Upcoming Phones in April: ಇವೇ ನೋಡಿ ಮುಂಬರಲಿರುವ Vivo, Moto ಮತ್ತು POCO ಮೊಬೈಲ್ ಫೋನ್‌ಗಳು!

Updated on 01-Apr-2025
HIGHLIGHTS

ಭಾರತದಲ್ಲಿ ಮುಂಬರಲಿರುವ ಹೊಚ್ಚ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಇಂದು ಪ್ರಕಟಿಸಲಾಗಿದೆ.

ಈ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಲಿರುವ Vivo, Moto ಮತ್ತು POCO ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ.

ಹೊಸ ಮತ್ತು ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಗೆ ಸ್ಮಾರ್ಟ್‌ಫೋನ್‌ಗಳನ್ನು ನಿರೀಕ್ಷಿಸಲಾಗಿದೆ.

Upcoming Phones in April: ಭಾರತದಲ್ಲಿ ಮುಂಬರಲಿರುವ ಹೊಚ್ಚ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಇಂದು ಪ್ರಕಟಿಸಲಾಗಿದೆ. ಪ್ರಸ್ತುತ ನೀವೊಂದು ಹೊಸ ಸ್ಮಾರ್ಟ್ಫೋನ್ ನಿಮಗಾಗಿ ಅಥವಾ ನಿಮ್ಮ ಪ್ರೀತಿ ಪಾತ್ರರಿಗಾಗಿ ಖರೀದಿಸಲು ಯೋಚಿಸುತ್ತಿದ್ದರೆ ಶೀಘ್ರದಲ್ಲೇ ಬಿಡುಗಡೆಯಾಗಲು ಸಜ್ಜಾಗಿರುವ Vivo, Moto ಮತ್ತು POCO ಸ್ಮಾರ್ಟ್‌ಫೋನ್‌ಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಪ್ರಸ್ತುತ ಸ್ಮಾರ್ಟ್ಫೋನ್ ಕಂಪನಿಗಳು ಹೊಸ ಮತ್ತು ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಗೆ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿವೆ. ಮುಂಬರಲಿರುವ Vivo, Moto ಮತ್ತು POCO ಸ್ಮಾರ್ಟ್‌ಫೋನ್‌ಗಳ ಪಟ್ಟಿ ಹಾಗಾದ್ರೆ ಯಾವುದು ಆ ಸ್ಮಾರ್ಟ್‌ಫೋನ್‌ಗಳು ಮತ್ತು ಯಾವಾಗ ಬಿಡುಗಡೆಯ ನಿರೀಕ್ಷೆಗಳೇನು ಎಲ್ಲವನ್ನು ತಿಳಿಯಿರಿ.

Motorola Edge 60 Fusion 5G

ಮೊಟೊರೊಲಾ ತನ್ನ ಇತ್ತೀಚಿನ ಮೋಟೋ ಎಡ್ಜ್ 60 ಫ್ಯೂಷನ್ (Motorola Edge 60 Fusion 5G) ಸ್ಮಾರ್ಟ್ಫೋನ್ ನಾಳೆ ಅಂದರೆ 2ನೇ ಏಪ್ರಿಲ್ 2025 ರಂದು ಭಾರತದಲ್ಲಿ ಅನಾವರಣಗೊಳಿಸಲು ಸಜ್ಜಾಗಿದೆ. ಫ್ಲಿಪ್‌ಕಾರ್ಟ್ ಲ್ಯಾಂಡಿಂಗ್ ಪುಟದ ಪ್ರಕಾರ ಮುಂಬರುವ ಮೋಟೋ ಎಡ್ಜ್ 60 ಮಾದರಿಯು ಗಣನೀಯ 1.5K ಪೂರ್ಣ-ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ.

Also Read: UPI Update: 1ನೇ ಏಪ್ರಿಲ್ 2025 ರಿಂದ ಯುಪಿಐ ಬಳಕೆಯಲ್ಲಿ ಈ ಹೊಸ ನಿಯಮಗಳು ಜಾರಿಯಾಗಿವೆ!

POCO C71

ಭಾರತದಲ್ಲಿ ಮುಂಬರಲಿರುವ ಪೊಕೋ ಕಂಪನಿಯ ಈ POCO C71 ಸ್ಮಾರ್ಟ್ಫೋನ್ ಬಜೆಟ್ ಸ್ಮಾರ್ಟ್‌ಫೋನ್ ವಿಭಾಗಕ್ಕೆ ಹೊಸ ಸೇರ್ಪಡೆಯಾಗಿದ್ದು 4ನೇ ಏಪ್ರಿಲ್ 2025 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ಟಿಯುವಿ ಪ್ರಮಾಣೀಕರಣದೊಂದಿಗೆ 6.88 ಇಂಚಿನ ಎಚ್‌ಡಿ+ 120Hz ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು ಪ್ರೀಮಿಯಂ ಸ್ಪ್ಲಿಟ್ ಗ್ರಿಡ್ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದ್ದು ನಯವಾದ ಮತ್ತು ಆಧುನಿಕ ಸೌಂದರ್ಯವನ್ನು ತರಲಿದೆ ಎಂದು ಹೇಳಲಾಗಿದೆ.

Vivo T4 5G

ಪ್ರಸ್ತುತ Vivo T3 5G ಯ ​​ಉತ್ತರಾಧಿಕಾರಿಯಾಗಿ ಬಿಡುಗಡೆಯಲಿರುವ ಈ Vivo T4 5G ಸ್ಮಾರ್ಫೋನ್ ಭಾರತದಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ ಎಂದು ವರದಿಯಾಗಿದೆ. ಆದರೆ ಇನ್ನೂ ಇದರ ಯಾವುದೇ ಅಧಿಕೃತ ಡೇಟ್ ಕಂಫಾರ್ಮ್ ಆಗಿಲ್ಲವಾದರೂ ಪೋಸ್ಟರ್ ಇಮೇಜ್ ಅನ್ನು ಕಂಪನಿ ಫ್ಲಿಪ್ಕಾರ್ಟ್ ಮತ್ತು ಟ್ವಿಟ್ಟರ್ ಮೂಲಕ ಬಿಡುಗಡೆಗೊಳಿಸಿದೆ. ಈ Vivo T4 5G ಸ್ಮಾರ್ಫೋನ್ ಇದೆ ಏಪ್ರಿಲ್ ಎರಡನೇ ವಾರದೊಳಗೆ ದೇಶದಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಗಳಿವೆ.

Vivo V50e 5G

ವಿವೋದ ಮತ್ತೊಂದು ನಿರೀಕ್ಷಿತ ಸ್ಮಾರ್ಟ್ಫೋನ್ Vivo V50e 5G ಇದೆ ಏಪ್ರಿಲ್ ತಿಂಗಳ ಕೊನೆಯೊಳಗೆ ಬಿಡುಗಡೆಯಾಗಲು ನಿರೀಕ್ಷಿಸಲಾಗಿದೆ. ಯಾಕೆಂದರೆ ಕಂಪನಿ ಇದರ ಲುಕ್ ಮತ್ತು ವಿನ್ಯಾಸದ ಮಾಹಿತಿಗಳನ್ನು ಪೋಸ್ಟ್ ಮಾಡಿದೆ. ಮತ್ತು ಕಮೀಂಗ್ ಸೂನ್ ಎಂದು ಪೋಸ್ಟ್ ತೋರಿಸುತ್ತದೆ. ಅಂದರೆ ಪ್ರೀಮಿಯಂ ವಿಭಾಗದಲ್ಲಿ ಸ್ಮಾರ್ಟ್ಫೋನ್ ಬರುವ ನಿರೀಕ್ಷೆಗಳಿವೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :