5G Phones: ಇವೇ ನೋಡಿ 15,000 ರೂಗಳಿಗೆ ಬರುವ Realme, POCO, Redmi ಮತ್ತು Vivo ಸ್ಮಾರ್ಟ್‌ಫೋನ್‌ಗಳು!

Updated on 29-Aug-2023
HIGHLIGHTS

ನೀವೊಂದು ಹೊಸ 5G ಸ್ಮಾರ್ಟ್ಫೋನ್ ಅನ್ನು ಕೇವಲ 15,000 ರೂಗಳೊಳಗೆ ಖರೀದಿಸಲು ಯೋಚಿಸುತ್ತಿದ್ದರೆ ಈ ಪಟ್ಟಿ ನಿಮಗಾಗಲಿದೆ

ನಿಮ್ಮ ಬಜೆಟ್ 15000 ರೂಗಳಾಗಿದ್ದರೆ ನೀವು ಈ ಪಟ್ಟಿಯಲ್ಲಿ ನಿಮ್ಮ ಅಗತ್ಯಕ್ಕೆ ಸರಿಹೊಂದುವ 5G ಸ್ಮಾರ್ಟ್ಫೋನ್ ಅನ್ನು ಖರೀದಿಸಬಹುದು.

5G ಸಪೋರ್ಟ್ ಮಾಡುವ Realme, POCO, Redmi, Tecno ಮತ್ತು Vivo ಕಂಪನಿಯ 5 ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ

ನೀವೊಂದು ಹೊಸ 5G ಸ್ಮಾರ್ಟ್ಫೋನ್ ಅನ್ನು ಕೇವಲ 15,000 ರೂಗಳೊಳಗೆ ಖರೀದಿಸಲು ಯೋಚಿಸುತ್ತಿದ್ದರೆ ಈ ಪಟ್ಟಿ ನಿಮಗಾಗಲಿದೆ. ಏಕೆಂದರೆ ಲೇಟೆಸ್ಟ್ ಟೆಕ್ನಾಲಜಿಯ ಫೀಚರ್‌ಗಳೊಂದಿಗೆ ನಿಮ್ಮ ಕೈಗೆಟಕುವ ಬೆಲೆಗೆ 5G ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಎಲ್ಲರಿಗೂ ಇವುಗಳ ಇದರ ಬಗ್ಗೆ ತಿಳುವಳಿಗೆ ಇರೋದಿಲ್ಲ. ಸ್ನೇಹಿತರೇ ನೆನಪಿಟ್ಟುಕೊಳ್ಳಿ ಯಾವುದೇ ಫೋನ್ ಖರೀದಿಸುವ ಮುಂಚೆ ನಿಮಗೆ ಅದರಲ್ಲಿನ ಅಗತ್ಯವನ್ನು ತಿಳಿಯುವುದು ಅತ್ಯವಶ್ಯಕ. 

ಫೋನ್ ಒಳಗೆ ಕ್ಯಾಮೆರಾ, ಡಿಸ್ಪ್ಲೇ, ಪ್ರೊಸೆಸರ್, ಬ್ಯಾಟರಿ, ಸ್ಟೋರೇಜ್ ಅಥವಾ ಬಿಲ್ಡ್ ಕ್ವಾಲಿಟಿ ಹೀಗೆ ನಿಮ್ಮ ಅವಶ್ಯಕತೆಯನ್ನು ಮೊದಲು ತಿಳಿದುಕೊಳ್ಳಿ. ಈ ಮೂಲಕ 5G ಸಪೋರ್ಟ್ ಮಾಡುವ Realme, POCO, Redmi, Tecno ಮತ್ತು Vivo ಕಂಪನಿಯ 5 ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ. ನಿಮ್ಮ ಬಜೆಟ್ 15000 ರೂಗಳಾಗಿದ್ದರೆ ನೀವು ಈ ಪಟ್ಟಿಯಲ್ಲಿ ನಿಮ್ಮ ಅಗತ್ಯಕ್ಕೆ ಸರಿಹೊಂದುವ 5G ಸ್ಮಾರ್ಟ್ಫೋನ್ ಅನ್ನು ಖರೀದಿಸಬಹುದು.

     

Realme 11x 5G

ರಿಯಲ್‌ಮಿ ಕಂಪನಿಯ ಈ ಲೇಟೆಸ್ಟ್ 5G ಫೋನ್ ಭಾರತದಲ್ಲಿ ಇದೇ ತಿಂಗಳು ಬಿಡುಗಡೆಯಾಗಿದ್ದು 6GB RAM ಮತ್ತು 128GB ಸ್ಟೋರೇಜ್  ಮಾದರಿಯೊಂದಿಗೆ ಕೇವಲ 14,999 ರೂಗಳಿಗೆ ಲಭ್ಯವಿದೆ. ಈ ಫೋನ್ MediaTek Dimensity 6100+ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. Realme 11X 5G ಫೋನ್ 120Hz ರಿಫ್ರೆಶ್ ದರದೊಂದಿಗೆ 6.72 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಸ್ಮಾರ್ಟ್ಫೋನ್ ಉತ್ತಮ ಫೋಟೋಗಳನ್ನು ಪಡೆಯಲು 64MP ಮತ್ತು 8MP ಡ್ಯುಯಲ್ ಕ್ಯಾಮೆರಾವನ್ನು ಹೊಂದಿದೆ ಕೊನೆಯದಾಗಿ 5000mAh ಬ್ಯಾಟರಿಯೊಂದಿಗೆ 33W SuperVooc ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

