ಭಾರತದಲ್ಲಿ iQOO Neo 9 Pro ಲಾಂಚ್ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

ಭಾರತದಲ್ಲಿ iQOO Neo 9 Pro ಲಾಂಚ್ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
HIGHLIGHTS

ಮುಂಬರಲಿರುವ iQOO Neo 9 Pro ಭಾರತದಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗುವುದಾಗಿ ಘೋಷಣೆ

iQOO Neo 9 Pro ಫೋನ್ Qualcomm Snapdragon 8 Gen2 ಪ್ರೊಸೆಸರ್ನೊಂದಿಗೆ ಬರುವ ನಿರೀಕ್ಷೆಗಳಿವೆ.

iQOO Neo 9 Pro ಭಾರತದಲ್ಲಿ ಮುಂದಿನ ತಿಂಗಳು ಅಂದ್ರೆ 22ನೇ ಫೆಬ್ರವರಿ 2024 ರಂದು ಬಿಡುಗಡೆಯಾಗಲು ಕಂಪನಿ ಖಚಿತಪಡಿಸಿದೆ.

ಭಾರತದಲ್ಲಿ ಅತಿ ನಿರೀಕ್ಷಿತ ಮತ್ತು ಹೆಚ್ಚು ಸುದ್ದಿಯಲ್ಲಿರುವ ಐಕ್ಯೂ ಕಂಪನಿಯ ಮುಂಬರಲಿರುವ iQOO Neo 9 Pro ಸ್ಮಾರ್ಟ್ಫೋನ್ ಭಾರತದಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗುವುದಾಗಿ ಕಂಪನಿ ಈಗ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಘೋಷಿಸಿದೆ. ಈ ಸ್ಮಾರ್ಟ್ಫೋನ್ ಈಗಾಗಲೇ ಕಳೆದ ತಿಂಗಳು

\ಚೀನಾದಲ್ಲಿ ಬಿಡುಗಡೆಯಾಗಿ ಮಾರಾಟವಾಗುತ್ತಿದೆ. ಈಗ ಭಾರತದಲ್ಲಿ ಮುಂದಿನ ತಿಂಗಳು ಅಂದ್ರೆ 22ನೇ ಫೆಬ್ರವರಿ 2024 ರಂದು ಬಿಡುಗಡೆಯಾಗಲು ಕಂಪನಿ ಖಚಿತಪಡಿಸಿದೆ. iQOO Neo 9 Pro ಬಗ್ಗೆ ನಮಗೆ ತಿಳಿದಿರುವ ಒಂದಿಷ್ಟು ನಿರೀಕ್ಷಿತ ಮಾಹಿತಿಯನ್ನು ಇಲ್ಲಿ ನಿಮಗಾಗಿ ಹಂಚಿಕೊಂಡಿದ್ದೇವೆ.

Also Read: Amazon ರಿಪಬ್ಲಿಕ್ ಡೇ ಸೇಲ್‌ನಲ್ಲಿ 20,000 ರೂಗಳಲ್ಲಿನ ಲೇಟೆಸ್ಟ್ Washing Machine ಮೇಲೆ ಭಾರಿ ಡಿಸ್ಕೌಂಟ್‌!

