iQOO Neo 10 Series Launch: ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಬ್ರಾಂಡ್ ಐಕ್ಯೂ ತನ್ನ ಮುಂಬರಲಿರುವ iQOO Neo 10 Series ಸ್ಮಾರ್ಟ್ಫೋನ್ MediaTek Dimension 9400 ಪ್ರೊಸೆಸರ್‌ನೊಂದಿಗೆ ತನ್ನ ತಾಯ್ನಾಡಿನಲ್ಲಿ ಇದೇ 29ನೇ ನವೆಂಬರ್ 2024 ರಂದು ಬಿಡುಗಡೆಗೊಳಿಸುವುದಾಗಿ ಖಚಿತಪಡಿಸಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಬೀಡುಗಡೆಗೂ ಮುಂಚೆ ಇದರ ಡಿಸೈನಿಂಗ್ ಮತ್ತು ಹೈಲೈಟ್ ಫೀಚರ್ಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಟ್ವಿಟ್ಟರ್ ಖಾತೆಯಲ್ಲಿ ಸೋರಿಕೆಯಾಗಿದೆ.
ಸ್ಮಾರ್ಟ್ಫೋನ್ ತಯಾರಕ ಬ್ರಾಂಡ್ ಐಕ್ಯೂ ಈ ಸರಣಿಯಲ್ಲಿ ಒಟ್ಟು ಎರಡು iQOO Neo 10 ಮತ್ತು iQOO Neo 10 Pro ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುವುದಾಗಿ ನಿರೀಕ್ಷಿಸಲಾಗಿದೆ. ಅಲ್ಲದೆ ಈಗಾಗಲೇ ಮೇಲೆ ತಿಳಿಸಿವಂತೆ ಈ ಮುಂಬರಲಿರುವ iQOO Neo 10 Series ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯ ಬಗ್ಗೆ ಪ್ರಸ್ತುತ ಯಾವುದೇ ಮಾಹಿತಿಗಳಿಲ್ಲ. ಆದರೆ ಈ ಮುಂಬರಲಿರುವ 5G ಸ್ಮಾರ್ಟ್ ಫೋನ್‌ಗಳ ಬಗ್ಗೆ ಪ್ರಸ್ತುತ ಫೋನ್‌ಗಳನ್ನು ಗೀಕ್‌ಬೆಂಚ್ ಸೈಟ್‌ನಲ್ಲಿ ಗುರುತಿಸಲಾಗಿರುವುದು ಅಚ್ಚರಿಯ ವಿಷಯವಾಗಿದೆ.
Also Read: ಅಮೆಜಾನ್ 32 ಇಂಚಿನ ಲೇಟೆಸ್ಟ್ Smart TV ಮೇಲೆ ಜಬರ್ದಸ್ತ್ ಡಿಸ್ಕೌಂಟ್ ನೀಡುತ್ತಿದೆ! ಯಾರಿಗುಂಟು ಯಾರಿಗಿಲ್ಲ!
ಈ ಮುಂಬರಲಿರುವ iQOO Neo 10 Series ಸ್ಮಾರ್ಟ್ಫೋನ್ ಚೀನಾದಲ್ಲಿ 29ನೇ ನವೆಂಬರ್ 2024 ರಂದು (ಭಾರತದಲ್ಲಿ 1.30 PM IST) ಸಮಯಕ್ಕೆ ಸರಿಯಾಗಿ ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಅಲ್ಲದೆ ಈ ಸರಣಿಯ ಸ್ಮಾರ್ಟ್ಫೋನ್ ಖರೀದಿಸಲು ಇದರ ಪ್ರೀ-ಬುಕಿಂಗ್ ಪ್ರಾರಂಭವಾಗಿದ್ದು ಮುಂಗಡವಾಗಿ ಆರ್ಡರ್ ಮಾಡುವ ಗ್ರಾಹಕರಿಗೆ ಉಚಿತ ಬ್ಲೂಟೂತ್ ಸ್ಪೀಕರ್, ಮೂರು ವರ್ಷಗಳ ಬ್ಯಾಟರಿ ವಾರಂಟಿ, ಕಸ್ಟಮ್ ಟೆಂಪರ್ಡ್ ಫಿಲ್ಮ್ ಜೊತೆಗೆ ಟ್ರೇಡ್-ಇನ್ ಬೋನಸ್‌ನಂತಹ ಹಲವಾರು ವಿಶೇಷವಾದ ಕೊಡುಗೆಗಳನ್ನು ಸಹ ಕಂಪನಿ ನೀಡುವುದಾಗಿ ಹೇಳಿದೆ.
iQOO Neo 10 Pro ಸ್ಮಾರ್ಟ್ಫೋನ್ 6.78 ಇಂಚಿನ 1.5K 8T LTPO AMOLED ಡಿಸ್ಪ್ಲೇಯನ್ನು 144Hz ರಿಫ್ರೆಶ್ ದರದೊಂದಿಗೆ ಒಳಗೊಂಡಿರುವ ನಿರೀಕ್ಷೆಯಿದೆ. iQOO Neo 10 Pro ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾದೊಂದಿಗೆ f/1.56 ಅಪರ್ಚರ್ ಮತ್ತು ಸೆಕೆಂಡರಿ 50MP ಕ್ಯಾಮೆರಾವನ್ನು ಹೊಂದಿದ್ದು ಅಲ್ಟ್ರಾ-ವೈಡ್ ಲೆನ್ಸ್ ಅನ್ನು ನಿರೀಕ್ಷಿಸಲಾಗಿದೆ. ಅಲ್ಲದೆ ಇದರ ಮುಂಭಾಗದ ಕ್ಯಾಮೆರಾದ ಬಗ್ಗೆ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಇದು ಇತ್ತೀಚಿನ MediaTek ಡೈಮೆನ್ಸಿಟಿ 9400 ಪ್ರೊಸೆಸರ್‌ನಿಂದ ಚಾಲಿತಗೊಳ್ಳುವ ಸಾಧ್ಯತೆಯಿದೆ. ಜೊತೆಗೆ 16GB RAM ಮತ್ತು 512GB ವರೆಗಿನ ಸಂಗ್ರಹಣೆಗೆ ಬೆಂಬಲವಿದೆ. iQOO Neo 10 Pro ಸ್ಮಾರ್ಟ್ಫೋನ್ 120W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬೃಹತ್ 6,000mAh ಬ್ಯಾಟರಿಯನ್ನು ಸಹ ನಿರೀಕ್ಷಿಸಲಾಗಿದೆ. ಅದರ ಪೂರ್ವವರ್ತಿಯಲ್ಲಿ ಬಳಸಲಾದ ಆಪ್ಟಿಕಲ್ ಸೆನ್ಸರ್ ಜೊತೆಗೆ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಜೊತೆಗೆ ಪ್ಲಾಸ್ಟಿಕ್ ಫ್ರೇಮ್ ಅನ್ನು ಹೊಂದಿರುತ್ತದೆ.