Upcoming Smartphone Aug 2024: ಭಾರತದಲ್ಲಿ ನಿಮಗೆ ತಿಳಿದಿರುವಂತೆ ಪ್ರತಿ ತಿಂಗಳು ಹತ್ತಾರು ಸ್ಮಾರ್ಟ್‌ಫೋನ್‌ಗಳು (Smartphone) ಮಾರುಕಟ್ಟೆಗೆ ಸೇರಿಕೊಳ್ಳುತ್ತವೆ. ಇದರಿಂದ ಜನಸಾಮಾನ್ಯರು ಯಾವ ಸ್ಮಾರ್ಟ್‌ಫೋನ್ ಖರೀದಿಸಿಕೊಳ್ಳಬೇಕು ಎನ್ನುವ ಗೊಂದಲಕ್ಕೆ ಸಿಲುಕಿಕೊಳ್ಳುವುದು ಅನಿವಾರ್ಯವಾಗಿದೆ. ಆದರೆ ಪ್ರತಿಯೊಂದು ಸ್ಮಾರ್ಟ್‌ಫೋನ್ ತಯಾರಕ ಬ್ರಾಂಡ್ಗಳಾಗಿರುವ Vivo, iQOO, Pixel ಮತ್ತು Infinix ತಮ್ಮ ಮುಂಬರಲಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಲೇಟೆಸ್ಟ್ ಫೀಚರ್ಗಳನ್ನು ತುಂಬಿಕೊಂಡು ಮಾರುಕಟ್ಟೆಗೆ ತರಲು ಸಜ್ಜಾಗಿವೆ. ಪ್ರಸ್ತುತ ಇವುಗಳ ಸೋರಿಕೆಯಾಗಿರುವ ಬೆಲೆ ಮತ್ತು ಫೀಚರ್ಗಳೊಂದಿಗೆ ಇವುಗಳ ಬಿಡುಗಡೆಯ ದಿನಾಂಕವನ್ನು ಈ ಕೆಳಗೆ ನೀಡಲಾಗಿದೆ. ಮಾಹಿತಿ ಇಷ್ಟವಾದರೆ ತಿಳಿಯದಿಲ್ಲದವರೊಂದಿಗೆ ಹಂಚಿಕೊಳ್ಳಿ.
Also Read: Myntra ಮಹಾ ಮಾರಾಟ! ಕೇವಲ 1000 ರೂಗಳಿಗೆ boAt, Noise ಮತ್ತು Boult ಬ್ರಾಂಡೆಡ್ ಇಯರ್ಬಡ್ಸ್ ಸೇಲ್!
ವಿವೋ ತನ್ನ ಮುಂಬರಲಿರುವ Vivo V40 Series ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯ ದಿನಾಂಕವನ್ನು ಈಗ ಅಧಿಕೃತವಾಗಿ ಘೋಷಿಸಿದ್ದಾರೆ. ಕಂಪನಿ ಈ ಸರಣಿಯಲ್ಲಿ ಪ್ರಸ್ತುತ Vivo V40 ಮತ್ತು Vivo V40 Pro ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಲಿದೆ. Vivo V40 Series ಸ್ಮಾರ್ಟ್‌ಫೋನ್‌ಗಳನ್ನು 7ನೇ ಆಗಸ್ಟ್ 2024 ರಂದು ಮಧ್ಯಾಹ್ನ 12:00 ಗಂಟೆಗೆ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಲಿದೆ. ಇದರ ಬಗ್ಗೆ ಕಂಪನಿ ಈಗಾಗಲೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನು ಅಪ್ಡೇಟ್ ಸಹ ಮಾಡಿದೆ.
ಹಲವು ಟೀಸರ್‌ಗಳ ನಂತರ iQOO ಕಂಪನಿ ತನ್ನ ಮುಂಬರಲಿರುವ iQOO Z9s ಸರಣಿಯ ಸ್ಮಾರ್ಟ್ಫೋನ್ಗಳನ್ನು ಭಾರತದಲ್ಲಿ ಬಿಳ್ಡುಗಡೆಗೊಳಿಸುವ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಅಲ್ಲದೆ ಇದರ ಬಗ್ಗೆ iQOO ಕಂಪನಿಯ ಇಂಡಿಯಾದ CEO ಆಗಿರುವ ನಿಪುನ್ ಮರಿಯಾ (Nipun Marya – iQOO) ಅಧಿಕೃತ ಹೇಳಿಕೆಯಲ್ಲಿ ಇದೆ 21ನೇ ಆಗಸ್ಟ್ 2024 ರಂದು ಬಿಡುಗಡೆಗೊಳಿಸುವುದಾಗಿ ಹಂಚಿಕೊಂಡಿದ್ದಾರೆ. ಅಲ್ಲದೆ ಈ iQOO Z9s ಸರಣಿಯ ಸ್ಮಾರ್ಟ್ಫೋನ್ಗಳು ಕರ್ವ್ AMOLED ಡಿಸ್ಪ್ಲೇಯೊಂದಿಗೆ ಸಾಕಷ್ಟು ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬಿಡುಗಡೆಯಾಗುವುದಾಗಿ ತಿಳಿಸಿದ್ದಾರೆ.