POCO M6 Pro 5G

ಈ ಪೊಕೋ ಫೋನ್ ಇತ್ತೀಚೆಗೆ ಬಜೆಟ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. Poco M6 Pro 5G ಫೋನ್ ಇದರ ಆರಂಭಿಕ ವೇರಿಯಂಟ್ ಅಂದ್ರೆ 4GB RAM + 64GB ಸ್ಟೋರೇಜ್ ಕೇವಲ 10,999 ರೂಗಳಲ್ಲಿ ಲಭ್ಯವಿದೆ.  ಫೋನ್ Qualcomm Snapdragon 4 Gen 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 6.79 ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ದರದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 50MP+ 2MP ಡ್ಯುಯಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು 18W ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.

Redmi 12 5G

Redmi ಇತ್ತೀಚೆಗೆ ತನ್ನ ಅಗ್ಗದ 5G ಫೋನ್ ಆಗಿ Redmi 12 5G ಅನ್ನು ಬಿಡುಗಡೆ ಮಾಡಿದೆ. ಈ ಫೋನ್ 3 ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಇದರ ಇದರ ಆರಂಭಿಕ ವೇರಿಯಂಟ್ ಅಂದ್ರೆ 4GB RAM + 64GB ಸ್ಟೋರೇಜ್ ಕೇವಲ ₹14,985 ರೂಗಳಲ್ಲಿ ಲಭ್ಯವಿದೆ. Redmi 12 5G ಫೋನ್ ಮಾರುಕಟ್ಟೆಯಲ್ಲಿ Qualcomm Snapdragon 4 Gen 2 ಚಿಪ್‌ಸೆಟ್‌ನಿಂದ ಚಾಲಿತವಾಗಿರುವ ಮೊದಲ ಫೋನ್ ಆಗಿದೆ. 6.79 ಇಂಚಿನ FHD+ ಡಿಸ್ಪ್ಲೇಯನ್ನು ನೀಡುತ್ತದೆ. ಫೋನ್ 8GB ವರ್ಚುವಲ್ RAM ಅನ್ನು ಬೆಂಬಲಿಸುತ್ತದೆ. 50MP ಹಿಂಬದಿಯ ಕ್ಯಾಮೆರಾ ಮತ್ತು 8MP ಸೆನ್ಸರ್ ಹೊಂದಿದೆ. 

Tecno Pova 5 Pro 5G

ಇತ್ತೀಚೆಗೆ ಬಿಡುಗಡೆಯಾದ ಹೊಸ TECNO Pova 5 Pro ಫೋನ್‌ನ ವಿನ್ಯಾಸವು ಹೊಸ ನಥಿಂಗ್ ಫೋನ್ 2 ಅನ್ನು ಹೋಲುತ್ತದೆ. ಕಂಪನಿಯು ಈ ಫೋನ್‌ನ ಹಿಂಭಾಗದಲ್ಲಿ LED ಲೈಟ್ ಅನ್ನು ಸಹ ನೀಡಿದೆ. ಫೋನ್ 6.78 ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. Mediatek Dimensity 6080 ಪ್ರೊಸೆಸರ್‌ನಲ್ಲಿ ಫೋನ್ ಕಾರ್ಯನಿರ್ವಹಿಸುತ್ತದೆ. ಫೋನ್ 50MP ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದಲ್ಲಿ 16MP ಸೆಲ್ಫಿ ಸಂವೇದಕವನ್ನು ಹೊಂದಿದೆ. ಫೋನ್ ಪವರ್ ಬ್ಯಾಕಪ್ ಒದಗಿಸಲು 5000mAh ಬ್ಯಾಟರಿಯೊಂದಿಗೆ 68W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Motorola G62 5G

ಮೋಟೊರೋಲದ ಈ ಲೇಟೆಸ್ಟ್ 5G ಫೋನ್ ಇತ್ತೀಚೆಗೆ ಭಾರತದಲ್ಲಿ ಪರಿಚಯಿಸಲಾಯಿತು ಇದನ್ನು ನೀವು  ಕೇವಲ 14,999 ರೂಗಳಿಗೆ ಖರೀದಿಸಬಹುದು. ಇದರಲ್ಲಿ ನಿಮಗೆ ಫೋನ್ 6.55 ಇಂಚಿನ IPS LCD FHD+ ಡಿಸ್ಪ್ಲೇ ಹೊಂದಿದೆ. ಫೋನ್ Qualcomm Snapdragon 695 5G ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋಟೋಗ್ರಾಫಿಗಾಗಿ ಹಿಂಭಾಗದಲ್ಲಿ 50MP + 8MP + 2MP ಕ್ಯಾಮೆರಾ ಸೆಟಪ್ ಹೊಂದಿದ್ದು ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫೋನ್ ಅನ್ನು ಪವರ್ ಮಾಡುವುದು 5000mAh ಬ್ಯಾಟರಿಯಾಗಿದ್ದು ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :