನಾಡುವುದಾದರೆ ಈ Redmi 14C 5G ಸ್ಮಾರ್ಟ್ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 15,000 ರೂಗಳೊಳಗೆ ನಿರೀಕ್ಷಿಸಲಾಗಿದೆ.
ಈ ಮುಂಬರಲಿರುವ Redmi 14C 5G ಹೊಸ ಸ್ಮಾರ್ಟ್‌ಫೋನ್ 6.88 ಇಂಚಿನ ಡಾಟ್ ಡ್ರಾಪ್ ಡಿಸ್ಪ್ಲೇ ಮತ್ತು ಅದರೊಂದಿಗೆ ಉತ್ತಮ ಅನುಭವವನ್ನು ಹೊಂದಿರುತ್ತದೆ ನೀಡಲಾಗುವುದು. ಈ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲವನ್ನು ನೀಡುತ್ತದೆ. ಇದರ ಹೊರತಾಗಿ ಸ್ಮಾರ್ಟ್‌ಫೋನ್ ಹಿಂಭಾಗದ ಪ್ಯಾನಲ್ ಮೇಲೆ 2MP ಡೆಪ್ತ್ ಸಂವೇದಕದೊಂದಿಗೆ 50MP ಪ್ರೈಮರಿ ಕ್ಯಾಮೆರಾವನ್ನು ಒದಗಿಸಬಹುದು.
ಹೆಚ್ಚುವರಿಯಾಗಿ ಇದು Xiaomi ಸುಧಾರಿತ ಇಮೇಜಿಂಗ್ ಎಂಜಿನ್‌ನೊಂದಿಗೆ ಅನೇಕ ಕ್ಯಾಮೆರಾ ಮೋಡ್‌ಗಳು ಮತ್ತು ವೈಶಿಷ್ಟ್ಯಗಳಿಗೆ ಬೆಂಬಲವನ್ನು ಪಡೆಯುತ್ತದೆ. ಕಂಪನಿಯು ಹೊಸ ಸ್ಮಾರ್ಟ್‌ಫೋನ್ MediaTek Helio G81 ಪ್ರೊಸೆಸರ್ ಅನ್ನು ನೀಡುತ್ತದೆ. ಅಲ್ಲದೆ ಮೆಮೊರಿ ವಿಸ್ತರಣೆ ತಂತ್ರಜ್ಞಾನದೊಂದಿಗೆ ಇದು 16GB ವರೆಗೆ RAM ಸಾಮರ್ಥ್ಯದ ಪ್ರಯೋಜನದೊಂದಿಗೆ ಆಕರ್ಷಿಕ ಮತ್ತು ಯಾವುದೇ ಅದೇ ತಡೆಗಳಲ್ಲದ ಅನುಭವವನ್ನು ಪಡೆಯುತ್ತದೆ.
Also Read: OPPO Reno 13 Series ಬಿಡುಗಡೆಗೂ ಮುಂಚೆ ಲುಕ್ ಕಂಫಾರ್ಮ್! ನಿರೀಕ್ಷಿತ ಫೀಚರ್ಗಳೇನು?
ಈ ಸ್ಮಾರ್ಟ್‌ಫೋನ್ ಕಂಪನಿಯು 5160mAh ಸಾಮರ್ಥ್ಯದೊಂದಿಗೆ ಬ್ಯಾಟರಿಯನ್ನು ಒದಗಿಸಬಹುದು. ಇದರೊಂದಿಗೆ ವೀಡಿಯೊ ಪ್ಲೇಬ್ಯಾಕ್ ಸಮಯವು 22 ಗಂಟೆಗಳವರೆಗೆ ಇರುತ್ತದೆ. ಇದು 18W ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡಲಾಗುವುದು. Redmi 13C 5G ಅನ್ನು ಈಗ ಖರೀದಿಸಬಹುದಾದ ಅದೇ ವಿಭಾಗದ ಭಾಗವಾಗಿ Redmi 14C 5G ಮಾಡಲಾಗುವುದು.