ಇಂದಿನ ದಿನಗಳಲ್ಲಿ ಪ್ರತಿ ಬಳಕೆದಾರರ ಅವಿಭಾಜ್ಯ ಅಂಗವಾಗಿಯೇ ಮೊಬೈಲ್ ಫೋನ್ (Mobile Phones) ಆಗಿದೆ. ಅದರಂತೆ ಫೋನ್ ಮಾರುಕಟ್ಟೆಯಲ್ಲಿ ಕೆಲವರಂತು ಯಾವುದೇ ರೀತಿಯ ಹೊಸ ಮೊಬೈಲ್ ಫೋನ್ ಬಂದರೂ ಸಹ ಅದಕ್ಕೆ ಅಪ್‌ಗ್ರೇಡ್ ಮಾಡಲು ಹೊಸ ಫೀಚರ್ಗಳನ್ನು ಪರಿಶಿಸಲು ಕಾಯುತ್ತಿರುತ್ತಾರೆ. ಜೊತೆಗೆ ಆಂಡ್ರಾಯ್ಡ್ ಹೋಲಿಸಿದರೆ ಐಫೋನ್ ಹೆಚ್ಚು ಸುರಕ್ಷತೆಯನ್ನು ಹೊಂದಿರುವುದು ಪ್ರತಿಯೊಬ್ಬರಿಗೂ ತಿಳಿದಿರುವ ಮನೆ ಮಾತಾಗಿದೆ.
ಜಾಗತಿಕವಾಗಿ ಅತಿ ಹೆಚ್ಚು ಬಳಕೆಯಲ್ಲಿರುವ ಮತ್ತು ಮಾರಾಟವಾಗಿರುವ iPhone, Samsung, Xiaomi, OnePlus ನಂತಹ ಹಲವಾರು ರೀತಿಯ ಫೋನ್ ಬ್ರಾಂಡ್ಗಳಿವೆ. ಆದರೆ ಪ್ರಸ್ತುತ ಜಗತ್ತಿನಲ್ಲಿ 10 ಅತ್ಯಂತ ಜನಪ್ರಿಯ ಫೋನ್‌ಗಳು (Popular Phones) ಯಾವುವು ಎಂದು ನೀವು ಎಂದಾದರೂ ಯೋಚಿಸಿದ್ದರೆ ಅದರಲ್ಲೂ ನೀವು ಬಳಸುತ್ತಿರುವ ಫೋನ್ ಈ ಪಟ್ಟಿಗೆ ಸೇರಿದ್ಯಾ ಇಲ್ವಾ ಅನ್ನೋದನ್ನ ತಿಳಿಯಿರಿ.
10ನೇ ಸ್ಥಾನದಲ್ಲಿ ಆಪಲ್ ಕಂಪನಿಯ ಜನಪ್ರಿಯ iPhone 11 ಹೊಂದಿದ್ದು ಕಳೆದ ನಾಲ್ಕು ವರ್ಷ ಹಳೆಯ ಐಫೋನ್ ಮಾಡೆಲ್ ಇಂದಿಗೂ ಸಹ ಅದ್ದೂರಿಯಾಗಿ ಮಾರಾಟವಾಗುತ್ತಿದೆ. ಎಡಕ್ಕೆ ಮೂಲ ಕಾರಣ ಮೊದಲ ಬಾರಿಗೆ ಐಫೋನ್ ಪಡೆಯುವವರು ಹೆಚ್ಚಾಗಿ ಈ ಮಾಡೆಲ್ ಮೊರೆ ಹೋಗುತ್ತಿದ್ದಾರೆ ಇದಕ್ಕೆ ಮತ್ತೊಂದು ಕಾರಣ ಅಂದ್ರೆ ಕೈಗೆಟಕುವ ಬೆಲೆಗೆ ಈ ಫೋನ್ ಪಡೆದುಕೊಳ್ಳಬಹುದು. ಅಲ್ಲದೆ ಈ ಫೋನ್ ಬಿಡುಗಡೆಯಾದ ಮೊದಲ 6 ತಿಂಗಳಲ್ಲಿ 6.9 ಮಿಲಿಯನ್ ಯುನಿಟ್ ಮಾರಾಟವನ್ನು ಕಂಡಿದೆ. Apple iPhone 11 (64GB) – White ಇಂದಿನ ಅಮೆಜಾನ್ ಬೆಲೆ ₹37,999 ರೂಗಳಾಗಿದೆ.
