ಭಾರತದಲ್ಲಿ ಸೋಶಿಯಲ್ ಮೀಡಿಯಾ ಜಗತ್ತು ಅಗತ್ಯಕ್ಕಿಂತ ಹೆಚ್ಚಾಗಿಯೇ ಹರಡಿಕೊಂಡಿರುವ ವಿಷಯ ನಿಮಗೆ ಈಗಾಗಲೇ ತಿಳಿದಿದೆ. ಅಲ್ಲದೆ ಸೆಲ್ಫಿ, ವಿಡಿಯೋ, ಸುಂದರವಾದ ವಸ್ತುಗಳ, ಸ್ಥಳಗಳ ಅಥವಾ ತಾವೇ ತಯಾರಿಸಲಾದ ಅಂಶಗಳನ್ನು ಉತ್ತಮವಾಗಿ ಪ್ರದರ್ಶಿಸಲು ಪ್ರತಿಯೊಬ್ಬರೂ ಆತುರರಾಗಿರುತ್ತಾರೆ. ಆದ್ದರಿಂದ ಇತ್ತೀಚಿನ ಫೋನ್‌ಗಳು ನಂಬಲಾಗದಷ್ಟು ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾಗಳನ್ನು ಹೊಂದಿವೆ. ಈಗಾಗಲೇ ಬಿಡುಗಡೆಯಾಗಿರುವ Realme, Redmi, Infinix, Motorola ಮತ್ತು Samsung ಫೋನ್‌ಗಳು 200MP ಕ್ಯಾಮೆರಾ ಸೆನ್ಸರ್‌ಗಳಲ್ಲಿ ನಂಬಲಾಗದಷ್ಟು ಕ್ಲಿಯರ್ ಮತ್ತು ಸೂಕ್ಷ್ಮ ಫೋಟೋಗಳನ್ನು ಸೆರೆಹಿಡಿಯುತ್ತವೆ. ಆದ್ದರಿಂದ ನೀವು ಅದ್ಭುತ ಕ್ಯಾಮೆರಾ ಹೊಂದಿರುವ ಫೋನ್‌ಗಾಗಿ ಹುಡುಕುತ್ತಿದ್ದರೆ ನೀವು ಈ 200MP ಕ್ಯಾಮೆರಾಗಳ ಪಟ್ಟಿಯನ್ನು ಒಮ್ಮೆ ಪರಿಶೀಲಿಸಬಹುದು.
ಈ ಸ್ಮಾರ್ಟ್ಫೋನ್ ಸದ್ಯದ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಏಕೆಂದರೆ 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸೆನ್ಸರ್ ಜೊತೆಗೆ 200MP ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ನಿಮಗೆ Samsung ISOCELL HP3 SuperZoom ಸೆನ್ಸರ್ ಅನ್ನು ಒಳಗೊಂಡಿದೆ. ಇದರ ಸೆನ್ಸರ್ ನಿಜಕ್ಕೂ ಅತ್ಯುತ್ತಮವಾಗಿದ್ದು ಈ ಬಜೆಟ್ ಒಳಗೆ ನಿಮಗೊಂದು ಉತ್ತಮ ಕ್ಯಾಮೆರಾ ಫೋನ್ ಬೇಕಿದ್ದರೆ ಇದನ್ನು ಪರಿಗಣಿಸಬಹುದು. ನಿಮಗೆ ಸೆಲ್ಫಿಗಾಗಿ 32MP ಮುಂಭಾಗದ ಫ್ರಂಟ್ ಕ್ಯಾಮೆರಾವನ್ನು ಸಹ ಒದಗಿಸಲಾಗಿದೆ.
ಈ ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಡಿಸೈನ್ ನೋಡುವುದಾದರೆ ಇದರಲ್ಲಿ 8MP ಅಲ್ಟ್ರಾ-ವೈಡ್ ಮತ್ತು 2MP ಮ್ಯಾಕ್ರೋ ಶೂಟರ್‌ನೊಂದಿಗೆ 200MP ಕ್ಯಾಮೆರಾವನ್ನು Samsung ISOCELL HPX ಸೆನ್ಸರ್ ಜೊತೆಗೆ ಒಳಗೊಂಡಿದೆ. ಅಲ್ಲದೆ Redmi Note 12 Pro+ 5G ಸ್ಮಾರ್ಟ್ಫೋನ್ ನಿಮಗೆ ಸೆಲ್ಫಿಗಾಗಿ 16MP ಮುಂಭಾಗದ ಫ್ರಂಟ್ ಕ್ಯಾಮೆರಾವನ್ನು ಸಹ ಒದಗಿಸಲಾಗಿದೆ.
ಇನ್ಫಿನಿಕ್ಸ್ ಕಂಪನಿ ತನ್ನ ಈವರೆಗಿನ ಅತ್ಯುತ್ತಮ ಟ್ರಿಪಲ್ ಕ್ಯಾಮೆರಾ ಸ್ಮಾರ್ಟ್ಫೋನ್ Infinix Zero Ultra ಒಳಗೆ ನಿಮಗೆ 200MP ಪ್ರೈಮರಿ ಕ್ಯಾಮೆರಾವನ್ನು ಉತ್ತಮ Samsung ISOCELL HP1 ಸೆನ್ಸರ್ ಜೊತೆಗೆ ನೀಡಿದೆ. ಇದರ ಕ್ರಮವಾಗಿ 13-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಮತ್ತು 2-ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿರುವ ಈ ಸ್ಮಾರ್ಟ್ಫೋನ್ ನಿಮಗೆ ಡೇ ಮತ್ತು ನೈಟ್ ಸಮಯದಲ್ಲಿ ಅತ್ಯುತ್ತಮ ಫೋಟೋಗಳನ್ನು ನೀಡುತ್ತದೆ. ಆದರೆ ಈಗ ಭಾರತದಲ್ಲಿ ಇದಕ್ಕಿಂದ ಕಡಿಮೆ ಬೆಲೆಯಲ್ಲಿ ಮತ್ತಷ್ಟು ಉತ್ತಮ ಫೋನ್ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ.
ಅತಿ ಹಳೆಯ ಮತ್ತು ಹೆಚ್ಚು ಭರವಸೆಯ ಬ್ರಾಂಡ್ ಮೋಟೊರೋಲ ತನ್ನ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ನಿಮಗೆ 200MP ಪ್ರೈಮರಿ ಕ್ಯಾಮೆರಾವನ್ನು Samsung ISOCELL HP1 ಸೆನ್ಸರ್ ಜೊತೆಗೆ ನೀಡಿದೆ. ಇದರ ಕ್ರಮವಾಗಿ 50MP ಸ್ಯಾಮ್‌ಸಂಗ್ GN5 ಅಲ್ಟ್ರಾ-ವೈಡ್ ಸೆನ್ಸರ್ ಮತ್ತು 12MP ಸೋನಿ ಡೆಪ್ತ್ ಶೂಟರ್ ಕೂಡ 2X ಟೆಲಿಫೋಟೋ ಮಾಡಬಲ್ಲದು. ಅಂತಿಮವಾಗಿ, ಪಂಚ್-ಹೋಲ್ ಅಪ್ ಟಾಪ್‌ನಲ್ಲಿ 60MP ಸೆಲ್ಫಿ ಕ್ಯಾಮೆರಾವನ್ನು ಇರಿಸಲಾಗಿದೆ.
ಇದರ ಪ್ರೈಮರಿ ಕ್ಯಾಮೆರಾಕ್ಕಾಗಿ ಹೊಸ Samsung ತನ್ನದೇಯಾದ 200MP ಸೆನ್ಸರ್ ಅನ್ನು ನೀಡಿದ್ದು ಜೊತೆಗೆ 12MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಎರಡು 10MP ಟೆಲಿಫೋಟೋ ಕ್ಯಾಮೆರಾ (3x ಮತ್ತು 10x ಜೂಮ್) ಹೊಂದಿದೆ. ಇದರ ಮುಂಭಾಗದಲ್ಲಿ ಸೆಲ್ಫಿಗಾಗಿ ಕ್ಯಾಮರಾ 12MP ಆಗಿದೆ. ಇದರಲ್ಲೂ ಸಹ ಅದೇ Samsung ISOCELL HP2 ಸೆನ್ಸರ್ ಅನ್ನು ನೀಡಲಾಗಿದ್ದು ಇದರಲ್ಲಿನ ಪ್ರೈಮರಿ ಕ್ಯಾಮೆರಾ 200MP ಕ್ಯಾಮೆರಾ ಸೆನ್ಸರ್‌ಗಳಲ್ಲಿ ನಂಬಲಾಗದಷ್ಟು ಕ್ಲಿಯರ್ ಮತ್ತು ಸೂಕ್ಷ್ಮ ಫೋಟೋಗಳನ್ನು ಸೆರೆಹಿಡಿಯುತ್ತವೆ. ಈ ಪಟ್ಟಿಯಲ್ಲಿ ಇಲ್ಲದ 200MP ಕ್ಯಾಮೆರಾ ಹೊಂದಿರುವ ಸ್ಮಾರ್ಟ್ಫೋನ್ ಬಗ್ಗೆ ನಿಮಗೆ ತಿಳಿದಿದ್ದರೆ ಕಮೆಂಟ್ ಮಾಡಿ ತಿಳಿಸಿ.