ಈಗ ಇಡೀ ವಿಶ್ವವೇ 5G ಕಡೆ ಮುಖ ಮಾಡಿದ್ದು ಭಾರತದಲ್ಲಿ 5G ನೆಟ್ವರ್ಕ್ ಇಲ್ಲದಿದ್ದರೂ ಕೆಲವು ಬ್ರ್ಯಾಂಡ್ಗಳು ತಮ್ಮ 5G ಫೋನ್ಗಳನ್ನು ಬಿಡುಗಡೆಗೊಳಿಸುತ್ತಿವೆ. ಅಲ್ಲದೆ ಆನ್‌ಲೈನ್ ಗೇಮ್ಗಳು, ಮ್ಯೂಸಿಕ್, ವೀಡಿಯೊಗಳಂತಹ ಹೆಚ್ಚಿನ ಡೇಟಾ ತೀವ್ರ ಸೇವೆಗಳ ವಿಷಯದಲ್ಲಿ ಪ್ರಸ್ತುತ ಪೀಳಿಗೆಯ ಮೊಬೈಲ್ ಫೋನ್ ಬಳಕೆದಾರರಿಂದ ಬೇಡಿಕೆ ಹೆಚ್ಚಾಗಿದೆ. ಈಗ ಫೋನ್ ತಯಾರಕರು ಇದರ ವೇಗವನ್ನು ಹಿಡಿಯಲು ನ ಮುಂದು ತಾ ಮುಂದು ಅಂಥ ಹೋರಾಡುತ್ತಿದ್ದಾರೆ. ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿರುವ ಫೋನ್ಗಳಿಗಿಂತ ಹೆಚ್ಚು 5G ಟೆಕ್ನಾಲಜಿ ಫೋನ್ಗಳ ಕ್ರೆಜ್ ಹೆಚ್ಚುತ್ತಿದೆ. ಈ ವಿಭಾಗದಲ್ಲಿ ಭಾರತ ಈಗಾಗಲೇ ಸಾಕಷ್ಟು ಬ್ರಾಂಡ್ಗಳ ಕೊಡುಗೆಗಳನ್ನು ಒಳಗೊಂಡಿದೆ. ಈ ಕೆಳಗೆ ಮುಂಬರಲಿರುವ ಮತ್ತು ಬಿಡುಗಡೆಯಾಗಿರುವ 5G ಸ್ಮಾರ್ಟ್ಫೋನ್ಗಳನ್ನು ಮತ್ತು ಅವುಗಳ ಕೆಲವು ಹೈಲೈಟ್ ಫೀಚರ್ಗಳನ್ನು ನೋಡಬವುದು.ಈ ಪಟ್ಟಿಯಲ್ಲಿ Realme X50 Pro 5G, iQOO 3 5G, Vivo Z6 5G ಮತ್ತು Samsung Galaxy S20 Ultra ಸ್ಮಾರ್ಟ್ಫೋನ್ಗಳ ಕೆಲವು ಹೈಲೈಟ್ಗಳನ್ನು ಹೀಗೆ ನಿರೀಕ್ಷಿಸಬವುದು.
Realme X50 Pro 5G
ಡಿಸ್ಪ್ಲೇ: 90Hz ರಿಫ್ರೆಶ್ ರೇಟ್ + ಡುಯಲ್ ಪಂಚ್ ಹೋಲ್
ಕ್ಯಾಮೆರಾ : 64MP ಪ್ರೈಮರಿ + ಡುಯಲ್ ಫ್ರಂಟ್ ಕ್ಯಾಮೆರಾ
RAM: 6GB + 8GB
ಬ್ಯಾಟರಿ: 4500mAh + 65w
ಪ್ರೊಸೆಸರ್: Snapdragon 865
ಬಿಡುಗಡೆಯ ದಿನಾಂಕ: 24 Feb 2020
ನಿರೀಕ್ಷಿತ ಬೆಲೆ: 35,000
iQOO 3 5G
ಡಿಸ್ಪ್ಲೇ: 120Hz ರಿಫ್ರೆಶ್ ರೇಟ್ + ಡ್ಯೂಡ್ರಾಪ್
ಕ್ಯಾಮೆರಾ : 48MP ಪ್ರೈಮರಿ
RAM: 6GB + 8GB
ಬ್ಯಾಟರಿ: 4300mAh + 55w
ಪ್ರೊಸೆಸರ್: Snapdragon 865
ಬಿಡುಗಡೆಯ ದಿನಾಂಕ: 25 Feb 2020
ನಿರೀಕ್ಷಿತ ಬೆಲೆ: 42,000
Vivo Z6 5G
ಡಿಸ್ಪ್ಲೇ: 60Hz ರಿಫ್ರೆಶ್ ರೇಟ್ + ಡ್ಯೂಡ್ರಾಪ್
ಕ್ಯಾಮೆರಾ : 48MP ಪ್ರೈಮರಿ
RAM: 6GB + 8GB
ಬ್ಯಾಟರಿ: 5000mAh + 44w
ಪ್ರೊಸೆಸರ್: Snapdragon 765G
ಬಿಡುಗಡೆಯ ದಿನಾಂಕ: 29 Feb 2020
ನಿರೀಕ್ಷಿತ ಬೆಲೆ: 29,990
Samsung Galaxy S20 Ultra
ಡಿಸ್ಪ್ಲೇ: 120Hz ರಿಫ್ರೆಶ್ ರೇಟ್ + ಡ್ಯೂಡ್ರಾಪ್
ಕ್ಯಾಮೆರಾ : 108MP ಪ್ರೈಮರಿ
RAM: 8GB + 12GB
ಬ್ಯಾಟರಿ: 5000mAh + 45w
ಪ್ರೊಸೆಸರ್: Exynos 990
ಬಿಡುಗಡೆಯ ದಿನಾಂಕ: 24 April 2020
ನಿರೀಕ್ಷಿತ ಬೆಲೆ: 99,890
ಈ ಸ್ಮಾರ್ಟ್ಫೋನ್ಗಳ ಫೀಚರ್ಗಳು ಬಿಡುಗಡೆಯಾಗುವ ಮುಂಚೆಯೇ ಈಗಾಗಲೇ ತಮ್ಮ ತಮ್ಮ ಅಧಿಕೃತ ವೆಬ್ಸೈಟ್/ಟ್ವಿಟ್ಟರ್ ಅಕೌಂಟ್ಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹೈಲೈಟ್ ಅಥವಾ ಬಿಡುಗಡೆಯ ದಿನಾಂಕ ಹೀಗೆ ಒಂಚೂರು ಮಾಹಿತಿಯನ್ನು ತೋರಿಸಿದ್ದಾರೆ. ಆದರೂ ಈ ಸ್ಮಾರ್ಟ್ಫೋನ್ಗಳ ಖಚಿತ ಮಾಹಿತಿಗಾಗಿ ನಾವು ನೀವೆಲ್ಲಾ ಈ ಸ್ಮಾರ್ಟ್ಫೋನ್ಗಳ ಬಿಡುಗಡೆವರೆಗೆ ಕಾಯಲೇಬೇಕಿದೆ.