ಅತಿ ಹೆಚ್ಚು ನಿರೀಕ್ಷೆಯಲ್ಲಿರುವ ಗೂಗಲ್ ಕಂಪನಿಯ ಮುಂಬರಲಿರುವ ಸ್ಮಾರ್ಟ್ಫೋನ್ ಬಗ್ಗೆ ಈಗಾಗಲೇ ಇಂಟರ್ನೆಟ್‌ನಲ್ಲಿ ಹಲವಾರು ಮಾತುಗಳು ಹರಿದಾಡುತ್ತಿವೆ. ಇದರ ಹಿನ್ನಲೆಯಲ್ಲಿ ಕಂಪನಿ ತನ್ನ Pixel 9 Series ಸ್ಮಾರ್ಟ್ಫೋನ್ ಬಿಡುಗಡೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದೆ. ಇದರಲ್ಲಿ ಒಟ್ಟಾರೆಯಾಗಿ Pixel 9, Pixel 9 Pro ಮತ್ತು Pixel 9 Pro Fold ಎಂಬ ಮೂರು ಫೋನ್ಗಳು ಬಿಡುಗಡೆಯಾಗಲಿವೆ. ವಿಶೇಷವಾಗಿ Gemini era ಮತ್ತು ಸ್ಮಾರ್ಟ್ಫೋನ್ ಸ್ವಿಚ್ ಆಫ್ ಆದ ನಂತರವೂ ಹುಡುಕಬಹುದು. ಅಲ್ಲದೆ Live Translate ಮತ್ತು Audio Magic Eraser ಫೀಚರ್ಗಳೊಂದಿಗೆ 12GB RAM ಅನ್ನು ಹೊಂದಿರುವುದಾಗಿ ಪ್ರಸ್ತುತ ಹೊಂದಿದೆ. ಕಂಪನಿ 14ನೇ ಆಗಸ್ಟ್ 2024 ರಂದು ಬಿಡುಗಡೆಗೊಳಿಸುವುದಾಗಿ ಹಂಚಿಕೊಂಡಿದ್ದಾರೆ.
Infinix ತನ್ನ ಮುಂಬರಲಿರುವ Infinix Note 40x 5G ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯ ದಿನಾಂಕವನ್ನು ಈಗ ಅಧಿಕೃತವಾಗಿ ಘೋಷಿಸಿದ್ದಾರೆ. Infinix Note 40x 5G ಸ್ಮಾರ್ಟ್‌ಫೋನ್‌ಗಳನ್ನು 5ನೇ ಆಗಸ್ಟ್ 2024 ರಂದು ಮಧ್ಯಾಹ್ನ 12:00 ಗಂಟೆಗೆ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಲಿದೆ. ಇದರಲ್ಲಿ ವಿಶೇಷವಾಗಿ MediaTek Dimensity 6300 ಪ್ರೊಸೆಸರ್ನೊಂದಿಗೆ 12GB RAM ಅನ್ನು ಹೊಂದಿದೆ. ಅಲ್ಲದೆ ಇದರಲ್ಲಿ 108MP ಪ್ರೈಮರಿ ಕ್ಯಾಮೆರಾದೊಂದಿಗೆ ಕೇವಲ 15,000 ರೂಗಳಿಗೆ ಬಿಡುಗಡೆಯಾಗುವುದಾಗಿ ನಿರೀಕ್ಷಿಸಲಾಗಿದೆ. ಅಲ್ಲದೆ ಇದರ ಬಗ್ಗೆ ಕಂಪನಿ ಈಗಾಗಲೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನು ಅಪ್ಡೇಟ್ ಸಹ ಮಾಡಿದೆ.