ಕಳೆದ ವಾರ ಭಾರತದಲ್ಲಿ Xiaomi ತನ್ನೇರಡು ಹೊಸ ನೋಪಿತೇ ಸರಣಿಯ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಿದೆ. ಅವೆಂದರೆ Xiaomi Redmi Note 9 Pro ಮತ್ತು Redmi Note 9 Pro Max ಸ್ಮಾರ್ಟ್ಫೋನ್ಗಳು. ಇವೇರಡು ಸ್ಮಾರ್ಟ್ಫೋನ್ಗಳು ಒಂದೇ ರೀತಿಯ ಹಲವಾರು ವಿಶೇಷಣಗಳೊಂದಿಗೆ ಬರುತ್ತವೆ. ಅಂದ್ರೆ Snapdragon 720G ಚಿಪ್‌ಸೆಟ್, ನ್ಯಾವಿಕ್ ಸಪೋರ್ಟ್ ಜೊತೆಗೆ 5020mAh ಬ್ಯಾಟರಿಯೊಂದಿಗೆ 6.67 ಇಂಚಿನ ಡಿಸ್ಪ್ಲೇ 16: 9 ಸ್ಕ್ರೀನ್ ಟು ಬಾಡಿ ರೇಷು ಮತ್ತು ಹೌರ ಬ್ಯಾಲೆನ್ಸ್ ಡಿಸೈನ್ ಹಾಗು P2i ಧೂಳು ಮತ್ತು ನೀರಿನ ಪ್ರೊಫ್ ಆಗಿವೆ. ಆದ್ದರಿಂದ ಈ Xiaomi Redmi Note 9 Pro ಸ್ಮಾರ್ಟ್ಫೋನ್ ಬಗ್ಗೆ ನೀವು ತಿಳಿಯಲೇಬೇಕಾದ 5 ಫೀಚರ್ಗಳನ್ನು ತಿಳಿಸಲಿದ್ದೇನೆ.
ಈ Xiaomi Redmi Note 9 Pro ಸ್ಮಾರ್ಟ್ಫೋನ್ 6.67 ಇಂಚಿನ FDH+ LCD ಟಚ್‌ಸ್ಕ್ರೀನ್ ಡಾಟ್ ನಾಚ್ ಡಿಸ್ಪ್ಲೇಯೊಂದಿಗೆ 1080×2400 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 20: 9 ಕಾಸ್ಮಾಟಿಕ್ ಸ್ಕ್ರೀನ್ ಜೊತೆಗೆ ಬರುತ್ತದೆ. ಅಲ್ಲದೆ ಈ ಸ್ಮಾರ್ಟ್ಫೋನಿನ ಪ್ರೊಟೆಕ್ಷನ್ಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ಸಹ ಇದರಲ್ಲಿ ನೀಡಲಾಗಿದೆ. ಇದು ಪಂಚ್ ಹೋಲ್ ಡಾಟ್ ನಾಚ್ ಹೊಂದಿದ್ದು ನಿಮಗೆ ಫುಲ್ ವ್ಯೂ ಡಿಸ್ಪ್ಲೇಯನ್ನು ನೋಡಲು ಅನುವು ಮಾಡಿಕೊಡುತ್ತದೆ. ಡಿಸ್ಪ್ಲೇಯ ಕಲರ್ ಸಾಕಾಗುವಷ್ಟು ಕಲರ್ ಫುಲ್ ಆಗಿದ್ದು ಆದರೆ ಸೂರ್ಯನ ಬೆಳಕಿನಲ್ಲಿ ಡಿಸ್ಪ್ಲೇಯ ಬ್ರೈಟ್ನೆಸ್ ಬೇಕಾಗುವಷ್ಟು ನೋಡಲು ಸಿಗೋದಿಲ್ಲ. ಅಂದ್ರೆ ಈ ಸ್ಮಾರ್ಟ್ಫೋನ್ ಒಳಾಂಗಣದಲ್ಲಿ ಮಾತ್ರ ಸೂಕ್ತವಾಗಿದೆ.
ಮೊದಲಿಗೆ ಈ ಸ್ಮಾರ್ಟ್ಫೋನ್ ಕ್ವಾಡ್ ಕ್ಯಾಮೆರಾ ಸೆಟಪ್ ಜೊತೆಗೆ ಬರುತ್ತದೆ. ಅದ್ರ ಪ್ರೈಮರಿ ಕ್ಯಾಮೆರಾ 48MP ಹೊಂದಿದ್ದು f/1.8 ಅಪರ್ಚರ್ ಜೊತೆಗೆ ವೈಡ್ ಆಂಗಲ್ ಸಪೋರ್ಟ್ ಮಾಡುತ್ತದೆ. ಇದರ ನಂತರ ಎರಡನೇಯದಾಗಿ 8MP ಇದು f/2.2 ಅಪರ್ಚರ್ ಜೊತೆಗೆ ಅಲ್ಟ್ರಾ ವೈಡ್ ಆಗಿದ್ದು ಮೂರನೇಯದಾಗಿ 5MP ಸೆನ್ಸರ್ f/2.4 ಅಪರ್ಚರ್ ಜೊತೆಗೆ ಮ್ಯಾಕ್ರೋ ಲೆನ್ಸ್ ಒಳಗೊಂಡಿದ್ದು ಕೊನೆಯದಾಗಿ 2MP ಸೆನ್ಸರ್ f/2.4 ಅಪರ್ಚರ್ ಒಳಗೊಂಡಿದೆ. ಇದರ ಕ್ರಮವಾಗಿ ಈ ಸ್ಮಾರ್ಟ್ಫೋನಿನ ಫ್ರಂಟ್ ನೋಡುವುದಾದರೆ 16MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು ಫ್ರಂಟ್ ವೈಡ್ ಆಂಗಲ್ ಅನ್ನು ಸಪೋರ್ಟ್ ಮಾಡುತ್ತದೆ. ಈ ಸ್ಮಾರ್ಟ್ಫೋನಿನ ಕ್ಯಾಮೆರಾ ಸ್ಯಾಂಪಲ್ಗಳನ್ನು ನೋಡಬೇಕೆಂದರೆ ಒಮ್ಮೆ @digitkannada ಇನ್ಸ್ಟಾಗ್ರಾಮ್ ಪೇಜ್ ಭೇಟಿ ನೀಡಿ.
