ಭಾರತದಲ್ಲಿ ಮುಂಬರಲಿರುವ POCO C71 ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

POCO C71 ಫೋನ್ ಭಾರತದಲ್ಲಿ ಬಿಡುಗಡೆಗೆ ಡೇಟ್ ಕಂಫಾರ್ಮ್ ಆಗಿದೆ.
POCO C71 ಫೋನ್ ಇದೆ 4ನೇ ಏಪ್ರಿಲ್ 2025 ರಂದು ಬಿಡುಗಡೆಯಾಗಲು ಸಜ್ಜಾಗಿದೆ.
POCO C71 ಫೋನ್ 6.88 ದೊಡ್ಡ ಡಿಸ್ಪ್ಲೇಯೊಂದಿಗೆ 5200mAh ಬ್ಯಾಟರಿಯನ್ನು ಹೊಂದಲಿದೆ.
POCO C71 India Launch: ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಕಂಪನಿ ಪೊಕೋ (POCO) ತನ್ನ ಮುಂಬರಲಿರುವ ಹೊಸ POCO C71 ಭಾರತದಲ್ಲಿ ಇದೆ 4ನೇ ಏಪ್ರಿಲ್ 2025 ರಂದು ಬಿಡುಗಡೆಯಲು ಸಜ್ಜಾಗಿದೆ. ಈ POCO C71 ಸ್ಮಾರ್ಟ್ಫೋನ್ 120Hz ರಿಫ್ರೆಶ್ ರೇಟ್‌ನೊಂದಿಗೆ ಬರೋಬ್ಬರಿ 6.88 ದೊಡ್ಡ ಡಿಸ್ಪ್ಲೇಯೊಂದಿಗೆ ಹೆಚ್ಚುವರಿಯಾಗಿ 5200mAh ಬ್ಯಾಟರಿಯೊಂದಿಗೆ ಬರಲಿದೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ ಬಗ್ಗೆ ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ಎಲ್ಲವನ್ನು ತಿಳಿಯೋಣ.
ಭಾರತದಲ್ಲಿ POCO C71 ಬಿಡುಗಡೆ ಡೇಟ್!
ಪೊಕೋ ಇದರ ಬಗ್ಗೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ಮಾಹಿತಿ ನೀಡಿದ್ದು ಪ್ರಸ್ತುತ ಒಂದಿಷ್ಟು ಮಾಹಿತಿಗಳನ್ನು ಕಂಪನಿ ಬಿಡುಗಡೆಗೂ ಮುಂಚೆ ಬಹಿರಂಗವಾಗಿದೆ. ಭಾರತದಲ್ಲಿ ಮುಂಬರಲಿರುವ ಈ POCO C71 ಸ್ಮಾರ್ಟ್ಫೋನ್ ಇದೆ 4ನೇ ಏಪ್ರಿಲ್ 2025 ರಂದು ಮಧ್ಯಾಹ್ನ 12:00 ಗಂಟೆಯಿಂದ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಲು ಸಜ್ಜಾಗಿದೆ.
ಈ POCO C71 ಸ್ಮಾರ್ಟ್ಫೋನ್ ಬಿಡುಗಡೆಗೂ ಮುಂಚೆಯೇ ಅನೇಕ ಇಂಟಸ್ಟಿಂಗ್ ಫೀಚರ್ಗಳೊಂದಿಗೆ ಬರಲಿದ್ದು 120Hz ರಿಫ್ರೆಶ್ ರೇಟ್‌ನೊಂದಿಗೆ ಬರೋಬ್ಬರಿ 6.88 ದೊಡ್ಡ ಡಿಸ್ಪ್ಲೇಯೊಂದಿಗೆ ಹೆಚ್ಚುವರಿಯಾಗಿ 5200mAh ಬ್ಯಾಟರಿ ಕಂಫಾರ್ಮ್ ಆಗಿದೆ. ಸ್ಮಾರ್ಟ್ಫೋನ್ ಫೀಚರ್ ಆಧಾರದ ಮೇರೆಗೆ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಸುಮಾರು 15,000 ರೂಗಳಿಗೆ ನಿರೀಕ್ಷಿಸಲಾಗಿದೆ.
Also Read: Portable AC: ಬಿಸಿಲ ಬೇಗೆಯ ಮುಕ್ತಿಗಾಗಿ ನಿಮಗೊಂದು ಮಿನಿ ಪೋರ್ಟಬಲ್ ಏರ್ ಕೂಲರ್ ಬೇಕಿದ್ದರೆ ಈ ಪಟ್ಟಿ ನಿಮಗಾಗಿದೆ!
ಮುಂಬರಲಿರುವ POCO C71 ನಿರೀಕ್ಷಿತ ಫೀಚರ್ಗಳೇನು?
ಮುಂಬರಲಿರುವ ಈ POCO C71 ಸ್ಮಾರ್ಟ್ಫೋನ್ ಇದು 120Hz ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 6.88 ಇಂಚಿನ ಸ್ಕ್ರೀನ್ ಹೊಂದಿದೆ. ಅಲ್ಲದೆ ಸ್ಮಾರ್ಟ್ಫೋನ್ ಕ್ಯಾಮೆರಾದ ವಿಷಯದಲ್ಲಿ, POCO C71 ಹಿಂಭಾಗದಲ್ಲಿ 32MP ಕ್ಯಾಮೆರಾವನ್ನು AI ವೈಶಿಷ್ಟ್ಯಗಳೊಂದಿಗೆ ಮತ್ತು ಮುಂಭಾಗದಲ್ಲಿ 8MP ಸೆನ್ಸರ್ ಅನ್ನು ಹೊಂದಿದೆ. ಸ್ಮಾರ್ಟ್ಫೋನ್ 6GB RAM ಮತ್ತು ಹೆಚ್ಚುವರಿಯಾಗಿ 6GB ವರ್ಚುಯಲ್ RAM ಅನ್ನು ಹೊಂದಿದೆ.
POCO C71 ಸ್ಮಾರ್ಟ್ಫೋನ್ ಸ್ಟೋರೇಜ್ ಅಡಿಯಲ್ಲಿ ಹೆಚ್ಚುವರಿಯಾಗಿ ಈ ಸ್ಮಾರ್ಟ್ಫೋನ್ ನಿಮಗೆ ಹುಡ್ ಅಡಿಯಲ್ಲಿ ಇದು 15W ವೈರ್ಡ್ ಚಾರ್ಜಿಂಗ್‌ನೊಂದಿಗೆ 5200mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು ಇದು ಭದ್ರತೆಗಾಗಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಬರುತ್ತದೆ. ಫೇಸ್ ಅನ್‌ಲಾಕ್ ಸಹ ಲಭ್ಯವಿದೆ. ಇದು ಆಂಡ್ರಾಯ್ಡ್ 15 ಅನ್ನು ಬಾಕ್ಸ್ ಹೊರಗೆ ರನ್ ಮಾಡುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile