ಟೆಕ್ನೋ ಮೊಬೈಲ್ ಕಂಪನಿ ಭಾರತದಲ್ಲಿ ಸ್ಮಾರ್ಟ್ಫೋನ್ Tecno Pova 5 Pro ಎಂಬ ಹೊಸ 5G ಸ್ಮಾರ್ಟ್‌ಫೋನ್ ಅನ್ನು ಕೈಗೆಟಕುವ ಬೆಲೆಗೆ ಅತ್ಯಾಧುನಿಕ ಡಿಸೈನ್‌ನೊಂದಿಗೆ ಪರಿಚಯಿಸಿದೆ. ಫೋನ್ ಇತ್ತೀಚಿನ ದಿನಗಳಲ್ಲಿ ಅನೇಕ ಫೋನ್‌ಗಳು ಹೊಂದಿರುವ LED ಲೈಟ್ ಅನ್ನು ಹೊಂದಿದೆ. Tecno Pova 5 Pro 5G ಸ್ಮಾರ್ಟ್ಫೋನ್ ಕೂಲ್ ಡಿಸೈನ್, ದೊಡ್ಡ ಡಿಸ್ಪ್ಲೇ, ಉತ್ತಮ ಪ್ರೊಸೆಸರ್, ಕ್ಯಾಮೆರಾ ಮತ್ತು ಬ್ಯಾಟರಿಯೊಂದಿಗೆ ಇದರ ಬೆಲೆ ಇತರ ಫೋನ್‌ಗಳಿಗಿಂತ ವಿಭಿನ್ನವಾಗಿ ಕಾಣುತ್ತದೆ.
ಈ ಸ್ಮಾರ್ಟ್ಫೋನ್ ಹಿಂಭಾಗದ ಡಿಸೈನ್ ಸಾಕಷ್ಟು ಪ್ರಭಾವಶಾಲಿಯಾಗಿದ್ದು ಈ ಬೆಲೆ ಶ್ರೇಣಿಯಲ್ಲಿ ಇತರ ಫೋನ್‌ಗಳಿಂದ ಇದನ್ನು ಪ್ರತ್ಯೇಕಿಸುತ್ತದೆ. ಫೋನ್‌ನ ಹಿಂಭಾಗದಲ್ಲಿ ನಾಲ್ಕು LED ಪಟ್ಟಿಗಳನ್ನು ಹೊಂದಿದೆ. ಅವುಗಳಲ್ಲಿ ಮೂರು ಒಟ್ಟಿಗೆ ಜೋಡಿಸಲ್ಪಟ್ಟಿದ್ದು ತಂಪಾದ ತ್ರಿಕೋನ ಮಾದರಿಯನ್ನು ರೂಪಿಸುತ್ತವೆ. ಈ ವಿಶಿಷ್ಟ ಡಿಸೈನ್ ಫೋನ್‌ಗೆ ಉತ್ತಮ ಸೌಂದರ್ಯದ ಸ್ಪರ್ಶದೊಂದಿಗೆ ಭವಿಷ್ಯದ ನೋಟವನ್ನು ನೀಡುತ್ತದೆ. ಹೆಚ್ಚುವರಿಯಾಗಿ ಯಾಂತ್ರಿಕ ವಿನ್ಯಾಸವನ್ನು ಸೇರಿಸುವ ಕಾಯಿಲ್-ಶೈಲಿಯ ಅಲಂಕಾರವಿದೆ.
ಈ Tecno Pova 5 Pro 5G ಸ್ಮಾರ್ಟ್ಫೋನ್ ನಿಜಕ್ಕೂ ಭಾರಿ ದೊಡ್ಡ ಅಂದ್ರೆ 6.78 ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದ್ದು ಅದು 120Hz ರಿಫ್ರೆಶ್ ರೇಟ್ ಜೊತೆಗೆ ಮತ್ತು ಪೂರ್ತಿ HD+ ರೆಸಲ್ಯೂಶನ್ ಅನ್ನು ಹೊಂದಿದೆ. ಫೋನ್‌ನೊಂದಿಗಿನ ಅಲ್ಪಾವಧಿಯಲ್ಲಿ ಡಿಸ್ಪ್ಲೇ ಒಳಾಂಗಣ ಬಳಕೆಗೆ ಸಾಕಷ್ಟು ಹೊಳಪನ್ನು ನೀಡುತ್ತದೆ. ಆದರೆ ಹಗಲು ಹೊತ್ತಿನಲ್ಲಿ ಅದರಲ್ಲೂ ಹೊರಗಡೆ ಸೂರ್ಯನ ಕಿರಣಗಳ ಅಡಿಯಲ್ಲಿ ಈ ಸ್ಮಾರ್ಟ್ಫೋನ್ ಬಳಸಿದಾಗ ಅಷ್ಟು ಸುಲಭವಾಗಿ ಡಿಸ್ಪ್ಲೇಯಲ್ಲಿ ಏನನ್ನು ಓದಲು ಅಥವಾ ನೋಡಲು ಸಾಧ್ಯವಾವಾಗೋದಿಲ್ಲ.
ಈ ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 5G ಪ್ರೊಸೆಸರ್ ಮೂಲಕ ಚಾಲಿತವಾಗಿದೆ. ಇದು ಹೆಚ್ಚಿನ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಗೇಮಿಂಗ್ ಆಡುವವರಿಗೆ ನಿಜಕ್ಕೂ ಉತ್ತಮ ಆಯ್ಕೆಯಾಗಿಯೇ ಏಕೆಂದರೆ ಇದರ ಸೆಟ್ಟಿಂಗ್‌ಗಳಲ್ಲಿ ಸರಾಗವಾಗಿ ಕಾರ್ಯನಿರ್ವಹಿಸುತ್ತದೆ. Tecno Pova 5 Pro ಒಟ್ಟಾರೆಯಾಗಿ ಎರಡು ಸ್ಟೋರೇಜ್ 128GB ಮತ್ತು 256GB ರೂಪಾಂತರಗಳಲ್ಲಿ ಲಭ್ಯವಿದ್ದು ಕೇವಲ ಒಂದೇ ಮೆಮೊರಿ 8GB RAM ಜೊತೆಗೆ ಲಭ್ಯವಿದೆ.
ಈ ಫೋನ್‌ನ ಹಿಂಭಾಗದಲ್ಲಿ ನಿಮಗೆ ಡುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು ಪ್ರೈಮರಿ ವೈಡ್ ಕ್ಯಾಮೆರಾ 50MP ಸೆನ್ಸರ್ ಜೊತೆಗೆ 0.8MP ಡೆಪ್ತ್ ಸೆನ್ಸರ್ ಅನ್ನು ಫೋನ್ ಹೊಂದಿದೆ. ಇದರ ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾವನ್ನು ಇರಿಸಲಾಗಿದ್ದು ಇದು ನಿಖರವಾದ ಬಣ್ಣಗಳೊಂದಿಗೆ ತಕ್ಕಮಟ್ಟಿಗೆ ಯೋಗ್ಯವಾದ ಅದರಲ್ಲೂ ವಿಶೇಷವಾಗಿ ಉಟ್ಟ,ಮ ಲೈಟ್ ಪರಿಸ್ಥಿತಿಗಳಿಗೆ ಹೊಂದಿಕೆಯಾಗಿ ಉತ್ತಮ ಫೋಟೋಗಳನ್ನು ಸೆರೆಹಿಡಿಯುತ್ತದೆ.
ಈ ಸ್ಮಾರ್ಟ್ಫೋನ್ ಒಳಗೆ ನಿಮಗೆ ದೊಡ್ಡದಾದ 5000mAh ಬ್ಯಾಟರಿಯೊಂದಿಗೆ ಬರುತ್ತದೆ. ಇದರ ಪವರ್ ಅಥವಾ ಚಾರ್ಜ್ ಖಾಲಿಯಾಗುವ ಚಿಂತೆಯಿಲ್ಲದೆ ನೀವು ಅನ್ಲಿಮಿಟೆಡ್ ಗೇಮಿಂಗ್ ಮತ್ತು ಮನರಂಜನಾ ಅವಧಿಗಳ ಅನುಭವವನ್ನು ಖಾತರಿಪಡಿಸುತ್ತದೆ. ಇದರಲ್ಲಿ 68W ವ್ಯಾಟ್ ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಸ್ಮಾರ್ಟ್ಫೋನ್ ಹೊಂದಿದೆ.
ಕೊನೆಯದಾಗಿ ಈ ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ಮಾತನಾಡುವುದಾದರೆ ಈ ಫೋನ್ 8GB RAM ಮತ್ತು 128GB ಸ್ಟೋರೇಜ್ ನಿಮಗೆ 14,999 ರೂಗಳಿಗೆ ಬಂದ್ರೆ ಇದರ ಕ್ರಮವಾಗಿ ಮತ್ತೊಂದು ವೇರಿಯಂಟ್ 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್ 15,999 ರೂಗಳಿಗೆ ಲಭ್ಯವಾಗಲಿದೆ. ಇದರ ಮೊದಲ ಮಾರಾಟ ನಾಳೆ ಅಂದ್ರೆ 22ನೇ ಆಗಸ್ಟ್ 2023 ರಂದು ಟೆಕ್ನೋ ವೆಬ್ಸೈಟ್ ಮತ್ತು ಅಮೆಜಾನ್ ಇಂಡಿಯಾದಲ್ಲಿ ಆಸಕ್ತರು ಖರೀದಿಸಬಹುದು.