Upcoming Phones 2024: ಜಗತ್ತಿನದ್ಯಾಂತ ಮುಂದಿನ ದಿನಗಳಲ್ಲಿ ಬಿಡುಗಡೆಯಲು ಸಜ್ಜಾಗಿರುವ ಸ್ಮಾರ್ಟ್‌ಫೋನ್‌ಗಳನ್ನು ಈ ಲೇಖನದಲ್ಲಿ ಪಟ್ಟಿ ಮಾಡಲಾಗಿದ್ದು ನಾವು ಈಗ ಅಕ್ಟೋಬರ್ ಕೊನೆಯ ವಾರದಲ್ಲಿದ್ದೇವೆ. ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಈ ಗೂಗಲ್, ಆಪಲ್ ಮತ್ತು ಸ್ಯಾಮ್‌ಸಂಗ್ ತಮ್ಮ ವರ್ಷದ ಪ್ರಮುಖ ಕೊಡುಗೆಗಳನ್ನು ಹಂತ ಹಂತವಾಗಿ ತರುತ್ತಿರುವ ಹಿನ್ನಲೆಯಲ್ಲಿ ಚೀನಾದ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು ನಾವೇನು ಕಮ್ಮಿ ಎಂದು ತಮ್ಮ ಸಾಮರ್ಥ್ಯವನ್ನು ತೋರಿಸಲು ತಮ್ಮ ಮುಂಬರಲಿರುವ iQOO 13, OnePlus 13, Xiaomi 15 ಮತ್ತು Honor Magic 7 ಸೇರಿದಂತೆ Snapdragon 8 Elite ಪ್ರೊಸೆಸರ್‌ನಿಂದ ಚಾಲಿತವಾಗಿರುವ ಲೇಟೆಸ್ಟ್ ಫೋನ್‌ಗಳು ಕೆಲವೇ ದಿನಗಳಲ್ಲಿ ಬಿಡುಗಡೆಗೊಳಿಸಲು ಸಿದ್ಧಗೊಳಿಸಿವೆ.
ಈ ಮುಂಬರಲಿರುವ OnePlus 13 ಚೀನಾದಲ್ಲಿ ಅಕ್ಟೋಬರ್ 31 ರಂದು ಸಂಜೆ 4:00 ಗಂಟೆಗೆ ಅಥವಾ ನವೆಂಬರ್ 1 ರಂದು ಮಧ್ಯಾಹ್ನ 1:30 ಗಂಟೆಗೆ (ಭಾರತೀಯ ಕಾಲಮಾನ) ಬಿಡುಗಡೆಯಾಗಲು ಸಜ್ಜಾಗಿದ್ದು ಇದರ ಬಗ್ಗೆ ಟ್ವಿಟ್ಟರ್ ಪೋಸ್ಟ್ ಸೋರಿಕೆಯಾಗಿದೆ. ಇದು ಬೃಹತ್ 6000mAh ಬ್ಯಾಟರಿಯೊಂದಿಗೆ 100W ವೇಗದ ಚಾರ್ಜಿಂಗ್ ಮತ್ತು 50W ಮ್ಯಾಗ್ನೆಟಿಕ್ ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲವಿರಬಹುದು. ಈ ಫೋನ್ 50MP LYT-808 ಪ್ರೈಮರಿ ಕ್ಯಾಮೆರಾ ಮತ್ತು 50MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 3x ಆಪ್ಟಿಕಲ್ ಜೂಮ್‌ನೊಂದಿಗೆ 50MP ಟೆಲಿಫೋಟೋ ಲೆನ್ಸ್‌ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುವ ನಿರೀಕ್ಷೆಯಿದೆ.
ಈ ಪಟ್ಟಿಯ ಎರಡನೇ ಫೋನ್ ಅಂದ್ರೆ iQOO 13 ಇದು ಸಹ ಮೊದಲಿಗೆ ಚೀನಾದಲ್ಲಿ ಅಕ್ಟೋಬರ್ 30 ರಂದು 4PM ಅಥವಾ ಅಕ್ಟೋಬರ್ 31 ರಂದು ಮಧ್ಯಾಹ್ನ 1:30 ಕ್ಕೆ (ಭಾರತೀಯ ಕಾಲಮಾನ) ಪ್ರಾರಂಭವಾಗಲಿದೆ. ಇದರ ಬಗ್ಗೆ Weibo ನಲ್ಲಿ ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್‌ನ ಪೋಸ್ಟ್‌ನ ಪ್ರಕಾರ iQOO 13 ಚೀನಾದಲ್ಲಿ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನಿಂದ ಚಾಲಿತವಾಗುವ ನಿರೀಕ್ಷೆ. ಫೋನ್ 6150mAh ಬ್ಯಾಟರಿಯನ್ನು ಹೊಂದಿದೆ ಮತ್ತು 120W ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ 50MP ಪ್ರೈಮರಿ ಕ್ಯಾಮೆರಾ ಸೋನಿ IMX921 ಮತ್ತೊಂದು 50MP Samsung ISOCELL JN1 ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು ಕೊನೆಯದಾಗಿ 50MP ಸೋನಿ IMX826 ಟೆಲಿಫೋಟೋ ಶೂಟರ್‌ನೊಂದಿಗೆ ಬರುವ ನಿರೀಕ್ಷೆಯಿದೆ.
ಈ ಮುಂಬರಲಿರುವ ಹಾನರ್ ಮ್ಯಾಜಿಕ್ ಸೀರಿಸ್ MagicOS 9.0 ಜೊತೆಗೆ iQOO 13 ಬಿಡುಗಡೆಯಾಗುವ ದಿನದಂದು ಅಂದ್ರೆ ಅಕ್ಟೋಬರ್ 30 ರಂದು ಚೀನಾದಲ್ಲಿ ಲಾಂಚ್ ಆಗಲಿದೆ. ಫೋನ್ ಇತ್ತೀಚಿನ Qualcomm Snapdragon 8 Elite ಪ್ರೊಸೆಸರ್‌ನಿಂದ ಚಾಲಿತವಾಗಿದೆ ಎಂದು ಅಧಿಕೃತವಾಗಿ ದೃಢಪಡಿಸಲಾಗಿದೆ. ಫೋನ್ 5,600mAh ಬ್ಯಾಟರಿಯೊಂದಿಗೆ ಬರುತ್ತದೆ ಮತ್ತು 100W ವೇಗದ ಚಾರ್ಜಿಂಗ್ ಮತ್ತು 80W ವೈರ್‌ಲೆಸ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ನಿರೀಕ್ಷೆ.
Also Read: JioBharat K1 Karbonn: ದೀಪಾವಳಿ ಬಂಪರ್ ಆಫರ್ ಅಡಿಯಲ್ಲಿ ಕೇವಲ ₹699 ರೂಗಳಿಗೆ ಬಿಡುಗಡೆಯಾದ ಜಿಯೋ ಭಾರತ್ ಫೋನ್!
ಫೋನ್ 6.82 ಇಂಚಿನ 2K ಕ್ವಾಡ್ ಕರ್ವ್ಡ್ OLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು ಕುನ್ಲುನ್ ಗ್ಲಾಸ್ ರಕ್ಷಣೆಯನ್ನು ಹೊಂದಿರುತ್ತದೆ. ಫೋನ್ 50MP OmniVision OV50H ಪ್ರೈಮರಿ ಶೂಟರ್ ಮತ್ತು 50MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 50MP ಸೋನಿ IMX882 ಟೆಲಿಫೋಟೋ ಸೆಟಪ್‌ನೊಂದಿಗೆ ಬರುವ ನಿರೀಕ್ಷೆಯಿದೆ.
ಈ ಮುಂಬರಲಿರುವ ನಥಿಂಗ್ ಫೋನ್ 2a ಕಮ್ಯುನಿಟಿ ಎಡಿಷನ್ ಸ್ಮಾರ್ಟ್ಫೋನ್ ಅಕ್ಟೋಬರ್ 30 ರಂದು 11 AM GMT (4:30 PM IST) ಭಾರತ ಸೇರಿ ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಈ ಕಮ್ಯುನಿಟಿ ಎಡಿಷನ್ ಸ್ಮಾರ್ಟ್ಫೋನ್ ಹೊಸ ವಿನ್ಯಾಸ, ವಾಲ್‌ಪೇಪರ್ ಮತ್ತು ಪ್ಯಾಕೇಜಿಂಗ್‌ನೊಂದಿಗೆ ಬರುವ ನಿರೀಕ್ಷೆಯಿದೆ ಮತ್ತು ಮೂಲ ರೂಪಾಂತರದಂತೆಯೇ ಅದೇ ವಿಶೇಷಣಗಳನ್ನು ಒಳಗೊಂಡಿರುತ್ತದೆ.
ಈ ಮುಂಬರಲಿರುವ Xiaomi 15 Series ಫೋನ್ಗಳು ಹೊಸ Qualcomm Snapdragon 8 Elite ಪ್ರೊಸೆಸರ್‌ನಿಂದ ಚಾಲಿತವಾಗಿರುವ ವಿಶ್ವದ ಮೊದಲ ಫೋನ್ ಆಗಿದೆ. ಇದು ಅಕ್ಟೋಬರ್ 29 ರಂದು ಚೀನಾದಲ್ಲಿ ಲಾಂಚ್ ಆಗಲಿದೆ. Xiaomi 15 ಸ್ಮಾರ್ಟ್ಫೋನ್ 6.36inch LTPO AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು ಡಾಲ್ಬಿ ವಿಷನ್, HDR10+ ಮತ್ತು DCI-P3 ವೈಡ್ ಕಲರ್ ಗ್ಯಾಮಟ್‌ಗೆ ಬೆಂಬಲವನ್ನು ನೀಡುತ್ತದೆ. ಇದು 50MP OV50H ಪ್ರಾಥಮಿಕ ಶೂಟರ್, 3.2x ಆಪ್ಟಿಕಲ್ ಝೋ ಜೊತೆಗೆ 50MP ಟೆಲಿಫೋಟೋ ಲೆನ್ಸ್‌ನೊಂದಿಗೆ ಟೆಲಿಫೋಟೋ ಶೂಟರ್‌ನೊಂದಿಗೆ ಬರುವ ನಿರೀಕ್ಷೆಗಳಿವೆ.