ಈ Xiaomi Redmi Note 9 Pro ಸ್ಮಾರ್ಟ್ಫೋನ್ Qualcomm Snapdragon 720G ಚಿಪ್ ಜೊತೆಗೆ 8nm ನಾನೋ ಮೀಟರ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದು ಓಕ್ಟಾ ಕೋರ್ 2.3GHz ಕ್ಲಾಕ್ ಸ್ಪೀಡ್ ನೀಡುವುದರ ಮೂಲಕ ಗೇಮರ್ಗಳಿಗೆ ಮತ್ತಷ್ಟು ಫಾಸ್ಟ್ ಪರ್ಫಾರ್ಮೆನ್ಸ್ ನೀಡುತ್ತದೆ. ಈ ಸ್ಮಾರ್ಟ್ಫೋನಿನ GPU ನೋಡುವುದಾದರೆ ಅಡ್ರಿನೊ 618 ಒಳಗೊಂಡಿದೆ. ನಂತರ ಇದು ಆಂಡ್ರಾಯ್ಡ್ 10 ಜೊತೆಗೆ ತಮ್ಮದೇಯಾದ MIUI 11 ಸಪೋರ್ಟ್ ಮಾಡುತ್ತದೆ. ಈ ಸ್ಮಾರ್ಟ್ಫೋನ್ 4/6GB LPDDR4x RAM ಒಳಗೊಂಡಿದ್ದು ಇದರ ಕ್ರಮವಾಗಿ 64/128GB UFS 2.1 ಸ್ಟೋರೇಜ್ ಒಳಗೊಂಡಿದೆ.
ಈಗ ಈ ಫೋನಿನ ಬ್ಯಾಟರಿ ಬಗ್ಗೆ ನೋಡುವುದಾದರೆ ಇದರಲ್ಲಿ ನಿಮಗೆ ಪೂರ್ತಿ ದಿನ ಬಾಳಿಕೆ ಬರುವ ದೊಡ್ಡದಾದ 5020mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದರೊಂದಿಗೆ ಕಂಪನಿ 18w ಸಪೋರ್ಟ್ ಮಾಡುವ ಟೆಕ್ನಾಲಜಿಯನ್ನು ಸಹ ಅಳವಡಿಸಿದೆ ಈ ಮೂಲಕ ನಿಮಗೆ ಈ ಫೋನಿನ ಬ್ಯಾಟರಿ ಬಗ್ಗೆ ಯಾವುದೇ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಅಲ್ಲದೆ ತಮ್ಮ ಗ್ರಾಹಕರನ್ನು ಮತ್ತಷ್ಟು ಖುಷಿ ನೀಡಲು ಕಂಪನಿ ಬಾಕ್ಸ್ ಒಳಗೆಯೇ ಈ 18w ಸಪೋರ್ಟ್ ಮಾಡುವ ಚಾರ್ಜರ್ ಅನ್ನು ಸಹ ನೀಡುತ್ತಿದೆ. ಇದರ ಕ್ರಮವಾಗಿ ಟೈಪ್ ಸಿ ಪೋರ್ಟ್ ಜೊತೆಗೆ 3.5mm ಆಡಿಯೋ ಜಾಕ್ ಮತ್ತು ಫೋನ್ ಸೈಡ್ ಫಿಂಗರ್ಪ್ರಿಂಟ್ ಸೆನ್ಸರ್ ಒಳಗೊಂಡಿದೆ.
ಈ ಸ್ಮಾರ್ಟ್ಫೋನ್ 4GB RAM ಮತ್ತು 64GB ಸ್ಟೋರೇಜ್ ವೆರಿಯಂಟ್ 12,999 ರೂಗಳಿಂದ ಶುರುವಾಗುತ್ತದೆ. ಇದರ ಕ್ರಮವಾಗಿ ಈ ಸ್ಮಾರ್ಟ್ಫೋನ್ ಮತ್ತೊಂದು 6GB RAM ಮತ್ತು 128GB ಸ್ಟೋರೇಜ್ ವೆರಿಯಂಟ್ 15,999 ರೂಗಳಲ್ಲಿ ಲಭ್ಯವಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ 17ನೇ ಮಾರ್ಚ್ 2020 ರಂದು amazon.in | mi.com ಮೂಲಕ ಮಧ್ಯಾಹ್ನ 12:00pm ಕ್ಕೆ ಮೊದಲ ಸೇಲ್ ಶುರುವಾಗಲಿದೆ. ಈ ಸ್ಮಾರ್ಟ್ಫೋನಿನ #unboxing ವಿಡಿಯೋ ನೋಡಬೇಕಂದರೆ DigitKannada ಯುಟ್ಯೂಬ್ ಚಾನಲ್ ಒಮ್ಮೆ ಭೇಟಿ ನೀಡಿ. ಒಂದು ವೇಳೆ ನೀವು ಇದನ್ನು ಖರೀದಿಸ ಬಯಸಿದರೆ ನಿಮ್ಮ ನೆಚ್ಚಿನ ಫೀಚರ್ ಅನ್ನು ಕಮೆಂಟ್ ಮಾಡಿ ತಿಳಿಸಿ.