ಇದರ ನಂತರ 9ನೇ ಸ್ಥಾನದಲ್ಲಿ Samsung Galaxy A34 5G ಆಗಿದೆ. ಏಕೆಂದರೆ ಈ ಸ್ಯಾಮ್‌ಸಂಗ್ ಸ್ಮಾರ್ಟ್ಫೋನ್ ಬಿಡುಗಡೆಯಾದ ಮೊದಲಾರ್ಧದಲ್ಲಿ ಸುಮಾರು 7.1 ಮಿಲಿಯನ್ ಯುನಿಟ್‌ಗಳೊಂದಿಗೆ ಜಾಗತಿಕವಾಗಿ ಅತಿ ಹೆಚ್ಚು ಮಾರಾಟವಾಗಿ ಒಂಬತ್ತನೇ ಹೆಚ್ಚು ರವಾನೆಯಾದ ಸ್ಮಾರ್ಟ್‌ಫೋನ್ ವೇದಿಕೆಗೆ ಏರಿದೆ. Samsung Galaxy A34 5G (2023) ಇಂದಿನ ಅಮೆಜಾನ್ ಬೆಲೆ ₹30,999 ರೂಗಳಾಗಿದೆ.
ಈ ಪಟ್ಟಿಯ 8ನೇ ಸ್ಥಾನದ ಸ್ಯಾಮ್‌ಸಂಗ್ ಸ್ಮಾರ್ಟ್ಫೋನ್ Samsung Galaxy A54 5G ಆಗಿದ್ದು ಮೊದಲ ಆರು ತಿಂಗಳಲ್ಲಿ 8.8 ಮಿಲಿಯನ್ ಯುನಿಟ್ ಸಾಗಣೆಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಇದರೊಂದಿಗೆ ಈ ಸ್ಮಾರ್ಟ್ಫೋನ್ ಕ್ಯಾಮೆರಾ ಸೆನ್ಸರ್ ಬಜೆಟ್ ಒಳಗೆ ಲಭ್ಯವಿದ್ದು Samsung Galaxy A54 5G ಇಂದಿನ ಅಮೆಜಾನ್ ಬೆಲೆ ₹38,999 ರೂಗಳಾಗಿದೆ.
ಇದರ ನಂತರ ಮತ್ತೇ ಅದೇ ಸ್ಯಾಮ್‌ಸಂಗ್ ಬ್ರಾಂಡ್ Samsung Galaxy A14 5G ಏಳನೇ ಸ್ಥಾನವನ್ನು ಪಡೆದಿದ್ದು ವರದಿಯ ಪ್ರಕಾರ ಸ್ಯಾಮ್‌ಸಂಗ್ 9.0 ಮಿಲಿಯನ್ ಯುನಿಟ್‌ಗಳನ್ನು ರವಾನಿಸಿದೆ ಎಂದು ವರದಿಯಾಗಿದೆ. ಇದರಲ್ಲಿ ಮಧ್ಯಮ-ಶ್ರೇಣಿಯ Exynos ಚಿಪ್‌ಸೆಟ್, 5000mAh ಬ್ಯಾಟರಿ, 90Hz ರಿಫ್ರೆಶ್ ರೇಟ್ ಸ್ಕ್ರೀನ್ ಮತ್ತು 50MP ಪ್ರೈಮರಿ ಕ್ಯಾಮರಾ ನಿಜಕ್ಕೂ ಉತ್ತಮವಾಗಿದೆ. Samsung Galaxy A14 5G ಇಂದಿನ ಅಮೆಜಾನ್ ಬೆಲೆ ₹15,999 ರೂಗಳಾಗಿದೆ.
ಈ ಪಟ್ಟಿಯ ಆರನೇ ಸ್ಥಾನಕ್ಕೆ ಏರಿರುವ Samsung Galaxy S23 Ultra ಸ್ಮಾರ್ಟ್ಫೋನ್ ಈ 2023 ವರ್ಷದ ಮೊದಲಾರ್ಧದಲ್ಲಿ ಜಾಗತಿಕವಾಗಿ ಸುಮಾರು 9.6 ಮಿಲಿಯನ್ ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ಕ್ಯಾಮೆರಾದ ಜೂಮ್ ಫೀಚರ್ ಮೇರೆಗೆ ಆಡ್ರಾಯ್ಡ್ ಮಾರುಕಟ್ಟೆಯಲ್ಲಿ ಹೆಚ್ಚು ಆಕರ್ಷಕವಾಗಿದೆ. Samsung Galaxy S23 Ultra ಇಂದಿನ ಅಮೆಜಾನ್ ಬೆಲೆ ₹1,24,999 ರೂಗಳಾಗಿದೆ.
ಇದರ ನಂತರ ಐದನೇ ಸ್ಥಾನಕ್ಕೆ Xiaomi ಕಂಪನಿ ಜನಪ್ರಿಯ Xiaomi Redmi Note 11 ತನ್ನ ಜಾಗವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್ಫೋನ್ ಕಳೆದ ವರ್ಷ ಜನವರಿಯಲ್ಲಿ ಬಿಡುಗಡೆಯಾಗಿದ್ದು ಈವರೆಗೆ ಸುಮಾರು 7.6 ಮಿಲಿಯನ್ ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯನ್ನು ಕಂಡಿದೆ. Xiaomi Redmi Note 11 (4GB RAM) ಇಂದಿನ ಫ್ಲಿಪ್ಕಾರ್ಟ್ ಬೆಲೆ ₹12,970 ರೂಗಳಾಗಿದೆ.
ಈ ಪಟ್ಟಿಯ ವಿಶ್ವದ ನಾಲ್ಕನೇ ಅತಿ ಹೆಚ್ಚು ಮಾರಾಟ ಮತ್ತು ಜನಪ್ರಿಯವಾಗಿರುವ ಫೋನ್ ಅಂದ್ರೆ iPhone 13 ಆಗಿದೆ. ಈ ಫೋನ್ 2021 ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿದ್ದು ಮೊದಲಾರ್ಧದಲ್ಲಿ 15.5 ಮಿಲಿಯನ್ ಯುನಿಟ್‌ಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿದೆ. ಇದೊಂದು ಅತ್ಯುತ್ತಮ ಲೇಟೆಸ್ಟ್ ಫೀಚರ್ಗಳೊಂದಿಗೆ ನಿಮಗೆ ಐಫೋನ್ ಟಚ್ ನೀಡಲು ಹೆಸರುವಾಸಿಯಾಗಿದೆ. Apple iPhone 13 (128GB) – Blue ಇಂದಿನ ಅಮೆಜಾನ್ ಬೆಲೆ ₹58,999 ರೂಗಳಾಗಿದೆ.
ಈಗ ಈ ಪಟ್ಟಿಯ ಮೂರನೇ ಅತಿದೊಡ್ಡ ಮಾರಾಟ ಮತ್ತು ಜನಪ್ರಿಯತೆಯನ್ನು ಹೊಂದಿರುವ ಫೋನ್ ಅಂದ್ರೆ Apple iPhone 14 ಹೊಂದಿರುವ ಮಾದರಿಯು iPhone 14 ಆಗಿದೆ. ಇದು ಆಪಲ್‌ನ ಮೂರನೇ 14 ಸರಣಿಯ ಮಾದರಿಯಾಗಿ ತ್ರೈಮಾಸಿಕದಲ್ಲಿ ಟಾಪ್ 10 ಶ್ರೇಯಾಂಕವನ್ನು ಮಾಡಿದೆ. Apple iPhone 13 (128GB) – Blue ಇಂದಿನ ಅಮೆಜಾನ್ ಬೆಲೆ ₹66,999 ರೂಗಳಾಗಿದೆ.
ವಿಶ್ವದ 10 ಜನಪ್ರಿಯ ಮೊಬೈಲ್ ಫೋನ್‌ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಮೊಬೈಲ್ ಫೋನ್ ಅಂದ್ರೆ Apple iPhone 14 Pro ಆಗಿದೆ. ಕಳೆದ ವರ್ಷ ಬಿಡುಗಡೆಯಾಗಿರುವ ಈ ಫೋನ್ ಈವರೆಗೆ ಸುಮಾರು 21.0 ಮಿಲಿಯನ್ ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯನ್ನು ಕಂಡಿದೆ. Apple iPhone 14 Pro (128 GB) ಇಂದಿನ ಅಮೆಜಾನ್ ಬೆಲೆ ₹1,19,990 ರೂಗಳಾಗಿದೆ.
ಕೊನೆಯಾದಾಗಿ ಮೊದಲ ಸ್ಥಾನದಲ್ಲಿರುವ ವಿಶ್ವದಲ್ಲೇ ಅತಿ ಹೆಚ್ಚಾಗಿ ಜನಪ್ರಿಯತೆಯನ್ನು ಹೊಂದಿರುವ ಮತ್ತು ಹೆಚ್ಚು ಮಾರಾಟವಾಗುತ್ತಿರುವ ಫೋನ್ ಅಂದ್ರೆ Apple iPhone 14 Pro Max ಈ ಫೋನ್ ವಿಶ್ವದಾದ್ಯಂತ ಆಪಲ್ ಒಟ್ಟು 26.5 ಮಿಲಿಯನ್ ಯುನಿಟ್‌ಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿದೆ. ಇದೊಂದು ಅತ್ಯುತ್ತಮ ಲೇಟೆಸ್ಟ್ ಫೀಚರ್ಗಳೊಂದಿಗೆ ನಿಮಗೆ ಐಫೋನ್ ಟಚ್ ನೀಡಲು ಹೆಸರುವಾಸಿಯಾಗಿದೆ. Apple iPhone 14 Pro (128 GB) ಇಂದಿನ ಅಮೆಜಾನ್ ಬೆಲೆ ₹1,27,999 ರೂಗಳಾಗಿದೆ.