iQOO Neo 9 Pro ನಿರೀಕ್ಷಿತ ಬೆಲೆ ಮತ್ತು ಲಭ್ಯತೆ

ಮುಂಬರಲಿರುವ ಈ 5G ಸ್ಮಾರ್ಟ್ಫೋನ್ ಚೀನಾದಲ್ಲಿ ಬಿಡುಗಡೆಯಾಗಿರುವುದರೊಂದಿಗೆ ಭಾರತಕ್ಕೆ ಹೋಲಿಸಿ ಅದರ ರೂಪಾಂತರ ಮತ್ತು ಬೆಲೆಗಳ ಬಗ್ಗೆ ಮಾತನಾಡುವುದಾದರೆ ಭಾರತದಲ್ಲಿ iQOO Neo 9 Pro ಸ್ಮಾರ್ಟ್ಫೋನ್ ಒಟ್ಟಾರೆಯಾಗಿ 3 ವೇರಿಯೆಂಟ್‍ಗಳೊಂದಿಗೆ ಸುಮಾರು 40,000 ರಿಂದ 45,000 ರೂಗಳೊಳಗೆ ಬರುವುದಾಗಿ ನಿರೀಕ್ಷಿಸಬಹುದು ಅವೆಂದರೆ ಈ ಕೆಳಗೆ ನಿರೀಕ್ಷಿಸಿ ಪಟ್ಟಿ ಮಾಡಲಾಗಿದೆ. ಅಲ್ಲದೆ ನಿಮ್ಮ ನಿರೀಕ್ಷಿತ ಬೆಲೆ ಎಷ್ಟಿರಬಹುದೆಂದು ನೀವು ಕಾಮೆಂಟ್ ಮಾಡಿ ತಿಳಿಸಿ.

12GB RAM ಮತ್ತು 256GB ಸ್ಟೋರೇಜ್ 39,999 ರೂಗಳು
16GB RAM ಮತ್ತು 256GB ಸ್ಟೋರೇಜ್ 32,999 ರೂಗಳು
16GB RAM ಮತ್ತು 512GB ಸ್ಟೋರೇಜ್ 44,999 ರೂಗಳು

ಐಕ್ಯೂ Neo 9 Pro ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳು

iQOO Neo 9 Pro ಸ್ಮಾರ್ಟ್ಫೋನ್ 2800×1260 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 144Hz ರಿಫ್ರೆಶ್ ರೇಟ್‌ಗೆ ಬೆಂಬಲದೊಂದಿಗೆ 6.78 ಇಂಚಿನ LTPO AMOLED ಡಿಸ್ಪ್ಲೇಯನ್ನು ನಿರೀಕ್ಷಿಸಲಾಗಿದೆ. ಇದರ ಕ್ಯಾಮೆರಾ ವಿಭಾಗದಲ್ಲಿ ಮಾತನಾಡುವುದರೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಫೀಚರ್ನೊಂದಿಗೆ ಫೋನ್ 50MP ಸೋನಿ IMX920 ಸೆನ್ಸರ್‌ ಅನ್ನು ಸಪೋರ್ಟ್ನೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 50MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಸ್ಮಾರ್ಟ್‌ಫೋನ್ ಒಳಗೊಂಡಿರುವ ನಿರೀಕ್ಷೆಯಿದೆ. ಫೋನ್ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 16MP ಮುಂಭಾಗದ ಸೆನ್ಸರ್‌ ಇದೆ.

ಭಾರತದಲ್ಲಿ ಮುಂಬರುವ ಸ್ಮಾರ್ಟ್‌ಫೋನ್ Qualcomm Snapdragon 8 Gen2 ಯಿಂದ ಅಡ್ರಿನೊ ಜಿಪಿಯು ಜೊತೆಯಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಗಳಿವೆ. ಕುತೂಹಲಕಾರಿಯಾಗಿ iQOO Neo 9 Pro ಚೀನಾ ರೂಪಾಂತರವನ್ನು MediaTek ಡೈಮೆನ್ಸಿಟಿ 9300 ಪ್ರೊಸೆಸರ್ನೊಂದಿಗೆ Immortalis-G720 GPU ನೊಂದಿಗೆ ಜೋಡಿಸಲಾಗಿದೆ. ಇದರಲ್ಲಿ ನಿಮಗೆ 5160mAh ದೊಡ್ಡದಾದ ಬ್ಯಾಟರಿಯನ್ನು ಹೊಂದಿದ್ದು ಬಾಕ್ಸ್‌ನೊಳಗೆ ಒದಗಿಸಲಾದ 120W ಚಾರ್ಜರ್ ಮೂಲಕ ಫಾಸ್ಟ್ ಚಾರ್ಜ್ ಮಾಡಬಹುದಾಗಿದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo