Best 5G Smartphones: ಪ್ರಸ್ತುತ ನಿಮಗೊಂದು ಅಥವಾ ನಿಮಗೆ ತಿಳಿದವರಿಗೊಂದು ಲೇಟೆಸ್ಟ್ ಸ್ಮಾರ್ಟ್ಫೋನ್ (5G Smartphones) ಖರೀದಿಸಲು ಯೋಚಿಸುತ್ತಿದ್ದರೆ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನಿಮಗೊಂದು ಅತ್ಯುತ್ತಮ ಅವಕಾಶವನ್ನು ನೀಡುತ್ತಿದೆ. ಯಾಕೆಂದರೆ ಈ 2024 ವರ್ಷ ಕೊನೆಗೊಳ್ಳಲು ಕೇವಲ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು (Year End 2024) ಮಾರಾಟದಡಿಯಲ್ಲಿ ನಿಮಗೆ ಕೇವಲ 10,000 ರೂಗಳಿಗೆ ಲಭ್ಯವಿರುವ Samsung, Xiaomi Redmi, Motorola, POCO, Lava ಮತ್ತು Realme ಕಂಪನಿಗಳ ಹೊಸ ಸ್ಮಾರ್ಟ್ಫೋನ್ಗಳು ಭಾರಿ ಡಿಸ್ಕೌಂಟ್ ಮತ್ತು ಆಫರ್ಗಳೊಂದಿಗೆ ಮಾರಾಟವಾಗುತ್ತಿರುವ ಫೋನ್ಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.
Also Read: WhatsApp Tips: ಒಂದೇ ವಾಟ್ಸಾಪ್ ನಂಬರ್ ಅನ್ನು 2 ಬೇರೆ ಬೇರೆ ಫೋನ್‌ಗಳಲ್ಲಿ ಬಳಸುವುದು ಹೇಗೆ ಗೊತ್ತಾ?
ಇತ್ತೀಚಿಗೆ ಬಿಡುಗಡೆಯಾದ ಲೇಟೆಸ್ಟ್ Redmi A4 5G ಸ್ಮಾರ್ಟ್ಫೋನ್ ನಿಮಗೆ ಅತಿ ಕಡಿಮೆ ವಿಭಾಗದಲ್ಲಿ ಬಿಡುಗಡೆಯಾದ ಸ್ಮಾರ್ಟ್ಫೋನ್ಗಳಲ್ಲಿ ಒಂದಾಗಿದೆ. ಪ್ರಸ್ತುತ ಅಮೆಜಾನ್ ಮೂಲಕ ಈ ಸ್ಮಾರ್ಟ್ಫೋನ್ ಕೇವಲ 8,498 ರೂಗಳಿಗೆ ಖರೀದಿಸಲು ಲಭ್ಯವಿರುತ್ತದೆ. ಆದರೆ ನಿಮ್ಮ ಗಮನದಲ್ಲಿರಲಿ ಈ ಫೋನ್ ಏರ್ಟೆಲ್ ಸಿಮ್ ಕಾರ್ಡ್ ಬಳಸುವ ಬಳಕೆದಾರರು ಖರೀದಿಸಿದರೆ ಇದರಲ್ಲಿ 5G ಬಳಸಲು ಸಾಧ್ಯವಿರೋದಿಲ್ಲ ಏಕೆಂದರೆ ಇದರಲ್ಲಿ NSA 5G ಟೆಕ್ನಾಲಜಿಯನ್ನು ಸಪೋರ್ಟ್ ಮಾಡೋದಿಲ್ಲ. ಆದರೆ ಬೇರೆ ಎಲ್ಲ ಬಳಕೆದಾರರೂ ಇದನ್ನು ಬಳಸಬಹುದು.
ಈ ಪಟ್ಟಿಯ ಎರಡನೇ ಸ್ಥಾನದಲ್ಲಿ ರಿಯಲ್‌ಮಿ ಕಂಪನಿಯ ಲೇಟೆಸ್ಟ್ 5G Smartphone ಅತಿ ಕಡಿಮೆ ಬೆಲೆಗೆ ಬಿಡುಗಡೆಯಾಗಿರುವ ಮತ್ತೊಂದು ಫೋನ್ ಆಗಿದೆ. ಇದನ್ನು ನೀವು ಕೇವಲ 8,499 ರೂಗಳಿಗೆ ಖರೀದಿಸಬಹುದು. ಇದರ ಮತ್ತಷ್ಟು ವಿಶೇಷತೆಗಳನ್ನು ನೀಡುವುದಾದರೆ 50MP ಸೋನಿ ಸೆನ್ಸರ್ ಜೊತೆಗೆ 5160mAh ಬ್ಯಾಟರಿಯನ್ನು ಆರಂಭಿಕ ಒಂದೇ ಒಂದು 4GB RAM ಮತ್ತು 64GB ಸ್ಟೋರೇಜ್ ಜೊತೆಗೆ ಬರುತ್ತದೆ. ಇದನ್ನು ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಖರೀದಿಸಬಹುದು.
ಕೇವಲ 12,000 ರೂಗಳಿಗೆ ಲಭ್ಯವಿರುವ ಲೇಟೆಸ್ಟ್ ಸ್ಮಾರ್ಟ್ಫೋನ್ ನೋಡುವುದಾದರೆ ಈ Samsung Galaxy A14 5G ಸಹ ಒಂದಾಗಿದೆ. ಇದನ್ನು ನೀವು ಅಮೆಜಾನ್ ಮೂಲಕ ಇದರ ಆರಂಭಿಕ 4GB RAM ಮತ್ತು 64GB ಸ್ಟೋರೇಜ್ ಕೇವಲ 10,999 ರೂಗಳಿಗೆ ಖರೀದಿಸಬಹುದು. ಇದರ ವಿಶೇಷಣತೆಗಳನ್ನು ನೋಡುವದಾದರೆ ಇದರಲ್ಲಿ ನಿಮಗೆ 50MP ಪ್ರೈಮರಿ ಡುಯಲ್ ಕ್ಯಾಮೆರಾ ಸೆಟಪ್ ಜೊತೆಗೆ ಒಟ್ಟು 3 ರೂಪಾಂತರಗಳಲ್ಲಿ ಲಭ್ಯವಿದೆ.
Also Read: Realme Narzo 70 Turbo 5G ಮೇಲೆ ಬರೋಬ್ಬರಿ ₹2500 ರೂಗಳ ಡಿಸ್ಕೌಂಟ್! ಹೊಸ ಬೆಲೆ ಮತ್ತು ಫೀಚರ್ಗಳೇನು?
ಇದರೊಂದಿಗೆ ಈ ಪಟ್ಟಿಯ ಮೂರನೇ ಸ್ಥಾನದಲ್ಲಿ ಜನಪ್ರಿಯ ಪೊಕೊ ಕಂಪನಿಯ ಹೊಸ POCO M6 5G ಅನ್ನು ಪಟ್ಟಿ ಮಾಡಲಾಗಿದೆ. ಯಾಕೆಂದರೆ ಇದರ ಫೀಚರ್ ಅನುಗುಣವಾಗಿ ನೀವು ಇದನ್ನು ಫ್ಲಿಪ್ಕಾರ್ಟ್ ಮೂಲಕ ಇದರ ಆರಂಭಿಕ 4GB RAM ಮತ್ತು 64GB ಸ್ಟೋರೇಜ್ ಕೇವಲ 8,499 ರೂಗಳಿಗೆ ಖರೀದಿಸಬಹುದು. ಇದರ ವಿಶೇಷಣತೆಗಳನ್ನು ನೋಡುವದಾದರೆ ಇದರಲ್ಲಿ ನಿಮಗೆ 50MP ಪ್ರೈಮರಿ ಡುಯಲ್ ಕ್ಯಾಮೆರಾ ಸೆಟಪ್ ಜೊತೆಗೆ ಒಟ್ಟು 3 ರೂಪಾಂತರಗಳಲ್ಲಿ ಲಭ್ಯವಿದೆ.
ನಿಮಗೆ ಅತಿದೊಡ್ಡ ಬ್ಯಾಟರಿ ಮತ್ತು ಅತ್ಯುತ್ತಮ ಕ್ಯಾಮೆರಾವುಳ್ಳ Samsung Galaxy M15 5G ಸ್ಮಾರ್ಟ್ಫೋನ್ ಬೇಕಿದ್ದರೆ ಫ್ಲಿಪ್ಕಾರ್ಟ್ ಮೂಲಕ ಅತಿ ಕಡಿಮೆ ಬೆಲೆಗೆ 6000mAh ಬ್ಯಾಟರಿ ಮತ್ತು 50MP ಕ್ಯಾಮೆರಾವುಳ್ಳ ಸ್ಯಾಮ್‌ಸಂಗ್ 5G ಫೋನ್ ಖರೀದಿಸುವ ಅವಕಾಶವನ್ನು ಪಡೆಯಬಹುದು. ಇದರ ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ಕೇವಲ 10,999 ರೂಗಳಿಗೆ ಖರೀದಿಸಬಹುದು.